ಶಿವಮೊಗ್ಗ : ಕಾಂಗ್ರೆಸ್ ಪಾರ್ಟಿಯಿಂದ ಬಿಜೆಪಿಗೆ ಹೋದವರಿಗೆ ಅಲ್ಲಿ ಯಾವುದೇ ಸ್ಥಾನಮಾನ ಇಲ್ಲ. ಬಿಜೆಪಿಗೆ ಹೋದವರನ್ನು ಯೂಸ್ ಅಂಡ್ ಥ್ರೋ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ. ಕೆ ಶಿವಕುಮಾರ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಹೋದವರು ಈಗ ಏನಾಗಿದ್ದಾರೆ. ಅವರು ಯೂಸ್ ಅಂಡ್ ಥ್ರೋ ಆಗಿದ್ದಾರೆ. ನಾನು ಯಾರ ಹೆಸರನ್ನೂ ಹೇಳುವುದಿಲ್ಲ. ಅವರನ್ನು ಯೂಸ್ ಅಂಡ್ ಥ್ರೋ ಮಾಡಿದ್ರು. ಇದು ಎಲ್ಲರಿಗೂ ಈಗ ಗೊತ್ತಾಗುತ್ತಿದೆ. ಈಗ ನಾನು ಹೆಸರುಗಳನ್ನು ಹೇಳೋದಕ್ಕೆ ಹೋಗಲ್ಲ ಎಂದರು.
ಎಲ್ಲರೂ ಸಹ ಮೊದಲಿನಿಂದಲೂ ರಾಜಕೀಯವಾಗಿ ಒಂದು ಸಿದ್ದಾಂತದ ಮೇಲೆ ಬೆಳೆದುಕೊಂಡಿರುತ್ತಾರೆ. ಅದನ್ನ ಎಲ್ಲರಿಗೂ ಒಗ್ಗಲಿಕ್ಕೆ ಸಾಧ್ಯವಿಲ್ಲ ಎಂದರು. ಬಿಜೆಪಿಯ ಒಳಜಗಳದಿಂದ ನಿಮಗೆ ಅನುಕೂಲವಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಯಾರ ಒಳಜಗಳವನ್ನ ಅವಲಂಬಿಸಿಕೊಂಡು ರಾಜಕಾರಣ ಮಾಡುತ್ತಿಲ್ಲ. ನಮ್ಮ ರಾಜಕಾರಣ ಏನಿದ್ದರೂ ಜನರು ನಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು ಹೋಗುವಂತದ್ದಾಗಿದೆ ಎಂದು ಹೇಳಿದರು.
ಅವರ ಒಳಜಗಳ ಮುಚ್ಚಿಕೊಳ್ಳಲು ಆಗಾಗ ನಮ್ಮ ಸರ್ಕಾರದ ಮೇಲೆ ಪ್ರಯೋಗ ಮಾಡುತ್ತಿದ್ದಾರೆ. ಅವರದ್ದು ಇದ್ದಿದ್ದೆ. ಜನ ಅವರಿಗೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವ ಕೆಲಸ ಕೊಟ್ಟಿದ್ದಾರೆ. ಅವರಿಗೆ ಅಧಿಕಾರ ಕೊಟ್ಟಾಗ ಅಧಿಕಾರ ನಡೆಸಲು ಅನುಭವ ಕೂಡ ಇರಲಿಲ್ಲ. ಇವತ್ತು ಬಿಜೆಪಿಯವರ ಜಗಳ ಮಾಮೂಲಿ ಇದ್ದಿದ್ದೆ. ಅವರ ಪಾರ್ಟಿಯಲ್ಲಿ ನಡೆದಿದ್ದು, ಅವರಿಗೆ. ಅವರ ಒಳ ಜಗಳದ ಲಾಭ ನಮಗೆ ಬೇಡ ಎಂದು ತಿಳಿಸಿದರು.
ಇದನ್ನೂ ಓದಿ : ನನ್ನ ಹಾಗೂ ಸರ್ಕಾರದ ತೇಜೋವಧೆಗೆ ಇದನ್ನೆಲ್ಲ ಮಾಡುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ - CM SIDDARAMAIAH