Whatsapp New Video Calls Features: ಪ್ರಸ್ತುತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ಜನರ ಜೀವನದ ಪ್ರಮುಖ ಭಾಗವಾಗಿದೆ. ವಾಟ್ಸ್ಆ್ಯಪ್ ಧ್ವನಿ ಮತ್ತು ವಿಡಿಯೋ ಕರೆ ಮಾಡುವ ವೈಶಿಷ್ಟ್ಯವನ್ನು ಪರಿಚಯಿಸಿದ ನಂತರ ಸಂವಹನ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯಾಗಿದೆ ಎಂದು ಹೇಳಬಹುದು. ಕಾಲಕಾಲಕ್ಕೆ ವಾಟ್ಸ್ಆ್ಯಪ್ ಧ್ವನಿ ಕರೆಗಳು ಮತ್ತು ವಿಡಿಯೋ ಕರೆಗಳಿಗೆ ಸಂಬಂಧಿಸಿದ ಹೊಸ ವೈಶಿಷ್ಟ್ಯಗಳನ್ನು ಅಪ್ಡೇಟ್ ಮಾಡುತ್ತಲೇ ಇರುತ್ತದೆ. ಈ ಕ್ರಮದಲ್ಲಿ ಮತ್ತೊಂದು ಹೊಸ ಫೀಚರ್ ತರಲು ವಾಟ್ಸ್ಆ್ಯಪ್ ಸಿದ್ಧವಾಗಿದೆ.
ವಿಡಿಯೋ ಕರೆ ಸಮಯದಲ್ಲಿ ಗ್ರಾಹಕರಿಗೆ ಉತ್ತಮ ಅನುಭವವನ್ನು ಒದಗಿಸಲು ಈ ವೈಶಿಷ್ಟ್ಯ ಸಹಾಯ ಮಾಡುತ್ತದೆ. ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಈ ವೈಶಿಷ್ಟ್ಯದ ಬಳಕೆಯನ್ನು ತಮ್ಮ ವಾಟ್ಸ್ಆ್ಯಪ್ ಚಾನೆಲ್ ಮೂಲಕ ಬಹಿರಂಗಪಡಿಸಿದ್ದಾರೆ. ಲಭ್ಯವಿರುವ ವಿವಿಧ ರೀತಿಯ ಹೊಸ ಫಿಲ್ಟರ್‌ಗಳನ್ನು ಬಳಸುವ ಫೋಟೋಗಳನ್ನು ಫಾಲೋವರ್ ಜೊತೆ ಹಂಚಿಕೊಂಡಿದ್ದಾರೆ. ಈ ವೈಶಿಷ್ಟ್ಯವೇನು? ಇದು ಹೇಗೆ ಉಪಯುಕ್ತವಾಗಿದೆ? ಅದು ಯಾವಾಗ ಲಭ್ಯವಾಗುತ್ತದೆ? ಎಂಬ ಇತ್ಯಾದಿ ವಿವರಗಳ ಬಗ್ಗೆ ತಿಳಿದುಕೊಳ್ಳೋಣ.
ವಾಟ್ಸ್ಆ್ಯಪ್ ಹೊಸ ವೈಶಿಷ್ಟ್ಯಗಳು:
- ವಾಟ್ಸ್ಆ್ಯಪ್ನ ಈ ಹೊಸ ವೈಶಿಷ್ಟ್ಯದ ಸಹಾಯದಿಂದ ವಿಡಿಯೋ ಕರೆ ವೇಳೆ ನಮಗೆ ಇಷ್ಟವಾದಂತೆ ಸ್ಕ್ರೀನ್ ಬದಲಾಯಿಸುವ ಅವಕಾಶವನ್ನು ನಾವು ಹೊಂದಿದ್ದೇವೆ.
