ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ 'ಮಂಗಳೂರು ದಸರಾ'ಕ್ಕೆ ಚಾಲನೆ - Mangaluru Dasara - MANGALURU DASARA
🎬 Watch Now: Feature Video
Published : Oct 3, 2024, 8:23 PM IST
ಮಂಗಳೂರು(ದಕ್ಷಿಣ ಕನ್ನಡ): ಶ್ರೀಕ್ಷೇತ್ರ ಕುದ್ರೋಳಿಯ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾಕ್ಕೆ ಬುಧವಾರ ಚಾಲನೆ ದೊರೆಯಿತು.
ಕೊರಗಪ್ಪ ಸಭಾಂಗಣದಲ್ಲಿ ಶ್ರೀ ಶಾರದಾ ಮಾತೆ, ಶ್ರೀ ಮಹಾಗಣಪತಿ ಹಾಗೂ ನವದುರ್ಗೆಯರ ಪ್ರತಿಷ್ಠಾಪನೆಯ ಬಳಿಕ ಶ್ರೀಕ್ಷೇತ್ರ ಕುದ್ರೋಳಿಯ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ದಸರಾ ಉದ್ಘಾಟಿಸಿದರು.
ಶಾರದಾ ಮಾತೆಯನ್ನು ಹೊತ್ತು ದೇವಸ್ಥಾನಕ್ಕೆ ಒಂದು ಪ್ರದಕ್ಷಿಣೆ ಬಂದು ಪ್ರತಿಷ್ಠಾಪನಾ ಮಂಟಪದಲ್ಲಿ ಇರಿಸಲಾಯಿತು. ಪುರೋಹಿತರು ಧಾರ್ಮಿಕ ವಿಧಿ-ವಿಧಾನಗಳ ಪ್ರಕಾರ ಪ್ರತಿಷ್ಠಾಪನೆ ನೆರವೇರಿಸಿದರು. ಶಾರದಾ ಪ್ರತಿಷ್ಠಾಪನಾ ಹುಲಿ ಬೊಕ್ಕಪಟ್ಣ ಅವರು ಹುಲಿಕುಣಿತ ಸೇವೆ ಮಾಡಿದರು.
ಸಭಾಂಗಣದಲ್ಲಿ ಶ್ರೀಮಹಾಗಣಪತಿ, ಸಿದ್ಧಿಧಾತ್ರಿ, ಮಹಾಗೌರಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದಮಾತಾ, ಚಂದ್ರಘಂಟಾ, ಬ್ರಹ್ಮಚಾರಿಣಿ, ಶೈಲಪುತ್ರಿ ಹಾಗು ಆದಿಶಕ್ತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು.
ದಸರಾ ದರ್ಬಾರ್ ಮಂಟಪ ಈ ಬಾರಿಯ ವಿಶೇಷ. ಮಂಟಪದ ಕಂಬಗಳಲ್ಲಿ ಶಿಲಾಬಾಲಿಕೆಯರು, ದಶಾವತಾರದ ಕಲಾಕೃತಿಗಳನ್ನು ಜೋಡಿಸಲಾಗಿದೆ. ಮುಲ್ಕಿಯ ಚಂದ್ರಶೇಖರ ಸುವರ್ಣ ಅವರ ಸುವರ್ಣ ಆರ್ಟ್ಸ್ ತಂಡ ಮಂಟಪ ನಿರ್ಮಿಸಿದೆ. ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ದಸರಾ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ - Mysuru Dasara Flower Show