ಬೆಂಗಳೂರು: ರಾಷ್ಟ್ರೀಯ ಭದ್ರತೆಗೆ ದೊಡ್ಡ ಬೆದರಿಕೆ ಎಂದು ಪರಿಗಣಿಸಲಾಗಿರುವ ಐದನೇ ಮತ್ತು ಆರನೇ ತಲೆಮಾರಿನ ರಹಸ್ಯ ವಿಮಾನಗಳನ್ನು ಪತ್ತೆ ಹಚ್ಚಲು ವಿನ್ಯಾಸಗೊಳಿಸಲಾದ ದೇಶದ ಮೊದಲ ವಿಎಚ್ಎಸ್ (ವೆರಿ ಹೈ ಫ್ರೀಕ್ವೆನ್ಸಿ) ರಾಡಾರ್ ಅನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಬೆಂಗಳೂರಿನ ಏರೋ ಇಂಡಿಯಾ 2025ರಲ್ಲಿ ಅನಾವರಣಗೊಳಿಸಿದೆ.
ಈ ಸುಧಾರಿತ ವಿಎಚ್ಎಫ್ ಕಣ್ಗಾವಲು ರಾಡಾರ್ ಪ್ರಸ್ತುತ ಪ್ರಾಯೋಗಿಕ ಹಂತದಲ್ಲಿದೆ. ಇದು ಇತ್ತೀಚಿನ ತಲೆಮಾರಿನ ಡಿಜಿಟಲ್ ಹಂತದ ಶ್ರೇಣಿ ರಾಡಾರ್ ಆಗಿದೆ. ಎಲಿಮೆಂಟ್ ಲೆವೆಲ್ ಡಿಜಿಟಲೀಕರಣ ಮತ್ತು ಆಪ್ಟಿಕಲ್ ಇಂಟರ್ಫೇಸ್ಗಳನ್ನು ಹೊಂದಿದೆ.
ವಿಎಚ್ಎಸ್ ರಾಡಾರ್‌ನ ಕುರಿತು..:
- ರಾಡಾರ್ ತನ್ನ ಹೆಚ್ಚಿನ ಕ್ರಿಯಾತ್ಮಕ ವ್ಯಾಪ್ತಿಯ ಕಾರಣದಿಂದಾಗಿ ಗೊಂದಲದ ವಾತಾವರಣದಲ್ಲಿಯೂ ಕೆಲಸ ಮಾಡಬಲ್ಲದು. ಇದು ಎಲಿಮೆಂಟ್ ಲೆವೆಲ್ ಡಿಜಿಟಲೀಕರಣದಿಂದ ಸಾಧ್ಯವಾಗಿದೆ.
- ಸ್ಟಾರ್ಟಿಂಗ್ ಮತ್ತು ರೊಟೇಶನ್ ಮೋಡ್‌ಗಳಲ್ಲಿ ಕಾರ್ಯನಿರ್ವಹಿಸಬಹುದು.
- ಈ ರಾಡಾರ್ ಅನ್ನು ಕ್ಯೂಯಿಂಗ್ ರಾಡಾರ್ ಆಗಿ ಮೀಸಲಾದ ಟ್ರ್ಯಾಕಿಂಗ್ ರಾಡಾರ್ಗಳೊಂದಿಗೆ ಸಂಯೋಜಿಸಬಹುದು ಹಾಗೂ ಇದು ಸಮಗ್ರ ವಾಯುರಕ್ಷಣಾ ವ್ಯವಸ್ಥೆಯನ್ನು ಒಳಗೊಂಡಿದೆ.
- ಇದನ್ನು ಪರ್ವತ ಅಥವಾ ಇತರ ಸವಾಲಿನ ಭೂಪ್ರದೇಶಗಳಲ್ಲಿ ಅಳವಡಿಸಬಹುದು. ರಾಡಾರ್ 400 ಕಿಲೋಮೀಟರ್‌ವರೆಗೆ ಪತ್ತೆ ವ್ಯಾಪ್ತಿಯನ್ನು ಹೊಂದಿದೆ.
- 400 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬಿ 2 ಬಾಂಬರ್ಗಳು, ಎಫ್-117 ಮತ್ತು ಎಫ್-35 ವಿಮಾನಗಳಂತಹ ರಹಸ್ಯ ಗುರಿಗಳನ್ನು ಪತ್ತೆಹಚ್ಚಲು ಕಡಿಮೆ ಆವರ್ತನದಲ್ಲಿ ಕಾರ್ಯನಿರ್ವಹಿಸುತ್ತದೆ.
- 20 ನಿಮಿಷಗಳಲ್ಲಿ ಯಾವುದೇ ಸ್ಥಳದಲ್ಲಿ ರಾಡಾರ್ ಅನ್ನು ನಿಯೋಜಿಸಬಹುದು.
