ಪಾಟ್ನಾ, ಬಿಹಾರ: ಜೆಇಇ ಮೇನ್ಸ್ 2025 ರ ಜನವರಿ ಅವಧಿಯ ಫಲಿತಾಂಶಗಳು ಬಿಡುಗಡೆಯಾಗಿದ್ದು, 14 ವಿದ್ಯಾರ್ಥಿಗಳು ಶೇ 100ಕ್ಕೆ 100ರಷ್ಟು ಅಂಕಗಳನ್ನು ಪಡೆದುಕೊಂಡು ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಕರ್ನಾಟಕದ ಕುಶಾಗ್ರ ಗುಪ್ತಾ ಸಹ 100ಕ್ಕೆ ನೂರು ಅಂಕ ಪಡೆದು ಲಿಸ್ಟ್ ನಲ್ಲಿ ತಮ್ಮ ಹೆಸರನ್ನೂ ನಮೂದಿಸಿಕೊಂಡಿದ್ದಾರೆ.
14 ಟಾಪರ್ ಗಳ ಲಿಸ್ಟ್ ಹೀಗಿದೆ:
| 1 | 250310009213 | ಆಯುಷ್ ಸಿಂಗಲ್ | ರಾಜಸ್ಥಾನ
| 2 | 250310034720 | ಕುಶಾಗ್ರ ಗುಪ್ತಾ | ಕರ್ನಾಟಕ
| 3 | 250310133572 | ದಕ್ಷ | ದೆಹಲಿ (NCT)
| 4 | 250310143408 | ಹರ್ಷಾ ಜಾ | ದೆಹಲಿ (NCT)
| 5 | 250310150634 | ರಜಿತ್ ಗುಪ್ತಾ | ರಾಜಸ್ಥಾನ
| 6 | 250310210195 | ಶ್ರೇಯಸ್ ಲೋಹಿಯಾ | ಉತ್ತರಪ್ರದೇಶ
| 7 | 250310236696 | ಸಕ್ಷಮ್ ಜಿಂದಾಲ್ | ರಾಜಸ್ಥಾನ
| 8 | 250310254844 | ಸೌರವ್ | ಉತ್ತರಪ್ರದೇಶ
| 9 | 250310299968 | ವಿಶಾದ್ ಜೈನ್ | ಮಹಾರಾಷ್ಟ್ರ
| 10 | 250310312145 | ಅರ್ನವ್ ಸಿಂಗ್ | ರಾಜಸ್ಥಾನ
| 11 | 250310391420 | ಶಿವನ್ ವಿಕಾಶ ತೋಹಸಿನ್ವಾಲ್ | ಗುಜರಾತ್
| 12 | 250310564942 | ಸಾಯಿ ಮನೋಜ್ಞ ಗುತಿಕೊಂಡ | ಆಂಧ್ರಪ್ರದೇಶ
| 13 | 250310569571 | ಓಂ ಪ್ರಕಾಶ ಬೆಹ್ರಾ | ರಾಜಸ್ಥಾನ
| 14 | 250310746461 | ಬಾನಿ ಬ್ರಾತಾ ಮಾಜಿ | ತೆಲಂಗಾಣ
ಬಿಹಾರದ ಪಾಣಿನಿ ಶರ್ಮಾ ಶೇ 99.9942 ಅಂಕ ಗಳಿಸುವ ಮೂಲಕ ಬಿಹಾರ ರಾಜ್ಯದ ಟಾಪರ್ ಆಗಿ ಹೊರಹೊಮ್ಮಿದ್ದಾರೆ. 23ರ ಅಖಿಲ ಭಾರತ ಶ್ರೇಣಿಯೊಂದಿಗೆ (AIR) ಪಾಣಿನಿ ಹಾಜಿಪುರ, ವೈಶಾಲಿ ಜಿಲ್ಲೆ ಸೇರಿದಂತೆ ಇಡೀ ಬಿಹಾರ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಸಂಜಯ್ ಶರ್ಮಾ ಮತ್ತು ನಿಭಾ ಕುಮಾರಿಯವರ ಮಗನಾದ ಪಾಣಿನಿ ತನ್ನ ಶಾಲಾ ಶಿಕ್ಷಣವನ್ನು ಪಾಟ್ನಾದಲ್ಲಿ ಪೂರ್ಣಗೊಳಿಸಿದ್ದರು. ಖಗೋಳವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರದಲ್ಲಿ ತೀವ್ರ ಆಸಕ್ತಿ ಹೊಂದಿರುವ ಪಾಣಿನಿ ಯಾವಾಗಲೂ ಅಸಾಧಾರಣವಾದ ವಿದ್ಯಾರ್ಥಿ ಎಂದು ಅವರ ತಂದೆ ಸಂತಸ ಹಂಚಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಣಿನಿ ಗಮನಾರ್ಹ ಸಾಧನೆ ಮಾಡುವ ಆತನ ಶೈಕ್ಷಣಿಕ ಉತ್ಕೃಷ್ಟತೆ ಸಾಬೀತಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಪಾಣಿನಿ, ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ 2024 ರ ಖಗೋಳವಿಜ್ಞಾನ ಮತ್ತು ಆಸ್ಟ್ರೋಫಿಸಿಕ್ಸ್ 17 ನೇ ಅಂತರರಾಷ್ಟ್ರೀಯ ಒಲಂಪಿಯಾಡ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು. ಅಷ್ಟೇ ಅಲ್ಲ OCSC 2023 (ಖಗೋಳಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರ)ಕ್ಕೆ ಕೂಡಾ ಆಯ್ಕೆಯಾಗಿ ಗಮನ ಸೆಳೆದಿದ್ದರು ಅದೂ ಅಲ್ಲದೇ. INPHO, INCHO ಮತ್ತು INAO ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಈ ವೇಳೆ ಅವರು ಖಗೋಳಶಾಸ್ತ್ರ ವನ್ನು ಅವರ ವಿಶೇಷತೆಯಾಗಿ ಆಯ್ಕೆ ಮಾಡಿಕೊಂಡು ಅಭ್ಯಾಸ ನಡೆಸಿದ್ದರು.
