IND vs ENG 3rd ODI: ಭಾರತ ಮತ್ತು ಇಂಗ್ಲೆಂಡ್ ನಡುವೆ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ಇಂದು ನಡೆಯಲಿದೆ. ಇದಕ್ಕೂ ಮುನ್ನ ನಡೆದಿದ್ದ 2 ಪಂದ್ಯಗಳಲ್ಲಿ ರೋಹಿತ್ ಸೈನ್ಯ ಜಯಭೇರಿ ಭಾರಿಸಿ ಒಂದು ಪಂದ್ಯಕ್ಕೂ ಮುಂಚಿತವಾಗಿಯೇ ಸರಣಿ ಕೈವಶ ಮಾಡಿಕೊಂಡಿದೆ.
ಇದೀಗ ಮೂರನೇ ಪಂದ್ಯದಲ್ಲೂ ಭಾರತ ಗೆದ್ದು ಇಂಗ್ಲೆಂಡ್ ಅನ್ನು ವೈಟ್ವಾಶ್ ಮಾಡಲು ಯೋಜನೆ ರೂಪಿಸಿಕೊಂಡಿದೆ. ಮತ್ತೊಂದೆಡೆ ಭಾರತದ ವಿರುದ್ಧ ಕೊನೆಯ ಪಂದ್ಯ ಗೆದ್ದು ವೈಟ್ ವಾಶ್ ಮುಖಭಂಗದಿಂದ ಪಾರಾಗಲು ಆಂಗ್ಲ ಪಡೆ ಸಿದ್ಧತೆ ನಡೆಸಿದೆ.
Nagpur ✅
— Star Sports (@StarSportsIndia) February 11, 2025
Cuttack ✅
Ahmedabad ⏳
One last ODI for #TeamIndia before the #ChampionsTrophy - will they whitewash England 3-0 & end the series on a high? 👀#INDvENGonJioStar 3rd ODI 👉 WED, 12th FEB, 12:30 PM | Start watching FREE on Disney+ Hotstar! pic.twitter.com/pSf0e1OiTt
ಈ ಪಂದ್ಯಕ್ಕೆ ಅಹಮದಾಬಾದ್ನ ನರೇಂದ್ರ ಮೋದಿ ಮೈದಾನ ಆತಿಥ್ಯ ವಹಿಸಿಕೊಂಡಿದೆ. 2023ರ ಏಕದಿನ ವಿಶ್ವಕಪ್ ಬಳಿಕ ಈ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯ ಇದಾಗಿದೆ.
ಮೋದಿ ಮೈದಾನದ ದಾಖಲೆ: ಈ ಮೈದಾನದಲ್ಲಿ ಭಾರತ ಇಟ್ಟು 20 ಏಕದಿನ ಪಂದ್ಯಗಳನ್ನು ಆಡಿದೆ. ಇದರಲ್ಲಿ 11 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದ್ದು, 9 ಪಂದ್ಯಗಳನ್ನು ಕಳೆದುಕೊಂಡಿದೆ.
Cuttack 🛬 Ahmedabad #TeamIndia have arrived for the Third and the Final #INDvENG ODI 👌👌@IDFCFIRSTBank pic.twitter.com/JOd2fCAkgU
— BCCI (@BCCI) February 10, 2025
IND vs ENG ಹೆಡ್ ಟು ಹೆಡ್: ಭಾರತ ಮತ್ತು ಇಂಗ್ಲೆಂಡ್ ತಂಡಗಳು ಈ ವರೆಗೂ ಒಟ್ಟು 109 ಏಕದಿನ ಪಂದ್ಯಗಳನ್ನು ಆಡಿವೆ. ಇದರಲ್ಲಿ ಭಾರತ ಅತೀ ಹೆಚ್ಚು 59 ಪಂದ್ಯಗಳನ್ನು ಗೆದ್ದು ಪ್ರಾಬಲ್ಯ ಸಾಧಿಸಿದೆ. ಆಂಗ್ಲ ಪಡೆ 44 ಬಾರಿ ಭಾರತದ ಮೇಲೆ ಜಯಭೇರಿ ಬಾರಿಸಿದೆ.
IND vs ENG ODI ನೇರಪ್ರಸಾರ, ಲೈವ್ ಸ್ಟ್ರೀಮಿಂಗ್ ವಿವರ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ ಪ್ಲಸ್ ಮತ್ತು ಹಾಟ್ಸ್ಟಾರ್
ಪಂದ್ಯ ಪ್ರಾರಂಭ: ಮಧ್ಯಾಹ್ನ 1.30ಕ್ಕೆ
ಸಂಭಾವ್ಯ ತಂಡ- ಭಾರತ: ರೋಹಿತ್ ಶರ್ಮಾ (ನಾಯಕ),ಶ್ರೇಯಸ್ ಅಯ್ಯರ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್/ರಿಷಭ್ ಪಂತ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಅರ್ಷ್‌ದೀಪ್ ಸಿಂಗ್, ಹರ್ಷಿತ್ ರಾಣಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ.
ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ), ಬೆನ್ ಡಕೆಟ್, ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಜೋ ರೂಟ್, ಹ್ಯಾರಿ ಬ್ರೂಕ್, ಜಾಕೋಬ್ ಬೆಥೆಲ್, ಜೇಮೀ ಸ್ಮಿತ್, ಲಿಯಾಮ್ ಲಿವಿಂಗ್‌ಸ್ಟೋನ್, ಬ್ರೈಡನ್ ಕಾರ್ಸೆ, ಜೇಮೀ ಓವರ್ಟನ್, ಗಸ್ ಅಟ್ಕಿನ್ಸನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಶಾಕಿಬ್ ಮಹಮೂದ್, ಮಾರ್ಕ್ ವುಡ್.
ಇದನ್ನು ಓದಿ: 'ಕನ್ನಡಿಗನ ಕೆರಿಯರ್ ಜೊತೆ ಚೆಲ್ಲಾಟ ಆಡುತ್ತಿದ್ದೀರಾ?': ಗಂಭೀರ್ ವಿರುದ್ಧ ಆಕ್ರೋಶ