ETV Bharat / bharat

ದೆಹಲಿ ಮೊಹಲ್ಲಾ ಕ್ಲಿನಿಕ್​​ಗಳನ್ನ ಆಯುಷ್ಮಾನ್​​ ಆರೋಗ್ಯ ಮಂದಿರವಾಗಿ ಪರಿವರ್ತಿಸುವ ಕುರಿತು ಚಿಂತನೆ; ವರದಿ - DELHIS MOHALLA CLINICS

ದೆಹಲಿ ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿದ್ದ ಮೊಹಲ್ಲಾ ಕ್ಲಿನಿಕ್​​​ಗಳ ವಿರುದ್ಧ ಈ ಹಿಂದೆ ದೂರು ಕೇಳಿ ಬಂದಿದ್ದು, ಇದೀಗ ಅವುಗಳಲ್ಲಿ AB-PMJAY ಕೇಂದ್ರವಾಗಿ ರೂಪಿಸುವ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಚಿಂತಿಸುತ್ತಿದೆ.

delhis-mohalla-clinics-may-be-converted-into-ayushman-arogya-mandirs
ದೆಹಲಿ ಮೊಹಲ್ಲಾ ಕ್ಲಿನಿಕ್​ (ANI)
author img

By ETV Bharat Karnataka Team

Published : Feb 14, 2025, 10:20 AM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿನ ಮೊಹಲ್ಲಾ ಕ್ಲಿನಿಕ್​ಗಳನ್ನು ಆಯುಷ್ಯಾನ್​ ಆರೋಗ್ಯ ಮಂದಿರಗಳಾಗಿ ಪರಿವರ್ತಿಸುವ ಕುರಿತು ದೆಹಲಿ ಸರ್ಕಾರ ಕೇಂದ್ರ ಆರೋಗ್ಯ ಸಚಿವಾಲಯ ವರದಿ ಕೋರಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಆರೋಗ್ಯ ಸಚಿವಾಲಯ ಈ ಮೊಹಲ್ಲಾ ಕ್ಲಿನಿಕ್​ಗಳಲ್ಲಿ ಆಯುಷ್ಯಾನ್​ ಭಾರತ್​​ ಆರೋಗ್ಯ ವಿಮೆ ಯೋಜನೆ (AB-PMJAY) ಜಾರಿಗೊಳಿಸುವ ಕುರಿತು ಚಿಂತಿಸುತ್ತಿದೆ. ಮೂಲಗಳ ಪ್ರಕಾರ, 51 ಲಕ್ಷ ಜನರಿಗೆ ಆಯುಷ್ಯಾನ್​ ಕಾರ್ಡ್​ ವಿತರಿಸಲಾಗಿದೆ. ಈ ಮೊಹಲ್ಲಾ ಕ್ಲಿನಿಕ್​ಗಳನ್ನು ಆಯುಷ್ಮಾನ್​​​ ಆರೋಗ್ಯ ಮಂದಿರವಾಗಿ ಪರಿವರ್ತಿಸಿದರೆ, ಅಲ್ಲಿ ಯೋಜನೆಗಳ ಮಾರ್ಗಸೂಚಿಯನ್ನು ಅನುಸರಿಸಲಾಗುವುದು ಎಂದು ತಿಳಿದು ಬಂದಿದೆ.

ಈಗಾಗಲೇ ನಡೆಯುತ್ತಿದೆ ಸಿಬಿಐ ತನಿಖೆ: ಇನ್ನು ಮೊಹಲ್ಲಾ ಕ್ಲಿನಿಕ್​ನಲ್ಲಿ ಭ್ರಷ್ಟಾಚಾರದ ಆರೋಪಗಳ ಕುರಿತು ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ. ವರದಿಯಲ್ಲಿ ಮೊಹಲ್ಲಾ ಚಿಕಿತ್ಸಾಲಯಗಳ ಸ್ಥಿತಿ ಮತ್ತು ಅವುಗಳನ್ನು ಆಯುಷ್ಮಾನ್ ಆರೋಗ್ಯ ಮಂದಿರವಾಗಿ ಪರಿವರ್ತಿಸಬಹುದೇ ಎಂಬ ಕುರಿತು ಕೇಳಲಾಗುವುದು. ಜನವರಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ, ದೆಹಲಿ ಎಎಪಿ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾಗಿದ್ದ ಮೊಹಲ್ಲಾ ಕ್ಲಿನಿಕ್​ಗಳುಮ ಖಾಸಗಿ ಲ್ಯಾಬ್‌ಗಳಿಗೆ ಲಾಭವಾಗುವಂತೆ ರೋಗಿಗಳ ರೋಗನಿರ್ಣಯ ಪರೀಕ್ಷೆ ನಡೆಸಲು ