ETV Bharat / sports

3ನೇ ಟಿ20: ವೆಸ್ಟ್​ ಇಂಡೀಸ್​ ವಿರುದ್ಧ ಭಾರತಕ್ಕೆ 60 ರನ್​ಗಳ ಗೆಲುವು; 2-1 ಅಂತರದಿಂದ ಸರಣಿ ಕೈವಶ! - INDW VS WIW T20

ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತದ ವನಿತೆಯರು 60 ರನ್​ಗಳಿಂದ ಗೆಲುವು ಸಾಧಿಸಿದ್ದಾರೆ.

INDW VS WIW 3RD T20  INDIA VS WEST INDIES T20 SERIES  T20 SERIES
Indian Womens Team (IANS)
author img

By ETV Bharat Sports Team

Published : 6 hours ago

India Women vs West Indies Women T20: ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಟಿ20 ಸರಣಿಯ 3ನೇ ಪಂದ್ಯದಲ್ಲಿ ಭಾರತದ ವನಿತೆಯರು ಜಯಭೇರಿ ಭಾರಿಸಿದ್ದಾರೆ. 3 ಪಂದ್ಯಗಳ ಟಿ20 ಸರಣಿಯ ಭಾಗವಾಗಿ ಇಂದು ನಡೆದ ಸರಣಿ ನಿರ್ಣಾಯಕ ಪಂದ್ಯದಲ್ಲಿ ಸ್ಮೃತಿ ಮಂಧಾನ ಪಡೆ ಬೌಲಿಂಗ್​ ಮತ್ತು ಬ್ಯಾಟಿಂಗ್​ ಎರಡರಲ್ಲು ಭರ್ಜರಿ ಪ್ರದರ್ಶನ ತೋರಿ ಕೆರೆಬಿಯನ್ನರ ಸೈನ್ಯವನ್ನು 60 ರನ್​ಗಳಿಂದ ಮಣಿಸಿತು. ಇದರೊಂದಿಗೆ 2-1 ಅಂತರದಲ್ಲಿ ಟಿ20 ಸರಣಿಯನ್ನು ಗೆದ್ದುಕೊಂಡಿತು.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ್ದ ಭಾರತ, ಸ್ಮೃತಿ ಮಂದಾನ (77) ಮತ್ತು ರಿಚಾ ಘೋಶ್​ (54) ಅವರ ಸ್ಪೋಟಕ ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 217 ರನ್​ಗಳನ್ನು ಕಲೆ ಹಾಕಿತು. ಈ ಬೃಹತ್​ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 157 ರನ್​ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಹೆನ್ರಿ (43) ಅಗ್ರ ಸ್ಕೋರರ್ ಎನಿಸಿಕೊಂಡಿರು. ಡಾಟಿನ್ (25) ಮತ್ತು ಹ್ಯಾಲಿ ಮ್ಯಾಥ್ಯೂಸ್ (22), ಜೋಸೆಫ್ (11) ಮತ್ತು ಕ್ಯಾಂಪ್ಬೆಲ್ (17) ತಂಡಕ್ಕೆ ರನ್​ ಕೊಡುಗೆ ನೀಡಿದರು ಗೆಲುವಿನ ದಡಕ್ಕೆ ಕೊಂಡುಯ್ಯಲು ಸಾಧ್ಯವಾಗಲಿಲ್ಲ.

ರಾಧಾ ಯಾದವ್​ ಮಾರಕ ಬೌಲಿಂಗ್: ಭಾರತದ ಪರ ರಾಧಾ ಯಾದವ್​ ವಿಧ್ವಂಸಕ ಬೌಲಿಂಗ್​ ಮಾಡಿದರು, ಇವರ ಮಾರಕ ದಾಳಿಗೆ ಸಿಲುಕಿದ ವೆಸ್ಟ್​ ಇಂಡೀಸ್​ ಅಲ್ಪಮೊತ್ತಕ್ಕೆ ಕುಸಿಯಿತು. ನಾಯಕಿ ಮ್ಯಾಥ್ಯು ಹೇಲಿ, ಅಲ್ಲೇಯೆನಿ, ಗಜ್​ನಬಿ, ಝಾಹಿದ ಜೇಮ್ಸ್​ ವಿಕೆಟ್​ ಉರುಳಿಸಿ ತಂಡದ ಪರ ಹೆಚ್ಚು ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡರು.

7 ಎಸೆತಗಳಲ್ಲಿ 7 ಬೌಂಡರಿ: ಈ ಪಂದ್ಯದಲ್ಲಿ ಸ್ಮೃತಿ ಮಂಧಾನ ಮೂರು ಮತ್ತು ನಾಲ್ಕನೇ ಓವರ್‌ಗಳಲ್ಲಿ ಸತತ ಏಳು ಎಸೆತಗಳಲ್ಲಿ 7 ಬೌಂಡರಿ ಬಾರಿಸುವ ಮೂಲಕ ಘರ್ಜಿಸಿದರು. ಮೂರನೇ ಓವರ್ ಎಸೆದ ಹೆನ್ರಿ ಅವರ ನಾಲ್ಕನೇ ಎಸೆತದಲ್ಲಿ ಮಂಧಾನ ಬೌಂಡರಿ ಬಾರಿಸಿದರು. ಬಳಿಕ ಐದು ಮತ್ತು ಆರನೇ ಎಸೆತದಲ್ಲೂ ಬೌಂಡರಿ ಕಲೆಹಾಕಿದರು. ಇದರ ನಂತರ, ನಾಲ್ಕನೇ ಓವರ್‌ನ ಎರಡನೇ ಎಸೆತದಲ್ಲಿ ಸ್ಟ್ರೈಕ್ ಪಡೆದರು ಮತ್ತು ಡಾಟಿನ್ ಎಸೆದ ಎರಡನೇ ಎಸೆತದಲ್ಲಿ ಬೌಂಡರಿ, ಮೂರನೇ ಎಸೆತದಲ್ಲಿ ಸಿಕ್ಸರ್, ನಾಲ್ಕನೇ ಎಸೆತದಲ್ಲಿ ಬೌಂಡರಿ ಐದನೇ ಎಸೆತದಲ್ಲಿ ಬೌಂಡರಿ ಸಿಡಿಸಿದರು.

ಹ್ಯಾಟ್ರಿಕ್​ ಅರ್ಧಶತಕ: ಸ್ಮೃತಿ ಮಂಧಾನ ಸತತ ಏಳು ಬೌಂಡರಿಗಳನ್ನು ಬಾರಿಸಿದ್ದು ಮಾತ್ರವಲ್ಲದೇ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಸರಣಿಯಲ್ಲಿ ಇದು ಮಂಧಾನ ಅವರ ಮೂರನೇ ಅರ್ಧಶತಕ ಎಂಬುದು ಗಮನಾರ್ಹ. ಇದಕ್ಕೂ ಮುನ್ನ, ಮೊದಲ ಟಿ20 ಪಂದ್ಯದಲ್ಲಿ 54 ರನ್, ಎರಡನೇ ಪಂದ್ಯದಲ್ಲಿ 62 ರನ್‌ಗಳ ಇನ್ನಿಂಗ್ಸ್ ಆಡಿದ್ದರು.

ಇದನ್ನೂ ಓದಿ: ರೋಹಿತ್​, ಕೊಹ್ಲಿ, ಅಶ್ವಿನ್​ ಸೇರಿ 2024ರಲ್ಲಿ ಒಟ್ಟು 11 ಕ್ರಿಕೆಟಿಗರಿಂದ ನಿವೃತ್ತಿ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.