- ಹೊಸ ರಾಡಾರ್ ಭಾರತಕ್ಕೆ ಸ್ಟೆಲ್ತ್ ವಿರೋಧಿ ಸಾಮರ್ಥ್ಯಗಳನ್ನು ನೀಡುತ್ತದೆ. ಇದು ಗುರಿ ಟ್ರ್ಯಾಕಿಂಗ್ ಮತ್ತು ಏಕಕಾಲಿಕ ಕಣ್ಗಾವಲು ಎರಡನ್ನೂ ಮಾಡಬಲ್ಲದು.
ಸ್ಟೆಲ್ತ್ ತಂತ್ರಜ್ಞಾನ ಹೊಂದಿದ ಈ ವಿಎಚ್ಎಸ್ ರಾಡಾರ್ ಸುಮಾರು ಎರಡು ವರ್ಷಗಳಲ್ಲಿ ಭಾರತೀಯ ವಾಯುಪಡೆಯ (ಐಎಎಫ್) ಬಳಕೆಗೆ ಸಿದ್ಧವಾಗಲಿದೆ ಎಂದು ಎಲ್ಆರ್ಡಿಇ ಸಿಬ್ಬಂದಿ ವಿಶ್ವಾಸ ವ್ಯಕ್ತಪಡಿಸಿದ್ದು, ಈ ಯೋಜನೆಯಲ್ಲಿ 50 ರಿಂದ 60 ತಜ್ಞರು ಮತ್ತು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.
LRDE ಅಧಿಕಾರಿಯ ಹೇಳಿಕೆ: ಐಎಎನ್ಎಸ್ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಎಲ್ಆರ್ಡಿಇಯ ಶಿವಶಂಕರ್, "ಈ ರಾಡಾರ್ ಭಾರತದಲ್ಲಿ ರಹಸ್ಯ ಗುರಿ ಪತ್ತೆಯಲ್ಲಿ ಮಹತ್ವದ ಆವಿಷ್ಕಾರ. ಇದು ಎಲ್ಲಾ ಐದನೇ ಮತ್ತು ಆರನೇ ತಲೆಮಾರಿನ ವಿಮಾನಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿದೆ" ಎಂದರು.
"ಇದು ವಿಎಚ್ಎಸ್ ಕಣ್ಗಾವಲು ರಾಡಾರ್ ಆಗಿದ್ದು, 400 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬಿ 2 ಬಾಂಬರ್ಗಳು, ಎಫ್-117 ಮತ್ತು ಎಫ್-35 ವಿಮಾನಗಳಂತಹ ರಹಸ್ಯ ಗುರಿಗಳನ್ನು ಪತ್ತೆಹಚ್ಚಲು ಕಡಿಮೆ ಆವರ್ತನದಲ್ಲಿ ಕಾರ್ಯನಿರ್ವಹಿಸುತ್ತದೆ. ಈ ರಾಡಾರ್ ಅನ್ನು ಎಚ್ಎಲ್ವಿಗಳನ್ನು ಬಳಸಿಕೊಂಡು ನಿಯೋಜಿಸಲಾಗಿದೆ ಮತ್ತು ಎರಡೂ ವಾಹನಗಳು ಎಲ್ಲಾ ಭೂಪ್ರದೇಶಗಳಲ್ಲಿ ಕಾರ್ಯನಿರ್ವಹಿಸಬಹುದು. 20 ನಿಮಿಷಗಳಲ್ಲಿ ಯಾವುದೇ ಸ್ಥಳದಲ್ಲಿ ರಾಡಾರ್ ಅನ್ನು ನಿಯೋಜಿಸಬಹುದು" ಎಂದು ಶಿವಶಂಕರ್ ಮಾಹಿತಿ ನೀಡಿದರು.
ಪ್ರಸ್ತುತ ಭಾರತ ಇಂಥ ರಾಡಾರ್ ಹೊಂದಿಲ್ಲ: ಪ್ರಸ್ತುತ ಭಾರತವು ಸ್ಥಳೀಯ ಕಡಿಮೆ-ಆವರ್ತನ ರಾಡಾರ್ ಹೊಂದಿಲ್ಲ. ಇಂಥ ರಾಡಾರ್‌ಗಳನ್ನು ಪ್ರಸ್ತುತ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಹೊಸ ರಾಡಾರ್ ಭಾರತಕ್ಕೆ ಸ್ಟೆಲ್ತ್ ವಿರೋಧಿ ಸಾಮರ್ಥ್ಯಗಳನ್ನು ನೀಡುತ್ತದೆ. ಇದು ಗುರಿ ಟ್ರ್ಯಾಕಿಂಗ್ ಮತ್ತು ಏಕಕಾಲಿಕ ಕಣ್ಗಾವಲು ಎರಡನ್ನೂ ಮಾಡಬಲ್ಲದು.
ಇದನ್ನೂ ಓದಿ: ಶತ್ರು ದೇಶಗಳ ರೆಡಾರ್ ಕಣ್ತಪ್ಪಿಸಿ ದಾಳಿ ಮಾಡಲಿದೆ ಭಾರತದಲ್ಲೇ ತಯಾರಾದ AMCA ಏರ್ಕ್ರಾಫ್ಟ್! - AERO INDIA 2025