ETV Bharat / bharat

ಅಯೋಧ್ಯೆಯಲ್ಲಿ ಭಕ್ತಾದಿಗಳ ಸಂಖ್ಯೆ ಏರಿಕೆ; ಶ್ರೀರಾಮ ಮಂದಿರದ ದರ್ಶನಾವಧಿ 2 ಗಂಟೆ ಹೆಚ್ಚಳ - RAM MANDIR

ಅಯೋಧ್ಯೆ ಶ್ರೀರಾಮ ಮಂದಿರದ ದರ್ಶನ ಅವಧಿಯನ್ನು 2 ಗಂಟೆ ಹೆಚ್ಚಿಸಲಾಗಿದೆ.

ಶ್ರೀರಾಮ ಮಂದಿರ
ಶ್ರೀರಾಮ ಮಂದಿರ (IANS)
author img

By ETV Bharat Karnataka Team

Published : Feb 7, 2025, 7:51 PM IST

ನವದೆಹಲಿ: ಅಯೋಧ್ಯೆಯ ರಾಮ ಮಂದಿರದಲ್ಲಿ ದರ್ಶನ ಮತ್ತು ಆಚರಣೆಗಳ ಸಮಯವನ್ನು ಪ್ರಸ್ತುತ ಬೆಳಿಗ್ಗೆ 7 ರಿಂದ ಬೆಳಿಗ್ಗೆ 6 ಕ್ಕೆ ಬದಲಾಯಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಾರ, ದೇವಾಲಯವು ಈಗ ಪ್ರತಿದಿನ ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ಭಕ್ತಾದಿಗಳ ದರ್ಶನಕ್ಕೆ ತೆರೆದಿರುತ್ತದೆ.

ಮುಂಜಾನೆ 4 ಗಂಟೆಗೆ ಮಂಗಳಾರತಿ ನಡೆಯಲಿದ್ದು, ನಂತರ ದೇವಾಲಯದ ಬಾಗಿಲುಗಳನ್ನು ಸಂಕ್ಷಿಪ್ತವಾಗಿ ಮುಚ್ಚಲಾಗುತ್ತದೆ. ಬೆಳಿಗ್ಗೆ 6 ಗಂಟೆಗೆ ಶೃಂಗಾರ ಆರತಿ ನಡೆಯಲಿದ್ದು, ಅಲ್ಲಿಂದ ಮುಂದಕ್ಕೆ ಸಾರ್ವಜನಿಕರಿಗೆ ದರ್ಶನ ಆರಂಭವಾಗಲಿದೆ. ಮಧ್ಯಾಹ್ನ 12 ಗಂಟೆಗೆ 'ರಾಜಭೋಗ್' ಅರ್ಪಿಸಲಾಗುವುದು. ಆಗ ಭಕ್ತರು ದರ್ಶನ ಮಾಡಬಹುದು ಎಂದು ದೇವಾಲಯದ ಟ್ರಸ್ಟ್ ತಿಳಿಸಿದೆ. 'ಸಂಧ್ಯಾ ಆರತಿ' ಸಂಜೆ 7 ಗಂಟೆಗೆ ನಿಗದಿಯಾಗಿದ್ದು, ಈ ಸಮಯದಲ್ಲಿ ದೇವಾಲಯದ ಬಾಗಿಲುಗಳನ್ನು 15 ನಿಮಿಷಗಳ ಕಾಲ ಮುಚ್ಚಿ ಮತ್ತೆ ತೆರೆಯಲಾಗುತ್ತದೆ.

