ETV Bharat / technology

ಆಪಲ್​ ಪ್ರಿಯರಿಗೆ ಶುಭ ಸುದ್ದಿ, ಆದಷ್ಟು ಬೇಗ ಕೈಗೆ ಸಿಗಲಿದೆ ಕಡಿಮೆ ಬೆಲೆಯ ಐಫೋನ್​! - IPHONE SE Model - IPHONE SE MODEL

iPhone SE Launch: ಐಫೋನ್ ಪ್ರಿಯರಿಗೆ ಸೂಪರ್ ಅಪ್‌ಡೇಟ್ ಸಿಕ್ಕಿದೆ. ಬಹು ನಿರೀಕ್ಷಿತ ಐಫೋನ್ ವಿಶೇಷ ಆವೃತ್ತಿ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ಹೋಮ್ ಬಟನ್ ಇಲ್ಲದ ಈ ಮೊಬೈಲ್ ಅನ್ನು ತರಲು ಆಪಲ್ ತಯಾರಿ ನಡೆಸುತ್ತಿದೆ ಎಂದು ವರದಿಯಾಗಿದೆ.

APPLE IPHONE  IPHONE SE  IPHONE SE LAUNCH DATE IN INDIA  IPHONE SE 5G
ಆದಷ್ಟು ಬೇಗ ಕೈಗೆ ಸಿಗಲಿದೆ ಕಡಿಮೆ ಬೆಲೆಯ ಐಫೋನ್ (Apple)
author img

By ETV Bharat Tech Team

Published : Oct 3, 2024, 9:33 AM IST

Updated : Oct 3, 2024, 10:17 AM IST

iPhone SE Launch: ಮಾರುಕಟ್ಟೆಯಲ್ಲಿ ಆಪಲ್ ಐಫೋನ್​ಗಳ ಕ್ರೇಜ್ ಬೇರೆಯೇ ಮಟ್ಟದಲ್ಲಿದೆ. ಐಫೋನ್‌ನ ಹೊಸ ಸರಣಿ ಮತ್ತು ಮಾಡೆಲ್‌ಗಳು ಬಂದ ತಕ್ಷಣ, ಬಹುತೇಕ ಗ್ರಾಹಕರು ಅವುಗಳನ್ನು ಖರೀದಿಸಲು ಮುನ್ನುಗ್ಗುತ್ತಾರೆ. ಆದರೆ ಅವುಗಳ ದುಬಾರಿ ಬೆಲೆಯಿಂದಾಗಿ ಐಫೋನ್ ಸಾಮಾನ್ಯರಿಗೆ ಸಿಗದ ‘ಆಪಲ್’ ಆಗಿದೆ. ಈ ಹಿನ್ನೆಲೆ ಕಡಿಮೆ ಬೆಲೆಗೆ ಐಫೋನ್ ಎಸ್​ಇ ಮಾದರಿಯನ್ನು ತರಲು ಆಪಲ್ ತಯಾರಿ ನಡೆಸಿದೆ. ಮುಂದಿನ ವರ್ಷ ಈ ಮೊಬೈಲ್ ಬಿಡುಗಡೆಯಾಗುವ ಸಾಧ್ಯತೆಗಳಿವೆ.

Apple SE ಮಾಡೆಲ್​: Apple iPhone ಗಳಿಗೆ ಮಾತ್ರವಲ್ಲ ಆ ಕಂಪನಿಯು ತಯಾರಿಸಿದ SE ಮಾದರಿಗಳಿಗೂ ಸಹ ಬೇಡಿಕೆ ಹೆಚ್ಚು. ಕಡಿಮೆ ಬೆಲೆಯಲ್ಲಿ ಕಾಂಪ್ಯಾಕ್ಟ್ ಗಾತ್ರದಲ್ಲಿ ಬರುವ ಈ ವಿಶೇಷ ಆವೃತ್ತಿಗಳು ಪ್ರತ್ಯೇಕ ಅಭಿಮಾನಿಗಳನ್ನು ಹೊಂದಿವೆ. ಆಪಲ್ ಸಾಮಾನ್ಯವಾಗಿ ಐಫೋನ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಸಾಧ್ಯವಾಗದವರಿಗೆ SE ಮಾದರಿಗಳನ್ನು ಹೊರ ತರುತ್ತದೆ. ಆಪಲ್ 2016, 2020 ಮತ್ತು 2022 ರಲ್ಲಿ ಮೂರು SE ಮಾದರಿಗಳನ್ನು ತಂದಿತ್ತು. ಅದರ ನಂತರ, ಆಪಲ್ ಇಲ್ಲಿಯವರೆಗೆ SE ಮಾದರಿಯ ಬಗ್ಗೆ ಯಾವುದೇ ಪ್ರಕಟಣೆಯನ್ನು ಮಾಡಿಲ್ಲ. ಆದರೆ, ಆಪಲ್ ತನ್ನ ನವೀಕರಿಸಿದ iPhone SE ಮಾದರಿಯನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ ಎಂದು ವಿಶ್ವಾಸಾರ್ಹ ಮೂಲಗಳನ್ನು ಉಲ್ಲೇಖಿಸಿ ಬ್ಲೂಮ್‌ಬರ್ಗ್ ಲೇಖನವೊಂದನ್ನು ಪ್ರಕಟಿಸಿದೆ.

