ಪ್ರಯಾಗರಾಜ್ , ಉತ್ತರಪ್ರದೇಶ: ಜಗತ್ತಿನ ಅತಿ ದೊಡ್ಡ ಉತ್ಸವ ಹಾಗೂ 144 ವರ್ಷಗಳಿಗೆ ಒಮ್ಮೆ ನಡೆಯುವ ಮಹಾಕುಂಭ ಮೇಳ ಅನೇಕ ದೇಶಗಳ ಜನಸಂಖ್ಯಾ ಗಾತ್ರವನ್ನು ಮೀರಿಸಿದೆ. ಇದು ಆರ್ಥಿಕವಾಗಿ ಉತ್ತರಪ್ರದೇಶದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಮಹಾಕುಂಭ ನಡೆಯುತ್ತಿರುವ ಪ್ರಯಾಗ ರಾಜ್ ನಗರದೆಲ್ಲೆಡೆ ಈಗ ಉದ್ಯಮಗಳ ಪ್ರವಾಹವಾಗಿರುವುದನ್ನು ಕಾಣ ಬಹುದಾಗಿದೆ. ಇದು ಸಾಮಾನ್ಯರು ಮತ್ತು ರಾಜ್ಯಕ್ಕೆ ಹೆಚ್ಚಿನ ಆದಾಯವನ್ನು ತಂದು ಕೊಟ್ಟಿದೆ. ಹಲವು ಜನರ ಹೊಟ್ಟೆಗೆ ಹಿಟ್ಟನ್ನು ತಂದುಕೊಟ್ಟಿದೆ.
ಭಾರತದಲ್ಲಿ ಧರ್ಮ, ರಾಜಕೀಯ ಮತ್ತು ಆರ್ಥಿಕತೆಯು ಆಳವಾಗಿ ಹೆಣೆದುಕೊಂಡಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ, ಆರು ವಾರಗಳ ಕಾಲ ನಡೆದ ಮಹಾಕುಂಭ ಉತ್ಸವ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶಾಲವ್ಯಾಪ್ತಿಯಲ್ಲಿ ಮೂಲಸೌಕರ್ಯ ಕಲ್ಪಿಸಲು ಅನುದಾನದ ಪ್ರವಾಹವನ್ನೇ ಹರಿಸಿದ್ದಾರೆ.
ನಗರದಲ್ಲಿ ಊಹಿಸಲಾಸಾಧ್ಯವಾದ ಮಟ್ಟದಲ್ಲಿ ಪರಿವರ್ತನೆ ಕಾಣುತ್ತಿದ್ದೇವೆ. ಹೊಸ ರಸ್ತೆ, ಸೇತುವೆ, ಹೆಚ್ಚುವರಿ ವಿಮಾನ, ರೈಲು ಸೇವೆ, ಹೊಸ ಹೋಟೆಲ್ಗಳು, ರೆಸ್ಟೊರೆಂಟ್ ಮತ್ತು ಕೆಲಸಗಾರರಿಗೆ ಬೇಡಿಕೆ ಹೆಚ್ಚುತ್ತಿರುವುದು ಕಂಡು ಬಂದಿದೆ. ಕುಂಭದಲ್ಲಿ ಅತಿ ದೊಡ್ಡ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತಿದೆ. ಲಕ್ಷಾಂತರ ಜನರು ಕುಂಭಮೇಳಕ್ಕೆ ಆಗಮಿಸುತ್ತಿದ್ದು, ಅವರಿಗೆ ವಸತಿ, ಸಾರಿಗೆ ಊಟದ ವ್ಯವಸ್ಥೆಯ ಭಾಗವಾಗಿ ಅನೇಕರು ಉದ್ಯೋಗ ಕಂಡು ಕೊಂಡಿದ್ದಾರೆ.
