ETV Bharat / technology

ಡಿಜಿಟಲ್​ ಪೇಮೆಂಟ್ಸ್​ನಲ್ಲಿ ಕಾಂತ್ರಿಕಾರಿ ಬೆಳವಣಿಗೆ: ಈ ಬಾರಿ ಎಷ್ಟು ಲಕ್ಷ ಕೋಟಿ ವಹಿವಾಟಾಗಿದೆ ಗೊತ್ತಾ!? - HUGE INCREASE IN UPI PAYMENTS

UPI payments: ಜನರು ಈಗ ಆನ್​ಲೈನ್​ ವಹಿವಾಟು ನಡೆಸಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ತಿಂಗಳಿನಿಂದ ತಿಂಗಳಿಗೆ ವಹಿವಾಟು ಬಹು ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಇದಕ್ಕೆ ಕಾರಣ ಡಿಜಿಟಲ್​ ಪೇಮೆಂಟ್​ನಲ್ಲಿ ಆದ ಕ್ರಾಂತಿಕಾರಿ ಬದಲಾವಣೆ.

UPI TRANSACTIONS  UPI PAYMENTS  UPA PAYMENTS INCREASE  DIGITAL PAYMENTS
ಡಿಜಿಟಲ್​ ಪೇಮೆಂಟ್ಸ್​ನತ್ತ ವಾಲುತ್ತಿರುವ ಜನ (IANS)
author img

By ETV Bharat Tech Team

Published : Oct 3, 2024, 11:51 AM IST

Huge increase in UPI payments: ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಮೂಲಕ ವಹಿವಾಟಿನ ಮೌಲ್ಯವು ಸೆಪ್ಟೆಂಬರ್‌ನಲ್ಲಿ ವಾರ್ಷಿಕ ಆಧಾರದ ಮೇಲೆ 31 ಪ್ರತಿಶತದಷ್ಟು ಏರಿಕೆ ಕಂಡಿದ್ದು, ಒಟ್ಟು 20.64 ಲಕ್ಷ ಕೋಟಿ ರೂ. ವಹಿವಾಟು ನಡೆಸಿದೆ. ಈ ಅವಧಿಯಲ್ಲಿ ವಹಿವಾಟುಗಳ ಸಂಖ್ಯೆಯು ವಾರ್ಷಿಕ ಆಧಾರದ ಮೇಲೆ 42 ಪ್ರತಿಶತದಷ್ಟು ಎಂದರೆ 15.04 ಶತಕೋಟಿಗೆ ಏರಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಮಾಹಿತಿ ನೀಡಿದೆ.

NPCI ಡೇಟಾ ಪ್ರಕಾರ, ಕಳೆದ ತಿಂಗಳು UPI ನಲ್ಲಿ ದಿನಕ್ಕೆ 50.1 ಕೋಟಿ ವಹಿವಾಟುಗಳು ನಡೆದಿವೆ. ಆಗಸ್ಟ್‌ನಲ್ಲಿ ಈ ಸಂಖ್ಯೆ 48.3 ಕೋಟಿಯಷ್ಟಿತ್ತು. ಈ ಅವಧಿಯಲ್ಲಿ ಪ್ರತಿದಿನ ಸರಾಸರಿ 68,800 ಕೋಟಿ ರೂ.ಗಳ ವಹಿವಾಟು ಯುಪಿಐನಲ್ಲಿ ನಡೆದಿದೆ. ಆಗಸ್ಟ್‌ನಲ್ಲಿ ಈ ಸಂಖ್ಯೆ 66,475 ಕೋಟಿ ರೂ. ವಹಿವಾಟು ನಡೆದಿದೆ. ಮಾಸಿಕ UPI ವಹಿವಾಟಿನ ಮೌಲ್ಯವು 20 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಇದು ಸತತ ಐದನೇ ತಿಂಗಳಾಗಿದೆ.