ಹೊಸ iPhone SE ಮಾದರಿಯನ್ನು V59 ಎಂಬ ಕೋಡ್ ಹೆಸರಿನೊಂದಿಗೆ ತಯಾರಿಸಲಾಗುತ್ತಿದೆ ಎಂದು ತಿಳಿದಿದೆ. ಆಪಲ್ ಮುಂದಿನ ವರ್ಷ ಮುಂಬರುವ ಐಪ್ಯಾಡ್ ಏರ್ ಮಾದರಿಗಳೊಂದಿಗೆ ಈ ಅಪ್​ಡೇಟ್​ ಮಾಡಿದ SE ಅನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಹೊಸ SE 5G ಕೂಡ ಇದು ಒಳಗೊಂಡಿರಲಿದೆ. ಹಳೆಯ ತಲೆಮಾರಿನ ಹೋಮ್ ಬಟನ್ ಸ್ಥಗಿತಗೊಳಿಸಲಾಗುವುದು ಮತ್ತು ಸಾಮಾನ್ಯ ಐಫೋನ್‌ಗಳಂತಹ ಎಡ್ಜ್-ಟು-ಎಡ್ಜ್ ಸ್ಕ್ರೀನ್ ಪರಿಚಯಿಸುವ ನಿರೀಕ್ಷೆಯಿದೆ ಎಂದು ಈ ಪ್ರಾಡಕ್ಟ್​​ ಸಂಬಂಧಿತ ಕಂಪನಿಯ ಮೂಲಗಳು ಮಾಹತಿ ನೀಡಿವೆ.

ಐಫೋನ್ 16 ಸರಣಿಯಲ್ಲಿ ತಂದ ಆಪಲ್ ಇಂಟೆಲಿಜೆನ್ಸ್ (AI) ಅನ್ನು ಸಹ SE ಮಾದರಿಗೆ ಸೇರಿಸಲಾಗುವುದು ಎಂದು ಹೇಳಲಾಗುತ್ತದೆ. ಹಿಂದಿನ SE ಮಾದರಿಯನ್ನು ಐಫೋನ್ 8 ರಂತೆಯೇ ವಿನ್ಯಾಸದೊಂದಿಗೆ ತರಲಾಯಿತು. ಈ ಬಾರಿಯ ವಿನ್ಯಾಸ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ. ಇದು ಐಫೋನ್ 14 ರಂತೆಯೇ ಇರಲಿದೆ ಎಂಬ ಊಹಾಪೋಹಗಳಿವೆ. ಮತ್ತೊಂದೆಡೆ ಆಪಲ್ J607 ಮತ್ತು J637 ಕೋಡ್ ಹೆಸರುಗಳೊಂದಿಗೆ ಐಪ್ಯಾಡ್ ಏರ್ ಮಾದರಿಗಳನ್ನು ತಯಾರಿಸುತ್ತಿದೆ ಎಂದು ವರದಿಯಾಗಿದೆ. ಆಪಲ್ ಮ್ಯಾಜಿಕ್ ಕೀಬೋರ್ಡ್‌ಗಳು ಮತ್ತು ಮ್ಯಾಕ್ ಕಂಪ್ಯೂಟರ್ ಲೈನ್ - ಅಪ್ ಅನ್ನು ಸಹ ಸಿದ್ಧಪಡಿಸುತ್ತಿದೆ ಎಂದು ತೋರುತ್ತದೆ. ಆದರೆ ಈ ಬಗ್ಗೆ ಆಪಲ್ ಪ್ರತಿನಿಧಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಓದಿ: ಬಿಎಂಡಬ್ಲ್ಯೂನಿಂದ ರಾಯಲ್​ ಎನ್‌ಫೀಲ್ಡ್​ವರೆಗೆ ಅಕ್ಟೋಬರ್​ನಲ್ಲಿ ಬಿಡುಗಡೆಯಾಗುವ ಬೈಕ್​ಗಳು ಯಾವುವು? - October Launches Bikes

Last Updated : Oct 3, 2024, 10:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.