![maha-kumbh-impact-how-hindu-mega-festival-has-supercharged-economy-in-india](https://etvbharatimages.akamaized.net/etvbharat/prod-images/12-02-2025/pti02_12_2025_000029b_1202newsroom_1739333107_94.jpg)
ಕುಂಭ ಮೇಳದಲ್ಲಿ ಎಂಟು ಪಟ್ಟು ಜಾಸ್ತಿ ಆದಾಯ ಸಿಗ್ತಿದೆ: ಟಾಕ್ಸಿ ಚಾಲಕನಾಗಿ ನಾನು ಪ್ರತಿನಿತ್ಯ 250 ಡಾಲರ್ ಸಂಪಾದಿಸುತ್ತಿದ್ದು, ಇದು ನನ್ನ ಸಾಮಾನ್ಯ ಆದಾಯಕ್ಕಿಂತ ಎಂಟು ಪಟ್ಟು ಹೆಚ್ಚಿದೆ. ನನ್ನ ಜೀವನದಲ್ಲೇ ಅತ್ಯಂತ ಬಿಡುವಿಲ್ಲದ ಕೆಲಸವನ್ನು ನಾನು ಇದೀಗ ಮಾಡುತ್ತಿದ್ದೇನೆ. 18 ರಿಂದ 20 ಗಂಟೆ ಕೆಲಸ ಸಿಗುತ್ತಿದೆ. ಇದರಿಂದ ನಾನು ಮಾತ್ರವಲ್ಲ ಅನೇಕರು ಲಾಭ ಪಡೆಯುತ್ತಿದ್ದು, ಇದೊಂದು ಜೀವನ ಬದಲಾವಣೆ ಕಾರ್ಯಕ್ರಮವಾಗಿದೆ ಅಂತಾರೆ ಚಾಲಕ ಕುಮಾರ್.
![maha-kumbh-impact-how-hindu-mega-festival-has-supercharged-economy-in-india](https://etvbharatimages.akamaized.net/etvbharat/prod-images/12-02-2025/pti02_12_2025_000024b_1202newsroom_1739333107_383.jpg)
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರ ಮಹಾಕುಂಭದ ಲಾಭದಾಯಕ ಸೇವಾ ಒಪ್ಪಂದಗಳನ್ನು ನಿಯಂತ್ರಿಸುತ್ತಿದೆ. ಆರ್ಥಿಕ ತಜ್ಞರ ಪ್ರಕಾರ ಧಾರ್ಮಿಕ ಆಚರಣೆಯ ಸರ್ಕಾರಿ ಅಂಕಿ- ಅಂಶಗಳನ್ನು ಸ್ವತಂತ್ರವಾಗಿ ಪರಿಶೀಲಿಸುವುದು ಅಸಾಧ್ಯವಾಗಿದೆ. ರಾಜ್ಯ ಸರ್ಕಾರದ ವರದಿ ಅನುಸಾರ, ಈಗಾಗಲೇ 435ಮಿಲಿಯನ್ ಯಾತ್ರಿಕರು ಪುಣ್ಯ ಸ್ನಾನ ಕೈಗೊಂಡಿದ್ದು, ಫೆ. 26ರವರೆಗೆ ಈ ಮೇಳ ನಡೆಯಲಿದೆ. ಭಕ್ತರ ಅಂಕಿ- ಆಂಶಗಳನ್ನು ಕ್ಯಾಮೆರಾ ನೆಟ್‌ವರ್ಕ್‌ಗಳಿಂದ ಕೃತಕ ಬುದ್ಧಿಮತ್ತೆಯ ಮೌಲ್ಯಮಾಪನಗಳನ್ನು ಆಧರಿಸಿ ಪಡೆಯಲಾಗಿದೆ.
![maha-kumbh-impact-how-hindu-mega-festival-has-supercharged-economy-in-india](https://etvbharatimages.akamaized.net/etvbharat/prod-images/12-02-2025/pti02_12_2025_000022b_1202newsroom_1739333107_270.jpg)
ಜಾಗತಿಕ ಹಬ್ಬಗಳನ್ನೂ ಮೀರಿಸಿದ ಕುಂಭಮೇಳ: ಆದಿತ್ಯನಾಥ್ ತಮ್ಮ ಯೋಜನೆಗಳ ಮೂಲಕ ಭಾರತದ ಆರ್ಥಿಕತೆಗೆ ಸುಮಾರು 24 ಬಿಲಿಯನ್ ಡಾಲರ್ ನಷ್ಟು ಕೊಡುಗೆ ನೀಡಲು ಯೋಜಿಸಿದ್ದಾರೆ. ಇದು ಅಮೆರಿಕ ಮತ್ತು ಕೆನಡಾ ಜನಸಂಖ್ಯೆಗಿಂತ ಹೆಚ್ಚಾಗಿದ್ದು, ಅರ್ಮೆನಿಯಾದ ವಾರ್ಷಿಕ ಜಿಡಿಪಿಗೆ ಸಮಾನವಾಗಿದೆ. ಇದು ಜಗತ್ತಿನ ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ದೇಶಕ್ಕೂ ಅವರು ದಿಗ್ಭ್ರಮೆಗೊಳಿಸುವ ಅಂಕಿ -ಅಂಶಗಳಾಗಿವೆ.
ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿನ ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಅಧ್ಯಕ್ಷ ದೇವೇಂದ್ರ ಪ್ರತಾಪ್ ಸಿಂಗ್ ಹೇಳುವ ಪ್ರಕಾರ, ಇದು 30 ಬಿಲಿಯನ್ ಡಾಲರ್ಗೂ ಮೀರಿದ್ದು, ಈ ಮಹಾ ಕಾರ್ಯಕ್ರಮದಿಂದ ನಮ್ಮ ಆರ್ಥಿಕತೆ ನಿಶ್ಚಿತವಾಗಿ ಬೆಳವಣಿಗೆ ಕಾಣುತ್ತಿದೆ . ಪ್ರತಿ ಹಂತದಲ್ಲೂ ನಾವು ಪ್ರಯೋಜನ ಪಡೆದುಕೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ. ಇದು ಸಾರಿಗೆ, ಹೋಟೆಲ್, ಆಹಾರ ಸೇರಿದಂತೆ ಇತರ ವಲಯಗಳ ಮೇಲೆ ಪರಿಣಾಮ ಬೀರುತ್ತಿದೆ. ಇದರೊಂದಿಗಿನ ಧಾರ್ಮಿಕ ಪ್ರವಾಸವೂ ವಿಶಾಲ ವ್ಯಾಪ್ತಿಯಲ್ಲಿದ್ದು, ರಾಜ್ಯ ತೆರಿಗೆ ಮತ್ತು ಶುಲ್ಕ ಸೇರಿದಂತೆ ಇತರ ಮೂಲಗಳಿಂದ 3 ಬಿಲಿಯನ್ ಡಾಲರ್ ನಿರೀಕ್ಷಿಸಲಾಗುತ್ತಿದೆ.
![maha-kumbh-impact-how-hindu-mega-festival-has-supercharged-economy-in-india](https://etvbharatimages.akamaized.net/etvbharat/prod-images/12-02-2025/pti02_12_2025_000020a_1202newsroom_1739333107_227.jpg)
ಭಾರತದ ಆರ್ಥಿಕತೆಯ ಹಬ್ಬದ ಚಕ್ರದಲ್ಲಿ ಕುಂಭಮೇಳ ಅತಿ ದೊಡ್ಡ ಚಾಲಕನಾಗಿದ್ದು, ಮನೆಮಾತಾಗಿದ್ದ ಅನೇಕ ಬ್ರಾಂಡ್ಗಳು ಇಲ್ಲಿ ಅವಕಾಶ ಪಡೆದು, ತಮ್ಮ ಅಂಗಡಿಗಳನ್ನು ತೆರೆಯುತ್ತಿದ್ದಾರೆ. ನದಿ ಪಕ್ಕದಲ್ಲೇ ಟೆಂಟ್ ಹಾಕಲಾಗಿದ್ದು, ಇಲ್ಲಿ ಆಹಾರ, ಬಟ್ಟೆಯಿಂದ ಹಿಡಿದು ಪ್ರಾರ್ಥನಾ ಸಾಮಗ್ರಿ, ಹೂವು ಸೇರಿದಂತೆ ಹಬ್ಬದ ಸ್ಮರಣಿಕೆವರೆಗೆ ವಸ್ತುಗಳು ಮಾರಾಟವಾಗುತ್ತಿವೆ.
![maha-kumbh-impact-how-hindu-mega-festival-has-supercharged-economy-in-india](https://etvbharatimages.akamaized.net/etvbharat/prod-images/12-02-2025/20250205511l_1202newsroom_1739333107_488.jpg)
ಕುಂಭಮೇಳ ಅದ್ಬುತವೇ ಸರಿ: ಸಿಎಂ ಯೋಗಿ ಆದಿತ್ಯನಾಥ್ ಕಚೇರಿಯ ಸಂಜೀವ್ ಸಿಂಗ್ ಪ್ರಕಾರ, 7 ಮಿಲಿಯನ್ ಜನರು ಭಾಗಿಯಾಗುವ ಬ್ರೆಜಿಲ್ನ ರಿಯೋ ಹಬ್ಬ, ಎರಡು ಮಿಲಿಯನ್ ಜನರು ಭಾಗಿಯಾಗುವ ಸೌದಿ ಅರೇಬಿಯಾದ ಮುಸ್ಲಿಂ ಹಜ್ನಂತಹ ಜಾಗತಿಕ ಹಬ್ಬಗಳನ್ನು ಕುಂಭ ಮೇಳಗಳನ್ನೂ ಸಣ್ಣದಾಗಿ ಮಾಡಿದೆ. ಇದೊಂದು ಅದ್ಬುತ ಎಂದಿದ್ದಾರೆ.
