ETV Bharat / technology

ಮಾರಾಟದಲ್ಲಿ ಟಿವಿಎಸ್ ಐಕ್ಯೂಬ್ ಹಿಂದಿಕ್ಕಿ ಮುನ್ನಡೆಯುತ್ತಿದೆ ಬಜಾಜ್​ ಚೇತಕ್​ - ಓಲಾ ನಂ.1! - Bajaj Chetak Overtake TVS Iqube - BAJAJ CHETAK OVERTAKE TVS IQUBE

Bajaj Chetak Overtake TVS Iqube: ಪ್ರಸ್ತುತ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತಮ ಬೇಡಿಕೆಯಿದೆ. ಇದರೊಂದಿಗೆ ಎಲೆಕ್ಟ್ರಿಕ್ ವಾಹನಗಳ ದೈತ್ಯ ಕಂಪನಿಗಳ ನಡುವಿನ ಪೈಪೋಟಿ ಕ್ರಮೇಣ ಹೆಚ್ಚುತ್ತಿದೆ. ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಬಜಾಜ್ ಚೇತಕ್ ಮತ್ತು ಟಿವಿಎಸ್ ಐಕ್ಯೂಬ್ ನಡುವೆ ಕಠಿಣ ಸ್ಪರ್ಧೆಯಿದೆ. ಟಿವಿಎಸ್ ಐಕ್ಯೂಬ್ ಸೆಪ್ಟೆಂಬರ್ ಮಾರಾಟದಲ್ಲಿ ಬಜಾಜ್ ಚೇತಕ್ ಮೀರಿಸಿದೆ.

TVS IQUBE VS BAJAJ CHETAK PRICE  TVS IQUBE VS BAJAJ CHETAK  EV SALES IN INDIA  ELECTRIC VEHICLES IN INDIA
ಮಾರಾಟದಲ್ಲಿ ಟಿವಿಎಸ್ ಐಕ್ಯೂಬ್​ನ್ನು ಹಿಂದಿಕ್ಕಿ ಮುನ್ನಡೆ ಸಾಗುತ್ತಿದೆ ಬಜಾಜ್​ ಚೇತಕ್ (BAJAJ CHETAK)
author img

By ETV Bharat Tech Team

Published : Oct 3, 2024, 7:36 AM IST

Updated : Oct 3, 2024, 10:17 AM IST

Bajaj Chetak Overtake TVS Iqube: ಹೆಚ್ಚುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ಮತ್ತು ಪರಿಸರ ಹಾನಿಯಿಂದಾಗಿ ವಾಹನ ಸವಾರರು ಈಗ ಎಲೆಕ್ಟ್ರಿಕ್ ವಾಹನಗಳ ಖರೀದಿಯತ್ತ ವಾಲುತ್ತಿದ್ದಾರೆ. ಇದರಿಂದಾಗಿ ಕಳೆದ ಕೆಲವು ವರ್ಷಗಳಿಂದ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆ ಮುಂಚೂಣಿಯಲ್ಲಿರುವ ಕಂಪನಿಗಳ ಜತೆಗೆ ಹೊಸ ಸ್ಟಾರ್ಟ್ ಅಪ್ ಕಂಪನಿಗಳೂ ಕಾಲಕಾಲಕ್ಕೆ ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಲು ಆಸಕ್ತಿ ತೋರಿಸುತ್ತಿವೆ. ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡುವುದು ಮತ್ತು ಮಾಲಿನ್ಯ ಕಡಿಮೆ ಮಾಡಲು ಕಂಪನಿಗಳಿಗೆ ಸಬ್ಸಿಡಿಗಳು ಇವಿಗಳ ಬೆಳವಣಿಗೆಗೆ ಕೊಡುಗೆ ನೀಡಿವೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ದೈತ್ಯ ಕಂಪನಿಗಳ ನಡುವಿನ ಪೈಪೋಟಿ ಕ್ರಮೇಣ ಹೆಚ್ಚುತ್ತಿದೆ. ಇವಿ ಮಾರಾಟದಲ್ಲಿ ಅವರು ಕ್ರಮೇಣ ತಮ್ಮ ಮಾರುಕಟ್ಟೆ ಪಾಲನ್ನು ಹೆಚ್ಚಿಸುತ್ತಿದ್ದಾರೆ. ವಿಶೇಷವಾಗಿ ಟಿವಿಎಸ್ ಮತ್ತು ಬಜಾಜ್ ಕಂಪನಿಗಳ ನಡುವೆ ಈ ವಿಷಯದಲ್ಲಿ ಕಠಿಣ ಪೈಪೋಟಿ ಇದೆ. ಹಲವು ವರ್ಷಗಳ ಕಾಲ ಓಲಾ ನಂತರ ಟಿವಿಎಸ್ ಎರಡನೇ ಸ್ಥಾನದಲ್ಲಿತ್ತು. ಆದರೆ, ಸೆಪ್ಟೆಂಬರ್‌ನಲ್ಲಿ ಬಜಾಜ್ ಚೇತಕ್ ಆ ಸ್ಥಾನವನ್ನು ಪಡೆದುಕೊಂಡಿತು. ಮತ್ತೊಂದೆಡೆ, ಓಲಾ ಎಲೆಕ್ಟ್ರಿಕ್ ಅತ್ಯಧಿಕ ಮಾರಾಟದೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಆದರೆ, ಅದರ ಮಾರುಕಟ್ಟೆ ಪಾಲು ಕುಸಿಯುತ್ತಿದೆ.