ಪಾಣಿನಿ ಯಾವಾಗಲೂ ಖಗೋಳಶಾಸ್ತ್ರದ ಬಗ್ಗೆ ಆಳವಾದ ಉತ್ಕಟತೆಯನ್ನು ಹೊಂದಿದ್ದಾರೆ. ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. JEE ಮೇನ್ಸ್ ಯಶಸ್ಸು ಅವರ ಕಿರೀಟಕ್ಕೆ ಮತ್ತೊಂದು ಗರಿಯಷ್ಟೇ ಎಂದು ಪಾಣಿನಿಯ ತಂದೆ ಸಂಜಯ್ ಶರ್ಮಾ ಮಗನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಪಾಣಿನಿ ಜೊತೆಗೆ, ಬಿಹಾರದ ಮತ್ತೊಬ್ಬ ವಿದ್ಯಾರ್ಥಿ ಅಭಿಷೇಕ್ ಕುಮಾರ್ ಶೇ 99.8738 ಶೇಕಡಾ ಅಂಕ ಗಳಿಸುವ ಮೂಲಕ ಬಿಹಾರಕ್ಕೆ ಹೆಮ್ಮೆ ತಂದಿದ್ದಾರೆ.ಈ ಇಬ್ಬರ ಅಸಾಧಾರಣ ಸಾಧನೆಯು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬಿಹಾರದ ವಿದ್ಯಾರ್ಥಿಗಳ ಹೆಚ್ಚುತ್ತಿರುವ ಪ್ರಾಬಲ್ಯವನ್ನು ಒತ್ತಿ ಹೇಳುತ್ತಿದೆ.
ಜೆಇಇ ಮೇನ್ಸ್ 2025ರ ಪರೀಕ್ಷೆಯಲ್ಲಿ ಒಟ್ಟು 13,11,544 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. 12,58,136 (ಶೇ 95.93) ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಜನವರಿ 22-24 ಮತ್ತು ಜನವರಿ 28-29 ರಂದು ದೇಶದ 304 ನಗರಗಳ 618 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಈ ಬಾರಿ 14 ವಿದ್ಯಾರ್ಥಿಗಳು ಶೇ 100ಕ್ಕೆ 100ರಷ್ಟು ಅಂಕಗಳನ್ನು ಗಳಿಸಿದ್ದಾರೆ.
ಜೆಇಇ ಮೇನ್ಸ್ 2025 ರಲ್ಲಿ ಬಿಹಾರದ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ವಿಶೇಷವಾಗಿ ಪಾಣಿನಿ ಶರ್ಮಾ ಅವರ ರಾಜ್ಯ - ಪ್ರಮುಖ ಸಾಧನೆಯು ಈ ಪ್ರದೇಶದ ವಿದ್ಯಾರ್ಥಿಗಳ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಹೆಚ್ಚುತ್ತಿರುವ ಶೈಕ್ಷಣಿಕ ಉತ್ಕೃಷ್ಟತೆಯನ್ನು ಪ್ರತಿಬಿಂಬಿಸುತ್ತದೆ.
ಇದನ್ನು ಓದಿ: ವಿಶ್ವ ಯುನಾನಿ ವೈದ್ಯಕೀಯ ದಿನ: ಆಧುನಿಕ ಯುಗದಲ್ಲಿ ಹೆಚ್ಚಿದ ಪ್ರಾಚೀನ ಚಿಕಿತ್ಸಾ ವಿಧಾನದ ಪ್ರಾಮುಖ್ಯತೆ- ವೈದ್ಯರ ಅಭಿಮತ