ETV Bharat / bharat

ಇನ್ಮುಂದೆ ಕೇವಲ ಆರು ಗಂಟೆಯಲ್ಲಿ ವಾರಾಣಸಿ - ಕೋಲ್ಕತ್ತಾ ಪ್ರಯಾಣ; ಸಮಯ ಉಳಿಸಲಿದೆ ಎಕ್ಸ್​ಪ್ರೆಸ್​ವೇ - VARANASI KOLKATA EXPRESSWAY

ಕಳೆದ ವರ್ಷದ ಶಂಕು ಸ್ಥಾಪನೆ ಮಾಡಿದ್ದ ಈ ಎಕ್ಸ್​ಪ್ರೆಸ್​ವೇ ಕಾಮಗಾರಿ ಜನವರಿಯಿಂದ ಆರಂಭವಾಗಿದ್ದು, ಈ ಮಾರ್ಗ ಹಲವು ರಾಜ್ಯಗಳ ಪ್ರಯಾಣಿಕರಿಗೆ ಅನುಕೂಲವಾಗಿದೆ.

Varanasi-Kolkata Expressway To Cut Down Travel Time To Six Hours
ಎಕ್ಸ್​ಪ್ರೆಸ್​ವೇ (ಈಟಿವಿ ಭಾರತ್​​)
author img

By ETV Bharat Karnataka Team

Published : Feb 12, 2025, 12:12 PM IST

ವಾರಾಣಸಿ : ಉತ್ತರ ಪ್ರದೇಶದ ವಾರಾಣಸಿಯಿಂದ ಪಶ್ಚಿಮ ಬಂಗಾಳದ ಪ್ರಯಾಣ 710 ಕಿ.ಮೀ. ಆದರೆ, ಇಷ್ಟು ದೂರದ ಪ್ರಯಾಣ ಇನ್ಮುಂದೆ ತ್ರಾಸದಾಯಕವಲ್ಲ. ಕಾರಣ, ಷಟ್ಪಥ ಹೆದ್ದಾರಿ ಕೋಲ್ಕತ್ತಾ ಎಕ್ಸ್​ಪ್ರೆಸ್​ವೇ ನಿರ್ಮಾಣವಾಗುತ್ತಿದ್ದು, ಈ ಪ್ರಯಾಣವನ್ನು ಕೇವಲ 6 ಗಂಟೆಯಲ್ಲಿ ಮುಗಿಸಬಹುದಾಗಿದೆ. ಈ ರೀತಿಯ ಗ್ರೀನ್​ ಫೀಲ್ಡ್​ ಯೋಜನೆಯೊಂದು ಸಿದ್ಧವಾಗಿದ್ದು, 35,000 ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಇದರಿಂದ ಪ್ರಯಾಣಿಕರಿಗೆ ಮತ್ತು ಸರಕು - ಸಾಗಣೆ ವಾಹನದ ಸಲಭ ಪ್ರಯಾಣಕ್ಕೆ ಅನುಕೂಲಕರವಾಗಲಿದೆ.

ರಾಂಚಿ ಕೋಲ್ಕತ್ತಾ ಎಕ್ಸ್​ಪ್ರೆಸ್​ವೇ ಎಂದು ಪರಿಚಿತವಾಗಿರುವ ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಅಂದರೆ 2024ರ ಫೆಬ್ರವರಿ 23ರಂದು ಶಂಕು ಸ್ಥಾಪನೆ ಮಾಡಿದ್ದರು. ಇದೀಗ ಅದಕ್ಕೆ ಹೆಚ್ಚುವರಿ ಹೊಸ ಮಾರ್ಗ ಸೇರ್ಪಡನೆಗೊಂಡಿದ್ದು, ಐತಿಹಾಸಿಕ ಗ್ರಾಂಡ್​ ಟ್ರಂಕ್​ ರಸ್ತೆಯು ವಾರಾಣಸಿ ಮತ್ತು ಕೋಲ್ಕತ್ತಾ ಸಂಪರ್ಕಿಸಲಿದೆ. ವಾರಾಣಸಿ - ಕೋಲ್ಕತ್ತಾ ಎಕ್ಸ್​ಪ್ರೆಸ್​ವೇ ಕೋಲ್ಕತ್ತಾದ ಮೂಲಕ ವಾರಾಣಸಿ, ರಾಂಚಿ ಮತ್ತು ಜಾರ್ಖಂಡ್​ ಸಂಪರ್ಕ ಹೊಂದಿದೆ.