![maha-kumbh-impact-how-hindu-mega-festival-has-supercharged-economy-in-indiae](https://etvbharatimages.akamaized.net/etvbharat/prod-images/12-02-2025/20250210126l_1202newsroom_1739333107_911.jpg)
ಹೋಟೆಲ್ ಮಾಲೀಕ ದೀಪಕ್ ಕುಮಾರ್ ಮೆಹ್ರೋತ್ರಾ ಮಾತನಾಡಿ, ನನ್ನ ಎರಡು ಹೋಟೆಲ್ಗಳು ಸಂಪೂರ್ಣವಾಗಿ ಬುಕ್ ಆಗಿದ್ದು, ಭಾರಿ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ. ನಗರದಲ್ಲಿ ಎಲ್ಲರೂ ಉತ್ತಮ ವ್ಯಾಪಾರ ಮಾಡುತ್ತಿದ್ದಾರೆ. ರೂಂಗಳು ಲಭ್ಯವಿದ್ದರೆ, ಅದರ ದರಗಳು 10ರಷ್ಟು ಏರಿಕೆ ಕಂಡಿದ್ದು, ಟಾಪ್ ಹೋಟೆಲ್ಗಳ ಒಂದು ರಾತ್ರಿಗೆ 900 ರಿಂದ 1200 ಡಾಲರ್ ದರ ನಿಗದಿ ಮಾಡುತ್ತಿವೆ. ಯಾತ್ರಿಕರ ಬೇಡಿಕೆ ಪೂರೈಸುವುದೇ ಸವಾಲಾಗಿದೆ. ಬಾಣಸಿಗರು, ಚಾಲಕರು, ಎಲೆಕ್ಟ್ರಿಷಿಯನ್ಗಳು ಅತಿ ಹೆಚ್ಚು ಬೇಡಿಕೆ ಪಡೆದಿದ್ದಾರೆ.
![maha-kumbh-impact-how-hindu-mega-festival-has-supercharged-economy-in-indiae](https://etvbharatimages.akamaized.net/etvbharat/prod-images/12-02-2025/20250210126l_1202newsroom_1739333107_911.jpg)
62 ವರ್ಷದ ಟ್ರಾವೆಲ್ ಏಜೆಂಟ್ ಶಹಿದ್ ಬೇಗ್ ರೊಮಿ ಮಾತನಾಡಿ, ಪ್ರಯಾಗರಾಜ್ನಿಂದ 50 ಮೈಲಿ ದೂರದಲ್ಲಿನ ಸಣ್ಣ ಪ್ರದೇಶಗಳು ಇದೀಗ ಬ್ಯುಸಿಯಾಗಿವೆ. ಜನರು ಅಲ್ಲಿಯು ಕೂಡ ವಾಸ್ತವ್ಯ ಹೂಡುತ್ತಿದ್ದಾರೆ. ಇದು ಪ್ರಯಾಗ್ರಾಜ್ ಮಾತ್ರವಲ್ಲದೇ ಹಿಂದೂ ಧಾರ್ಮಿಕ ಕ್ಷೇತ್ರಗಳಾದ ಅಯೋಧ್ಯಾ ಮತ್ತು ವಾರಾಣಸಿ ಮೇಲೂ ಭಾರಿ ಪರಿಣಾಮ ಬೀರುತ್ತಿದೆ. ಈ ರೀತಿಯ ಬೃಹತ್ ಕಾರ್ಯಕ್ರಮವೂ ಹೊಸ ಬೆಳವಣಿಗೆ ಮತ್ತು ಹೊಸ ಅವಕಾಶಗಳ ಸೃಷ್ಟಿಗೆ ಕಾರಣವಾಗುತ್ತಿದೆ ಎಂದು ಹೇಳಿದ್ದಾರೆ. .
ಇದನ್ನೂ ಓದಿ: ಮಹಾ ಕುಂಭಮೇಳ: 30 ದಿನದಲ್ಲಿ ದಾಖಲೆಯ 45 ಕೋಟಿಗೂ ಹೆಚ್ಚು ಜನರಿಂದ ಪುಣ್ಯ ಸ್ನಾನ
ಇದನ್ನೂ ಓದಿ: ಮಹಾಕುಂಭಮೇಳ: ಮಾಘ ಪೂರ್ಣಿಮೆ ಹಿನ್ನೆಲೆ ಭಕ್ತರಿಂದ ಪವಿತ್ರ ಸ್ನಾನ; UP ಸರ್ಕಾರದಿಂದ ಕಟ್ಟೆಚ್ಚರ