ಹೈದರಾಬಾದ್: ಭಾನುವಾರ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಡಬಲ್ ಮನೊರಂಜನೆ ಪಡೆಯಲಿದ್ದಾರೆ. ಏಕೆಂದರೆ ಒಂದೇ ದಿನ ಟೀಮ್ ಇಂಡಿಯಾ ಎರಡು ಟಿ20 ಪಂದ್ಯಗಳನ್ನು ಆಡಲಿದೆ. ಹೌದು, ನಾಳೆ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಮಹಿಳಾ ತಂಡ ಕಣಕ್ಕಿಳಿಯಲಿದ್ದು, ಅದೇ ದಿನ ಭಾರತ ಪುರುಷರ ತಂಡ ಕೂಡ ಟಿ20 ಪಂದ್ಯವನ್ನು ಆಡಲಿದೆ. ಹಾಗಾದ್ರೆ ಬನ್ನಿ ಯಾರ ವಿರುದ್ಧ, ಎಷ್ಟು ಗಂಟೆಗೆ, ಮತ್ತು ಎರಡೂ ಪಂದ್ಯಗಳನ್ನು ಉಚಿತವಾಗಿ ಹೇಗೆ ವೀಕ್ಷಿಸುವುದು ಅನ್ನೋದನ್ನು ಈ ಸುದ್ದಿಯಲ್ಲಿ ತಿಳಿದುಕೊಳ್ಳಿ.
ಮಹಿಳಾ ಟಿ20: ನಾಳೆ (ಅ.6) ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಭಾರತದ ವನಿತೆಯರು ಪಾಕಿಸ್ತಾನವನ್ನು ಎದುರಿಸಲಿದ್ದಾರೆ. ಈ ಪಂದ್ಯ ಮಧ್ಯಾಹ್ನ 3ಕ್ಕೆ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಲಿದೆ.
ಪಂದ್ಯ ವೀಕ್ಷಣೆ ಎಲ್ಲಿ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಈ ಪಂದ್ಯ ನೇರಪ್ರಸಾರವಾಗಲಿದ್ದು, ಡಿಸ್ನಿಹಾಟ್ ಸ್ಟಾರ್ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ.
ಎರಡನೇ ಪಂದ್ಯ: ನಾಳೆಯ ಎರಡನೇ ಪಂದ್ಯದಲ್ಲಿ ಭಾರತ ಪುರುಷರ ತಂಡ ಬಾಂಗ್ಲಾದೇಶ ವಿರುದ್ಧ ಸೆಣಸಲಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೂರು T20 ಸರಣಿಯ ಮೊದಲ ಪಂದ್ಯ ಇದಾಗಿದೆ.
ಪಂದ್ಯ ಎಲ್ಲಿ: ಉಭಯ ತಂಡಗಳ ನಡುವಿನ ಮೊದಲ ಟಿ20 ಪಂದ್ಯ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿರುವ ಶ್ರೀಮಂತ್ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಎಷ್ಟು ಗಂಟೆಗೆ: ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.
ನೇರಪ್ರಸಾರ ಎಲ್ಲಿ: ಈ ಪಂದ್ಯವನ್ನು ಸ್ಪೋರ್ಟ್ಸ್ 18 ಚಾನೆಲ್ನಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದ್ದು, OTT ಪ್ಲಾಟ್‌ಫಾರ್ಮ್ ಆದ Jio ಸಿನಿಮಾ ಮತ್ತು ವೆಬ್‌ಸೈಟ್‌ನಲ್ಲಿ ಪಂದ್ಯ ಲೈವ್ ಸ್ಟ್ರೀಮ್ ಆಗಲಿದೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ ಧರಿಸುವ 'ಸನ್ ಗ್ಲಾಸ್' ಬೆಲೆ ಎಷ್ಟು ಗೊತ್ತಾ: ಕೇಳಿದ್ರೆ ದಂಗಾಗ್ತೀರ! - Price of Kohli sunglasses