ಈ ಕುರಿತು ಮಾತನಾಡಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಎಸ್​ಕೆ ಆರ್ಯಾ, ನಮ್ಮ ಗ್ರೀನ್​ಫೀಲ್ಡ್​ ಯೋಜನೆ ವಾರಾಣಸಿಯಿಂದ ಕೋಲ್ಕತ್ತಾವನ್ನು ಹಾಗೂ ವಾರಾಣಸಿಯಿಂದ ಚಂದೌಲಿಯ ಮಾರ್ಗವನ್ನು ಹೊಂದಿದ್ದು, ಜನವರಿಯಿಂದ ಇದರ ಕೆಲಸ ಆರಂಭವಾಗಿದೆ. ರಾಷ್ಟ್ರೀಯ ಹೆದ್ದಾರಿ 2 ರ ಸಂಚಾರದ ಒಂದು ವಿಭಾಗವು ಕೋಲ್ಕತ್ತಾದ ಜಿಟಿ ರಸ್ತೆಗೆ ತಿರುಗಿಸಲಾಗುವುದು ಎಂದಿದ್ದಾರೆ.

ಜಿಟಿ ರಸ್ತೆ ಹೊರತಾಗಿ ನಮಗೆ ಯಾವುದೇ ಪರ್ಯಾಯ ಮಾರ್ಗವಿರಲಿಲ್ಲ. ಹೊಸ ಎಕ್ಸ್​ಪ್ರೆಸ್​ವೇ ಪರ್ಯಾಯವಾಗಿದ್ದು, ಇದು ಜಿಟಿ ರಸ್ತೆಯ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಪ್ರಯಾಣಿಕರು ಕೋಲ್ಕತ್ತಾಕ್ಕೆ ತೆರಳಲು ಎರಡು ಆಯ್ಕೆಯನ್ನು ಹೊಂದಿದ್ದಾರೆ. ಈ ಯೋಜನೆಯು ₹1,500 ಕೋಟಿಯದ್ದಾಗಿದೆ.

ಗೋರಖ್​ಪುರ್​, ಅಜಂಗಢ, ಮೌ, ಬಲ್ಲಿಯಾ, ಗಾಜಿಪುರ್​, ಜನೌಪುರ್​, ಪ್ರಯಾಗ್​, ಲಕ್ನೋ ಮತ್ತು ದೆಹಲಿ ಪ್ರಯಾಣಿಕರು ಚದೌಲಿ ಮೂಲಕ ಬಿಹಾರ, ಜಾರ್ಖಂಡ್, ಬಂಗಾಳ, ಕೋಲ್ಕತ್ತಾಗೆ ಹೋಗಬಹುದು. ಇದರಿಂದ ಈ ಮುಂಚೆ ನಗರದ ಮಧ್ಯಭಾಗಕ್ಕೆ ಬರುವುದನ್ನು ತಪ್ಪಿಸಬಹುದು.

ಈ ಎಕ್ಸ್​ಪ್ರೆಸ್​ವೇ ನೇರವಾಗಿ ಕೋಲ್ಕತ್ತಾ ಎಕ್ಸ್​ಪ್ರೆಸ್​ವೇಗೆ ಸಂಪರ್ಕ ಕಲ್ಪಿಸಲಿದ್ದು ವಾರಾಣಸಿಯಿಂದ ಕೋಲ್ಕತ್ತಾ ಪ್ರಯಾಣವನ್ನು 12 ರಿಂದ 14 ಗಂಟೆ ಬದಲಾಗಿ 6ಗಂಟೆಗೆ ಇಳಿಸಲಿದೆ ಎಂದರು.

ಇದನ್ನೂ ಓದಿ: ಮಣಿಪುರದಲ್ಲಿ ಮುಂದುವರೆದ ರಾಜಕೀಯ ಅಸ್ಥಿರತೆ; ರಾಷ್ಟ್ರಪತಿ ಆಡಳಿತ ಹೇರುತ್ತಾ ಕೇಂದ್ರ?

ಇದನ್ನೂ ಓದಿ: ಸೇನೆ ವಿರುದ್ಧದ ಹೇಳಿಕೆ ಆರೋಪ ಪ್ರಕರಣ: ರಾಹುಲ್​ ಗಾಂಧಿಗೆ ಸಮನ್ಸ್​ ನೀಡಿದ ಯುಪಿ ಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.