ಅಯೋಧ್ಯೆ: ಶ್ರೀ ರಾಮ ಜನ್ಮಭೂಮಿ ದೇಗುಲದ ಪ್ರಮುಖ ಅರ್ಚಕ ಸತ್ಯೇಂದ್ರ ದಾಸ್ ಅವರು, ಪಿಜಿಐ ಲಕ್ನೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 85 ವರ್ಷ ವಯಸ್ಸಿನ ಅವರು ಬ್ರೈನ್ ಹ್ಯಾಮೋರೇಜ್ನಿಂದ ನಿಧನರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಮಹಂತ್ ಸತ್ಯೇಂದ್ರ ದಾಸ್ ಅವರು 1993ರಿಂದ ರಾಮಲಲ್ಲಾನಿಗೆ ಸೇವೆ ಸಲ್ಲಿಸುತ್ತಿದ್ದು, ಕಳೆದ ಕೆಲವು ತಿಂಗಳಿನಿಂದ ಅವರ ಆರೋಗ್ಯ ಹದಗೆಟ್ಟಿತ್ತು. ಜನವರಿ 29ರಂದು ಅವರು ಮೆದುಳಿನ ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಬಳಿಕ ಅವರನ್ನು ಅಯೋಧ್ಯೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿಂದ ಅವರನ್ನು ಲಕ್ನೋನಲ್ಲಿರುವ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ಸಂಸ್ಥೆಗೆ ಶಿಫಾರಸು ಮಾಡಿದ್ದು, ಫೆ 4ರಿಂದ ಚಿಕಿತ್ಸೆ ಮುಂದುವರಿದಿತ್ತು.
ಸತ್ಯೇಂದ್ರ ದಾಸ್ ಅವರ ನಿಧನದ ಸುದ್ದಿಯನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸಂವಾದ ಕೇಂದ್ರ ಘೋಷಿಸಿದೆ. ಹೇಳಿಕೆಯಲ್ಲಿ ಮಾಘ ಪೂರ್ಣಿಮೆಯ ಶುಭ ದಿನದಂದು ಬೆಳಗ್ಗೆ 7ಕ್ಕೆ ಮುಖ್ಯ ಅರ್ಚಕರು ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿಸಲಾಗಿದೆ.
परम रामभक्त, श्री राम जन्मभूमि मंदिर, श्री अयोध्या धाम के मुख्य पुजारी आचार्य श्री सत्येन्द्र कुमार दास जी महाराज का निधन अत्यंत दुःखद एवं आध्यात्मिक जगत की अपूरणीय क्षति है। विनम्र श्रद्धांजलि!
— Yogi Adityanath (@myogiadityanath) February 12, 2025
प्रभु श्री राम से प्रार्थना है कि दिवंगत पुण्यात्मा को अपने श्री चरणों में स्थान दे…
ಸತ್ಯೇಂದ್ರ ದಾಸ್ ಅವರು, ಅಯೋಧ್ಯೆ ರಾಮ ಮಂದಿರದ ಮುಖ್ಯ ಅರ್ಚಕರಾಗಿದ್ದು, ಇಂದು ಅವರು ಕೊನೆಯುಸಿರೆಳೆದಿದ್ದಾರೆ. ಮೆದುಳು ಪಾರ್ಶ್ವವಾಯಿವಿನ ಗಂಭೀರ ಸ್ಥಿತಿ ಹಿನ್ನೆಲೆ ನರವಿಭಾಗದ ಹೆಚ್ಡಿಯುಗೆ ದಾಖಲಿಸಲಾಗಿತ್ತು ಎಂದು ಪಿಜಿಐ ಲಕ್ನೋ ವೈದ್ಯಕೀಯ ಕೇಂದ್ರ ತಿಳಿಸಿದೆ.
ಅವರ ಅಗಲಿಕೆಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಛಂಪತ್ ರೈ ಸೇರಿದಂತೆ ಟ್ರಸ್ಟ್ನ ಇತರ ಸದಸ್ಯರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
#WATCH | On the demise of the Chief Priest of Ayodhya Ram temple, Acharya Satyendra Das, Priest of Hanumangarhi temple, Ramesh Das Ji says, " all saints and devotees of lord ram are saddened today." pic.twitter.com/tn6c9J7kSd
— ANI (@ANI) February 12, 2025
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಸಂತಾಪ ಸೂಚಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅವರ ಅಗಲಿಕೆಯಿಂದ ಆಧ್ಯಾತ್ಮಿಕ ಜಗತ್ತಿಗೆ ತುಂಬಲಾರದ ನಷ್ಟವಾಗಿದೆ. ಅವರ ಬೆಂಬಲಿಗರಿಗೆ ಈ ನೋವು ತಡೆಯುವ ಶಕ್ತಿ ನೀಡಲಿ. ಓಂ ಶಾಂತಿ ಎಂದಿದ್ದಾರೆ.
ದಾಸ್ ಅವರು ನಿರ್ವಾಣಿ ಅಖಾಡಾಕ್ಕೆ ಸೇರಿದ್ದು, ಅಯೋಧ್ಯೆಯ ಪ್ರಮುಖ ಸಂತರಲ್ಲಿ ಒಬ್ಬರಾಗಿದ್ದಾರೆ. ಅವರ ಅಂತ್ಯ ಸಂಸ್ಕಾರ ಗುರುವಾರ ಅಯೋಧ್ಯೆಯ ಸರಯು ನದಿ ತಟದಲ್ಲಿ ನಡೆಯಲಿದೆ.
ಇದನ್ನೂ ಓದಿ: ಮಹಾಕುಂಭಮೇಳ: ಮಾಘ ಪೂರ್ಣಿಮೆ ಹಿನ್ನೆಲೆ ಭಕ್ತರಿಂದ ಪವಿತ್ರ ಸ್ನಾನ; UP ಸರ್ಕಾರದಿಂದ ಕಟ್ಟೆಚ್ಚರ
ಇದನ್ನೂ ಓದಿ: ಆರ್ಥಿಕ ಅಭಿವೃದ್ಧಿಗೆ ಸಾಕ್ಷ್ಯಿಯಾದ ಮಹಾ ಕುಂಭಮೇಳ: ಹಲವು ಉದ್ಯೋಗಗಳ ಸೃಷ್ಟಿ- ಹೀಗೆ ಹೇಳುತ್ತಿವೆ ಅಂಕಿ - ಅಂಶಗಳು!