- ಅಂದರೆ ವಿಡಿಯೋ ಕರೆಗಳ ಸಮಯದಲ್ಲಿ ನಾವು ಫಿಲ್ಟರ್‌ಗಳು ಮತ್ತು ನಮ್ಮ ಆಯ್ಕೆಯ ಥೀಮ್ ಅನ್ನು ಬ್ಯಾಕ್ಗ್ರೌಂಡ್ನಲ್ಲಿ ಚೇಂಜ್ ಮಾಡಬಹುದಾಗಿದೆ.
- ನಿಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ವಿಡಿಯೋ ಕರೆ ಮಾಡುವಾಗ ನಿಮ್ಮ ಮನಸ್ಥಿತಿಗೆ ಸರಿಹೊಂದುವಂತೆ ನೀವು ಬ್ಯಾಕ್ಗ್ರೌಂಡ್ ಅನ್ನು ಸೆಟ್ ಮಾಡಬಹುದು.
- ಉದಾಹರಣೆಗೆ, ನೀವು ವಿಡಿಯೋ ಕರೆಯಲ್ಲಿದ್ದರೆ ನೀವು ಬ್ಯಾಕ್ಗ್ರೌಂಡ್ ಅನ್ನು ಬಿಡುವಿಲ್ಲದ ಕೆಫೆ ಅಥವಾ ಬೀಚ್‌ಗೆ ಬದಲಾಯಿಸಬಹುದು.
- ಇದರಲ್ಲಿ ನೀವು ಬ್ಲರ್ ಮಾಡಬಹುದಾದ ಪರಿಣಾಮದಂತಹ ಆಯ್ಕೆಗಳಿವೆ.
- ಒಟ್ಟು 10 ವಿಭಿನ್ನ ಬ್ಯಾಕ್ಗ್ರೌಂಡ್ ಬದಲಾಯಿಸುವ ಆಯ್ಕೆಗಳಿವೆ.
- ಗೌಪ್ಯತೆಯನ್ನು ರಕ್ಷಿಸಲು ಸೊಗಸಾದ ಬ್ಯಾಕ್ಗ್ರೌಂಡ್ ಸಹ ನೀವು ಬದಲಾಯಿಸಬಹುದಾಗಿದೆ.
- ಇದರಲ್ಲಿ ವಾರ್ಮ್, ಕೂಲ್, ಬ್ಲಾಕ್ ಅಂಡ್ ವೈಟ್, ಡ್ರೀಮಿ ಹೀಗೆ 10 ಬಗೆಯ ಫಿಲ್ಟರ್‌ಗಳು ಲಭ್ಯ.
- ಈ ಹೊಸ ವೈಶಿಷ್ಟ್ಯವು ವಿಡಿಯೋ ಕರೆಗಳ ಸಮಯದಲ್ಲಿ ನಿಮ್ಮ ಸಂಭಾಷಣೆಗಳನ್ನು ಹೆಚ್ಚು ತೊಡಗಿಸಿಕೊಳ್ಳಲು ಸಹಾಯ ಮಾಡಬಹದು.
ಈ ವೈಶಿಷ್ಟ್ಯವು ಯಾವಾಗ ಲಭ್ಯ?:
- ಈ ಹೊಸ ವೈಶಿಷ್ಟ್ಯವು ಇನ್ನೂ ಅಭಿವೃದ್ಧಿ ಹಂತದಲ್ಲಿದೆ ಎಂದು Wabita Info ತನ್ನ ಬ್ಲಾಗ್‌ನಲ್ಲಿ ಹಂಚಿಕೊಂಡಿದೆ.
- ಈ ವೈಶಿಷ್ಟ್ಯವು ಬೀಟಾ ಬಳಕೆದಾರರಿಗೆ ಕೆಲವೇ ವಾರಗಳಲ್ಲಿ ಲಭ್ಯವಾಗಲಿದೆ.
- ಇದನ್ನು ಬಹಿರಂಗಪಡಿಸಿದ ಕಂಪನಿ ಇದಕ್ಕೆ ಸಂಬಂಧಿಸಿದ ಸ್ಕ್ರೀನ್‌ಶಾಟ್ ಸಹ ಹಂಚಿಕೊಂಡಿದ್ದಾರೆ.