ETV Bharat / bharat

ಸಂಸತ್ ಮುಂದೆ ಹೈಡ್ರಾಮಾ: ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಿದ ದೆಹಲಿ ಪೊಲೀಸರು - PARLIAMENT SCUFFLE

ವಿಪಕ್ಷ ನಾಯಕ ರಾಹುಲ್​ ಗಾಂಧಿ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬಿಜೆಪಿ ನೀಡಿದ ದೂರಿನನ್ವಯ ದೆಹಲಿ ಪೊಲೀಸರು ಎಫ್​​ಐಆರ್​ ದಾಖಲಿಸಿದ್ದಾರೆ.

ರಾಹುಲ್ ಗಾಂಧಿ
ರಾಹುಲ್ ಗಾಂಧಿ (ETV Bharat)
author img

By PTI

Published : 6 hours ago

ನವದೆಹಲಿ: ಸಂಸತ್​ ಆವರಣದ ಮುಂದೆ ಸಂಸದರ ಪ್ರತಿಭಟನೆಯ ವೇಳೆ ನಡೆದ ತಿಕ್ಕಾಟದಲ್ಲಿ ಹಲ್ಲೆ, ಪ್ರಚೋದನೆ ನೀಡಿದ ಆರೋಪದ ಮೇಲೆ ಬಿಜೆಪಿ ನೀಡಿದ ದೂರಿನ ಅನ್ವಯ ವಿಪಕ್ಷ ನಾಯಕ ರಾಹುಲ್​ ಗಾಂಧಿ ವಿರುದ್ಧ ದೆಹಲಿ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ.

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115 (ನೋವುಂಟು ಮಾಡುವುದು), 117 (ಗಾಯ ಮಾಡುವುದು), 125 (ಇತರರ ಜೀವಕ್ಕೆ ಅಪಾಯ), 131 (ಅಪರಾಧ ಶಕ್ತಿ ಬಳಕೆ), 351 (ಬೆದರಿಕೆ) ಆರೋಪಗಳಡಿ ಎಫ್​​ಆರ್​​ಐ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್​ ಗಾಂಧಿ ಅವರನ್ನು ಪೊಲೀಸರು ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ. ಸಂಸದರ ಪ್ರತಿಭಟನೆಯ ವೇಳೆ ನಡೆದ ಎಲ್ಲ ವಿದ್ಯಮಾನಗಳ ಬಗ್ಗೆ ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸುವಂತೆ ಪೊಲೀಸರು ಲೋಕಸಭೆ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.

ಸೆಕ್ಷನ್ 117 ಹೊರತುಪಡಿಸಿ, ವಿಪಕ್ಷ ನಾಯಕನ ವಿರುದ್ಧ ವಿಧಿಸಲಾದ ಎಲ್ಲಾ ಸೆಕ್ಷನ್‌ಗಳು ಜಾಮೀನು ನೀಡಬಹುದಾಗಿವೆ. ಪ್ರಕರಣ ಸಾಬೀತಾದರೆ, ಏಳು ವರ್ಷಗಳ ಜೈಲು ಶಿಕ್ಷೆಯಾಗುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಹುಲ್​ ವಿರುದ್ಧದ ಆರೋಪವೇನು?: ಗೃಹ ಸಚಿವ ಅಮಿತ್​ ಶಾ ಅವರು ಅಂಬೇಡ್ಕರ್​ ಬಗ್ಗೆ ನೀಡಿದ ಹೇಳಿಕೆಯ ವಿರುದ್ಧ ಕಾಂಗ್ರೆಸ್​​ ಇಂದು (ಗುರುವಾರ) ಸಂಸತ್​ ಭವನದ ಮುಂದೆ ಪ್ರತಿಭಟನೆ ನಡೆಸಿತು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸಂಸದರೂ ಪ್ರತಿಭಟನೆ ಆರಂಭಿಸಿದರು. ಈ ವೇಳೆ ಉಭಯ ಸಂಸದರ ನಡುವೆ ತಳ್ಳಾಟ, ನೂಕಾಟ ನಡೆಯಿತು. ಘಟನೆಯಲ್ಲಿ ಬಿಜೆಪಿ ಇಬ್ಬರು ಹಿರಿಯ ಸಂಸದರಾದ ಪ್ರತಾಪ್ ಚಂದ್ರ ಸಾರಂಗಿ ಮತ್ತು ಮುಖೇಶ್ ರಜಪೂತ್ ಕೆಳಗೆ ಬಿದ್ದು ಗಾಯಗೊಂಡರು.

ತಲೆಗೆ ಪೆಟ್ಟು ಬಿದ್ದಿದ್ದರಿಂದ ರಕ್ತಸ್ರಾವವೂ ಉಂಟಾಯಿತು. ತಕ್ಷಣವೇ ಅವರನ್ನು ಆರ್​ಎಂಎಲ್​ ಆಸ್ಪತ್ರೆಗೆ ದಾಖಲಿಸಲಾಯಿತು. ವಿಪಕ್ಷ ನಾಯಕನ ವಿರುದ್ಧ ಬಿಜೆಪಿ ಮಹಿಳಾ ಸಂಸದೆಯೊಬ್ಬರು ಅನುಚಿತ ವರ್ತನೆಯ ಆರೋಪ ಹೊರಿಸಿದ್ದಾರೆ.

ಬಿಜೆಪಿ ಸಂಸದ ಹೇಮಂಗ್ ಜೋಶಿ, ಅನುರಾಗ್ ಠಾಕೂರ್ ಮತ್ತು ಬಾನ್ಸುರಿ ಸ್ವರಾಜ್ ಅವರೊಂದಿಗೆ ಸಂಸತ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆಗೆ ಪ್ರಚೋದನೆ, ಸಂಸದರ ಮೇಲೆ ಹಲ್ಲೆ, ಕೊಲೆ ಯತ್ನ ಆರೋಪಗಳಡಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಕುಸ್ತಿ ಕಣವಾದ ಸಂಸತ್​ ಆವರಣ: ತಿಕ್ಕಾಟದಲ್ಲಿ ಬಿಜೆಪಿ ಸಂಸದರ ತಲೆಗೆ ಗಾಯ, ಐಸಿಯುನಲ್ಲಿ ಚಿಕಿತ್ಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.