ಅಗ್ರಸ್ಥಾನದಲ್ಲಿ ಓಲಾ: ಓಲಾ ಸೆಪ್ಟೆಂಬರ್ ತಿಂಗಳಿನಲ್ಲಿ 23,965 ಯುನಿಟ್‌ಗಳ ಮಾರಾಟದೊಂದಿಗೆ ವಾಹನ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ, ಒಂದು ಕಾಲದಲ್ಲಿ ತಿಂಗಳಿಗೆ ಸರಾಸರಿ 30 ಸಾವಿರ ಯೂನಿಟ್ ವಾಹನಗಳನ್ನು ಮಾರಾಟ ಮಾಡುತ್ತಿದ್ದ ಓಲಾ ಮಾರುಕಟ್ಟೆ ಪಾಲು ಇತ್ತೀಚೆಗೆ ಶೇ.27ಕ್ಕೆ ಕುಸಿದಿದೆ. ಬಜಾಜ್ ಆಟೋ ತನ್ನ ಮಾರಾಟವನ್ನು ಹೆಚ್ಚಿಸುತ್ತಿದೆ. 18,933 ಚೇತಕ್‌ಗಳನ್ನು ಮಾರಾಟ ಮಾಡಿ ಎರಡನೇ ಸ್ಥಾನ ಪಡೆದಿದೆ. ಟಿವಿಎಸ್ ಐಕ್ಯೂಬ್‌ನ 17,865 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟಪ್ ಕಂಪನಿಗಳು.. ಈಥರ್ ಮತ್ತು ಹೀರೋ ಮೊಟೊಕಾರ್ಪ್ ಬ್ರಾಂಡ್‌ಗಳು ನಂತರದ ಸ್ಥಾನಗಳಲ್ಲಿವೆ.

ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಮುನ್ನಡೆ: ಓಲಾ ಕಡಿಮೆ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳೊಂದಿಗೆ ಸ್ಕೂಟರ್‌ಗಳನ್ನು ನೀಡುವ ಮೂಲಕ ವರ್ಷಗಳಿಂದ ಎಲೆಕ್ಟ್ರಿಕ್ ಮಾರುಕಟ್ಟೆಯನ್ನು ಮುನ್ನಡೆಸುತ್ತಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಸ್ಥಾನವು ಇನ್ನೂ ಪ್ರಬಲವಾಗಿದ್ದರೂ ಬಜಾಜ್ ಆಟೋ ಮತ್ತು ಟಿವಿಎಸ್‌ನ ಪೈಪೋಟಿಯಿಂದಾಗಿ ಕಂಪನಿಯ ಮಾರುಕಟ್ಟೆ ಪಾಲು ಕ್ರಮೇಣ ಕುಸಿಯುತ್ತಿದೆ. ಓಲಾಗೆ ಪೈಪೋಟಿ ನೀಡಲು, ಟಿವಿಎಸ್ ಮತ್ತು ಬಜಾಜ್ ಈ ಎರಡು ಕಂಪನಿಗಳು ಚೇತಕ್ ಮತ್ತು ಐಕ್ಯೂಬ್ ಮಾದರಿಗಳನ್ನು ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ತಂದಿರುವುದು ಗಮನಾರ್ಹ.

ಇನ್ನು ಓಲಾ ಸೇವಾ ಕೇಂದ್ರಗಳ ಬಗ್ಗೆ ಗ್ರಾಹಕರ ಅಸಮಾಧಾನ. ಬಜಾಜ್ ಮತ್ತು ಟಿವಿಎಸ್ ಈಗಾಗಲೇ ವ್ಯಾಪಕ ನೆಟ್‌ವರ್ಕ್ ಹೊಂದಿವೆ. ಹೀರೊ ಮೋಟೊಕಾರ್ಪ್ ಕೂಡ ವಿಡಾ ಹೆಸರಿನಲ್ಲಿ ಇವಿ ರೇಸ್‌ಗೆ ಪ್ರವೇಶಿಸಿದ್ದರೂ, ಸ್ವಲ್ಪ ವಿಳಂಬದಿಂದ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಇದು ಸತತವಾಗಿ 4 ಸಾವಿರ ಯೂನಿಟ್‌ಗಳ ಮಾರಾಟವನ್ನು ದಾಖಲಿಸುತ್ತಿದೆ.

ಓದಿ: ಬಾನಂಗಳದಲ್ಲಿ ಚಮತ್ಕಾರ ಮೂಡಿಸಲು ವಾಯುಪಡೆ ಸಜ್ಜು!: ಸಾಹಸ ನೋಡಲು ನೀವು ಸಿದ್ಧರಿದ್ದೀರಾ? - IAF AIR SHOW 2024

Last Updated : Oct 3, 2024, 10:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.