ಶಯನ ಆರತಿಯನ್ನು ರಾತ್ರಿ 9.30 ರ ಬದಲು ರಾತ್ರಿ 10 ಗಂಟೆಗೆ ನಡೆಸಲಾಗುವುದು. ನಂತರ ರಾತ್ರಿ ದೇವಾಲಯವನ್ನು ಮುಚ್ಚಲಾಗುತ್ತದೆ. ಹೆಚ್ಚುತ್ತಿರುವ ಭಕ್ತರ ಸಂಖ್ಯೆಗೆ ಅನುಗುಣವಾಗಿ ಬದಲಾವಣೆಗಳನ್ನು ಮಾಡಲಾಗಿದ್ದು, ದರ್ಶನ ಸಮಯವನ್ನು ಬೆಳಿಗ್ಗೆ ಸುಮಾರು 90 ನಿಮಿಷ ಮತ್ತು ಸಂಜೆ 30 ನಿಮಿಷಗಳವರೆಗೆ ವಿಸ್ತರಿಸಲಾಗಿದೆ. ಪ್ರಸಾದ ಅರ್ಪಣೆಯ ಸಮಯದಲ್ಲಿ ಭಕ್ತರಿಗೆ 'ದರ್ಶನ' ವ್ಯವಸ್ಥೆ ಇರುತ್ತದೆ ಎಂದು ಟ್ರಸ್ಟ್ ತಿಳಿಸಿದೆ.

ಜನವರಿ 26 ಮತ್ತು 'ಬಸಂತ್ ಪಂಚಮಿ' (ಫೆಬ್ರವರಿ 3) ನಡುವೆ ಒಂದು ಕೋಟಿಗೂ ಹೆಚ್ಚು ಭಕ್ತರು ಪವಿತ್ರ ನಗರಿ ಅಯೋಧ್ಯೆಗೆ ಭೇಟಿ ನೀಡುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಫೆಬ್ರವರಿ 3 ರಂದು ಹೇಳಿದೆ.

ಭವ್ಯವಾದ ದೇವಾಲಯದಲ್ಲಿ ರಾಮ್ ಲಲ್ಲಾ ಸಿಂಹಾಸನಾರೋಹಣ ಮಾಡಿದ ನಂತರ ಇದೇ ಮೊದಲ ಬಾರಿಗೆ, ಪ್ರಯಾಗ್ ರಾಜ್​ನಲ್ಲಿ ಮಹಾ ಕುಂಭ ಮೇಳ ನಡೆಯುತ್ತಿದೆ. ಇದರಿಂದ ಅಯೋಧ್ಯೆಗೆ ಬರುತ್ತಿರುವ ಭಕ್ತಾದಿಗಳ ಸಂಖ್ಯೆಯೂ ಹೆಚ್ಚಾಗಿದೆ.

ರಾಮ ಮಂದಿರವು ಅಯೋಧ್ಯೆಯ ಆಧ್ಯಾತ್ಮಿಕ ಕೇಂದ್ರಬಿಂದುವಾಗಿದ್ದು, ಪ್ರತಿದಿನ ಸುಮಾರು 3 ಲಕ್ಷ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ದೇವಾಲಯದ ಟ್ರಸ್ಟ್ ದರ್ಶನಕ್ಕೆ ಅನುಕೂಲವಾಗುವಂತೆ ಹಲವಾರು ವ್ಯವಸ್ಥೆಗಳನ್ನು ಮಾಡಿದೆ. ದೇವಾಲಯವು ಪ್ರತಿದಿನ 18 ಗಂಟೆಗಳ ಕಾಲ ತೆರೆದಿರುತ್ತದೆ. ಇದಲ್ಲದೆ ಹನುಮಾನ್ ಗರ್ಹಿಗೆ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ ಎಂದು ಎಂದು ಟ್ರಸ್ಟ್ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಮೊದಲ ಮದುವೆ ಕಾನೂನುಬದ್ಧವಾಗಿ ಮುರಿದುಕೊಳ್ಳದಿದ್ದರೂ ಮಹಿಳೆಗೆ ಎರಡನೇ ಪತಿ ಜೀವನಾಂಶ ಪಾವತಿಸಬೇಕು: ಸುಪ್ರೀಂ - SUPREME COURT

ETV Bharat Logo

Copyright © 2025 Ushodaya Enterprises Pvt. Ltd., All Rights Reserved.