ಹಾವೇರಿ: ಚಲಿಸುತ್ತಿದ್ದಾಗ ಕಳಚಿದ ಸರ್ಕಾರಿ ಬಸ್​ನ ಹಿಂಬದಿ ಚಕ್ರಗಳು! - Moving Bus Wheels Detached

🎬 Watch Now: Feature Video

thumbnail

By ETV Bharat Karnataka Team

Published : Oct 3, 2024, 9:39 PM IST

ಹಾವೇರಿ: ಹುಬ್ಬಳ್ಳಿಯಿಂದ ಹಾವೇರಿಗೆ ಆಗಮಿಸುತ್ತಿದ್ದ ಸರ್ಕಾರಿ ಬಸ್​ನ ಹಿಂದಿನ ನಾಲ್ಕು ಚಕ್ರಗಳು ದಿಢೀರ್ ಬೇರ್ಪಟ್ಟಿವೆ. ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಹಾವೇರಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇಂದು ಈ ಘಟನೆ ನಡೆಯಿತು. 

ಕೆಎ 25 ಎಫ್ 3164 ಸಂಖ್ಯೆಯ ಬಸ್ ನಾಗನೂರ್ ಕ್ರಾಸ್ ಬಳಿ ಚಲಿಸುತ್ತಿತ್ತು. 40 ಮಂದಿ ಪ್ರಯಾಣಿಕರಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. 

ಚಕ್ರಗಳು ಬೇರ್ಪಟ್ಟ ವಿಷಯ ಗೊತ್ತಾಗುತ್ತಿದ್ದಂತೆ ಚಾಲಕ ಕಲ್ಲಪ್ಪ ಸುಳದ ತಕ್ಷಣ ಬಸ್ ನಿಲ್ಲಿಸಿದ್ದಾರೆ. ಈ ಮೂಲಕ ಸಂಭಾವ್ಯ ಅನಾಹುತ ತಪ್ಪಿಸಿದ ಚಾಲಕನ ಸಮಯಪ್ರಜ್ಞೆಯನ್ನು ಪ್ರಯಾಣಿಕರು ಶ್ಲಾಘಿಸಿದ್ದಾರೆ. 

"ಎಂದಿನಂತೆ ಡಿಪೋದಿಂದ ಬಸ್​ ಹತ್ತಿದೆ. ಬೆಳಗ್ಗೆ ಬಸ್ ಎಡಕ್ಕೆ ವಾಲುತ್ತಿತ್ತು. ಈಗ ಈ ರೀತಿಯಾಗಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಆಗಿಲ್ಲ" ಎಂದು ಚಾಲಕ ಕಲ್ಲಪ್ಪ ತಿಳಿಸಿದರು. 

ಪ್ರಯಾಣಿಕರನ್ನು ಬೇರೆ ವಾಹನಗಳ ಮೂಲಕ ಹಾವೇರಿಗೆ ಕಳುಹಿಸಿಕೊಡಲಾಯಿತು. ಸಣ್ಣಪುಟ್ಟ ಗಾಯಗಳಾಗಿದ್ದ ಓರ್ವ ಪ್ರಯಾಣಿಕನಿಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.  

ಇದನ್ನೂ ಓದಿ: ಉಡುಪಿ : ಚಲಿಸುತ್ತಿದ್ದಾಗಲೇ ಕಳಚಿದ ಕೆಎಸ್ಆರ್​ಟಿಸಿ ಬಸ್​ನ ಟಯರ್, ತಪ್ಪಿದ ಅನಾಹುತ - tyre of the ksrtc bus detached

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.