ETV Bharat / bharat

ಬ್ಯಾಂಕಿಂಗ್​ ವ್ಯವಸ್ಥೆಯಲ್ಲಿ ಹಣದ ಹರಿವು ಹೆಚ್ಚಿಸಲು ವಿಆರ್​ಆರ್​ ಮೂಲಕ 2.5 ಲಕ್ಷ ಕೋಟಿ ರೂ. ಹೂಡಲು ಆರ್​ಬಿಐ ನಿರ್ಧಾರ - VARIABLE RATE REPO AUCTION

ಇದು ಒಂದು ವರ್ಷದಲ್ಲಿ ಒಂದೇ ದಿನದಲ್ಲಿ ಭಾರತೀಯ ರಿಸರ್ವ್​ ಬ್ಯಾಂಕ್​ ನೀಡಿದ ಅತಿದೊಡ್ಡ ಹೂಡಿಕೆಯಾಗಿದೆ.

RBI Governor Sanjay Malhotra
ಆರ್​ಬಿಐ ಗವರ್ನರ್​ ಸಂಜಯ್​ ಮಲ್ಹೋತ್ರಾ (IANS)
author img

By ETV Bharat Karnataka Team

Published : Feb 12, 2025, 1:28 PM IST

ಮುಂಬೈ: ಭಾರತದ ಬ್ಯಾಂಕಿಂಗ್​ ವ್ಯವಸ್ಥೆಯಲ್ಲಿ ಹಣದ ಹರಿವು ಹೆಚ್ಚಿಸಲು ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ಇಂದು ನಡೆಯಲಿರುವ ವಿಆರ್​ಆರ್​ (Variable Rate Repo auction) ಹರಾಜಿನ ಮೂಲಕ 2.5 ಲಕ್ಷ ಕೋಟಿ ರೂ.ಗಳನ್ನು ಹೂಡಲು ಮುಂದಾಗಿದೆ. ಇದು ಒಂದು ವರ್ಷದಲ್ಲಿ ಒಂದೇ ದಿನದಲ್ಲಿ ಆರ್​ಬಿಐ ನೀಡಿದ ಅತಿದೊಡ್ಡ ಹೂಡಿಕೆಯಾಗಿದೆ.

ವಿದೇಶ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್​ ಎದುರು ರೂಪಾಯಿ ಮೌಲ್ಯ ಕುಸಿತವನ್ನು ತಡೆಯಲು ಆರ್​ಬಿಐ ಸೋಮವಾರ 4 ರಿಂದ 7 ಬಿಲಿಯನ್​ ಡಾಲರ್​ ಮೌಲ್ಯದಷ್ಟು ಡಾಲರ್​ಗಳನ್ನು ಮಾರಾಟ ಮಾಡಿತ್ತು. ಇದರಿಂದಾಗಿ ಬ್ಯಾಂಕಿಂಗ್​ ವಲಯದಲ್ಲಿ ಸ್ವಲ್ಪ ಹಣದ ಕೊರತೆ ಉಂಟಾಗಿತ್ತು. ಈ ಕೊರತೆಯನ್ನು ನೀಗಿಸುವ ಸಲುವಾಗಿ ಆರ್​ಬಿಐ ವಿಆರ್​ಆರ್​ ಹರಾಜು ಮೊರೆ ಹೋಗಿದೆ.

ಹಣದ ಹರಿವಿನ ಪರಿಸ್ಥಿತಿಗಳ ಮೌಲ್ಯಮಾಪನದ ಆಧಾರದ ಮೇಲೆ ಈ ಮೊತ್ತವನ್ನು ನಿರ್ಧರಿಸಲಾಗಿದೆ. ಮುಂದಿನ ಸೂಚನೆ ಬರುವವರೆಗೆ ಮುಂಬೈನಲ್ಲಿ ಎಲ್ಲ ಕೆಲಸದ ದಿನಗಳಲ್ಲಿ ದೈನಂದಿನ ವಿಆರ್​ಆರ್​ ಹರಾಜು ನಡೆಸಲಾಗುವುದು. ಮುಂದಿನ ಕೆಲಸದ ದಿನದಂದು ಹಿಮ್ಮುಖ ವಿತರಣೆ ನಡೆಯಲಿದೆ ಎಂದು ಕೇಂದ್ರ ಬ್ಯಾಂಕ್​ ತಿಳಿಸಿದೆ.

ಆರ್​ಬಿಐ ಗವರ್ನರ್​ ಸಂಜಯ್​ ಮಲ್ಹೋತ್ರಾ ಶುಕ್ರವಾರ ಹಣಕಾಸು ನೀತಿ ಸಭೆಯ ನಂತರ, ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಸಾಕಷ್ಟು ಹಣದ ಹರಿವು ಒದಗಿಸಲು ಆರ್​ಬಿಐ ಬದ್ಧವಾಗಿದೆ ಮತ್ತು ವ್ಯವಸ್ಥೆಯ ಅವಶ್ಯಕತೆಗಳನ್ನು ಪೂರೈಸಲು ದೀರ್ಘಾವಧಿ ಬಾಳಿಕೆಯ ಹಣದ ಹರಿವು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಘೋಷಿಸಿದ್ದರು.

ಆರ್​ಬಿಐ ಭಾರತದ ರೂಪಾಯಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಭಾರತೀಯ ಕರೆನ್ಸಿಯನ್ನು ಸ್ಥಿರವಾಗಿಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಗವರ್ನರ್​ ಹೇಳಿದ್ದರು.