ಸೆಪ್ಟೆಂಬರ್​ನಲ್ಲಿ 10ಕೋಟಿ ವಹಿವಾಟು: ಸೆಪ್ಟೆಂಬರ್‌ನಲ್ಲಿ ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ (ಎಇಪಿಎಸ್) ಮೂಲಕ ಸುಮಾರು 10 ಕೋಟಿ ವಹಿವಾಟು ನಡೆಸಲಾಗಿದ್ದು, ಅವುಗಳ ಮೌಲ್ಯ 24,143 ಕೋಟಿ ರೂ.ಗೆ ಏರಿದೆ. ಸೆಪ್ಟೆಂಬರ್‌ನಲ್ಲಿ ತಕ್ಷಣದ ಪಾವತಿ ಸೇವೆ (IMPS) ಮೂಲಕ 5.65 ಲಕ್ಷ ಕೋಟಿ ಮೌಲ್ಯದ ವಹಿವಾಟು ನಡೆಸಲಾಗಿದೆ. ಇದು ವಾರ್ಷಿಕವಾಗಿ ಶೇ.11ರಷ್ಟು ಹೆಚ್ಚಳವಾಗಿದೆ. ಕಳೆದ ತಿಂಗಳು, ದಿನಕ್ಕೆ ಸರಾಸರಿ 1.4 ಕೋಟಿ IMPS ವಹಿವಾಟುಗಳು ನಡೆದಿವೆ ಮತ್ತು ಅವುಗಳ ಸರಾಸರಿ ದೈನಂದಿನ ಮೌಲ್ಯ 18,841 ಕೋಟಿ ರೂ. ಆಗಿದೆ.

ಸೆಪ್ಟೆಂಬರ್‌ನಲ್ಲಿ ಫಾಸ್ಟ್‌ಟ್ಯಾಗ್‌ನಲ್ಲಿ 31.8 ಕೋಟಿ ವಹಿವಾಟು ನಡೆದಿದೆ. 7ರಷ್ಟು ಏರಿಕೆಯಾಗಿದೆ. ಈ ಅವಧಿಯಲ್ಲಿ ಫಾಸ್ಟ್ಯಾಗ್‌ನಲ್ಲಿ 5,620 ಕೋಟಿ ರೂ. ಸಂಗ್ರಹವಾಗಿದ್ದು, ವಾರ್ಷಿಕವಾಗಿ ಶೇ.10ರಷ್ಟು ಹೆಚ್ಚಳವಾಗಿದೆ.

ಉದ್ಯಮದ ತಜ್ಞರ ಪ್ರಕಾರ ಸೆಪ್ಟೆಂಬರ್‌ನ UPI ಡೇಟಾವು ದೇಶದಲ್ಲಿ ಡಿಜಿಟಲ್ ವಹಿವಾಟುಗಳು ವೇಗವಾಗಿ ಹೆಚ್ಚುತ್ತಿದೆ ಎಂದು ತೋರಿಸುತ್ತದೆ. ಈ ಡೇಟಾವು ಉತ್ತಮವಾಗಿದೆ ಎಂದು ವರ್ಲ್ಡ್‌ಲೈನ್ ಇಂಡಿಯಾದ ಇನ್ನೋವೇಶನ್, ಸ್ಟ್ರಾಟಜಿ ಮತ್ತು ಅನಾಲಿಟಿಕ್ಸ್ ಮುಖ್ಯಸ್ಥ ಸುನಿಲ್ ರೋಂಗ್ಲಾ ಹೇಳಿದ್ದಾರೆ. ಜುಲೈನಿಂದ ಸೆಪ್ಟೆಂಬರ್‌ವರೆಗೆ UPI ವಹಿವಾಟುಗಳ ಮೌಲ್ಯವು 20.64 ಲಕ್ಷ ಕೋಟಿ ರೂ.ಗಿಂತ ಹೆಚ್ಚಿದೆ. ಆದರೆ, ವಹಿವಾಟಿನ ಸಂಖ್ಯೆಯು 14.44 ಶತಕೋಟಿಯಿಂದ 15.04 ಶತಕೋಟಿಗೆ ಏರಿದೆ. ಇದು ಜನರು ಮೊದಲಿಗಿಂತ ಹೆಚ್ಚು UPI ಅನ್ನು ಹೆಚ್ಚು ಬಳಸುವುದಕ್ಕೆ ಸಿದ್ಧರಿದ್ದಾರೆ ಎಂದು ತೋರಿಸುತ್ತದೆ.

ಓದಿ: ಪ್ರೀತಿ​, ಹರಟೆ, ಮಜಾ, ಸುಖ - ದುಃಖದಲ್ಲಿ ಭಾಗಿಯಾಗಲಿದ್ದಾನೆ ಡಿಜಿಟಲ್​ ಗೆಳೆಯ - Digital Friend Benefits

ETV Bharat Logo

Copyright © 2024 Ushodaya Enterprises Pvt. Ltd., All Rights Reserved.