ಮಾರ್ಗನ್​ ಸ್ಟಾನ್ಲಿ ವರದಿಯ ಪ್ರಕಾರ, ಮಾರ್ಚ್​ ಅಂತ್ಯದ ವೇಳೆಗೆ ಹಣದ ಹರಿವು ಹೆಚ್ಚಾದಂತೆ ಆರ್​ಬಿಐ ಪೂರ್ವಭಾವಿಯಾಗಿ ಹಣದ ಹರಿವನ್ನು ನಿರ್ವಹಿಸಲಿದೆ. ಮತ್ತು ಒಎಂಒ ಖರೀದಿಗಳು, ಎಫ್​ಎಕ್ಸ್​ ಸ್ವಾಪ್​ಗಳಂತಹ ಕೆಲವು ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎನ್ನುವ ನಿರೀಕ್ಷೆ ಇದೆ. ದೇಶೀಯ ಬೇಡಿಕೆ ದುರ್ಬಲವಾಗಿರುವುದರಿಂದ ಮತ್ತು ಜಾಗತಿಕ ಅಂಶಗಳಿಂದ ಉಂಟಾಗುವ ಅನಿಶ್ಚಿತತೆಯಿಂದ ಬೆಳವಣಿಗೆಯ ಚೇತರಿಕೆ ನೀರಸವಾಗಿದ್ದರೆ, ದೀರ್ಘಾವಧಿಯ ದರ ಕಡಿತದ ಚಕ್ರದ ಅಪಾಯವನ್ನು ನೋಡುವ ಸಾಧ್ಯತೆಯಿದೆ. ನಿಯಂತ್ರಕ ರಂಗದಲ್ಲಿ ಸ್ಥಿರತೆ ಮತ್ತು ದಕ್ಷತೆಯ ನಡುವೆ ಹೊಂದಾಣಿಕೆ ಇದೆ, ಇದನ್ನು ಮನಸಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ವರದಿ ತಿಳಿಸಿದೆ.

ಬ್ಯಾಂಕ್​ಗಳಿಗೆ ದೊಡ್ಡ ಪರಿಹಾರವಾಗಿ, ಈಗಾಗಲೇ ಪ್ರಸ್ತಾವಿಸಿರುವ ಹಣದ ಹರಿವಿನ ವ್ಯಾಪ್ತಿ ಅನುಪಾತ (LCR- Liquidity Coverage Ratio) ಹಾಗೂ ಯೋಜನಾ ಹಣಕಾಸು ಮಾನದಂಡಗಳ ಅನುಷ್ಠಾನವನ್ನು ಒಂದು ವರ್ಷದವೆರೆಗೆ ಮುಂದೂಡಲಾಗುವುದು. ಅಂದರೆ 2026ರ ಮಾರ್ಚ್​ 31ವರೆಗೆ ಜಾರಿಗೆ ತರುವುದಿಲ್ಲ ಎಂದು ಗವರ್ನರ್​ ಮಲ್ಹೋತ್ರಾ ಘೋಷಿಸಿದ್ದಾರೆ.

2025ರ ಮಾರ್ಚ್​ವರೆಗೆ ನೀಡಿದ ಗಡುವು, ಮಾರ್ಗಸೂಚಿಗಳ ಅನುಷ್ಠಾನಕ್ಕೆ ಸಾಕಷ್ಟು ಸಮಯ ನೀಡದ ಕಾರಣ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಹಣಕಾಸು ವ್ಯವಸ್ಥೆಯಲ್ಲಿ ಆರ್​ಬಿಐ ಯಾವುದೇ ಅಡ್ಡಿ ಉಂಟುಮಾಡಲು ಬಯಸುವುದಿಲ್ಲ. ಹಣದ ಉತ್ತಮ ಹರಿವನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದರು.

ಮಾಜಿ ಗವರ್ನರ್​ ಶಕ್ತಿಕಾಂತ್​ ದಾಸ್ ಅವರು​ ಘೋಷಿಸಿದ್ದ ಈ ಮಾನದಂಡಗಳ ಅನುಷ್ಠಾನವನ್ನು ಸಾರ್ವಜನಿಕ ವಲಯ ಹಾಗೂ ಖಾಸಗಿ ವಲಯದ ಬ್ಯಾಂಕ್​ಗಳು ವಿರೋಧಿಸಿದ್ದವು. ಈ ಮಾನದಂಡಗಳು ಹಣಕಾಸು ವ್ಯವಸ್ಥೆಯಲ್ಲಿ ಹಣದ ಹರಿವಿಗೆ ಬಿಕ್ಕಟ್ಟು ಉಂಟುಮಾಡುತ್ತದೆ ಎನ್ನುವ ಭಯ ಅವರದಾಗಿತ್ತು. ದಾಸ್​ ಅವರ ಅಧಿಕಾರಾವಧಿ ಕೊನೆಗೊಳ್ಳುತ್ತಿದ್ದಂತೆ ಆರ್​ಬಿಐ ಗವರ್ನರ್​ ಆಗಿ ಮಲ್ಹೋತ್ರಾ ಅಧಿಕಾರ ವಹಿಸಿಕೊಂಡ ಕೆಲ ದಿನಗಳಲ್ಲೇ ಬ್ಯಾಂಕ್​ಗಳ ಮುಖ್ಯಸ್ಥರು ಮಲ್ಹೋತ್ರಾ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು.

ಇದನ್ನೂ ಓದಿ: ಗೃಹಸಾಲಗಾರರಿಗೆ ಗುಡ್​ ನ್ಯೂಸ್​: 5 ವರ್ಷಗಳ ಬಳಿಕ ಮೊದಲ ಬಾರಿಗೆ ಬಡ್ಡಿದರ ಕಡಿತ ಮಾಡಿದ ಆರ್​​​ಬಿಐ: 25 ಬೇಸಿಸ್ ಪಾಯಿಂಟ್‌​ ಇಳಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.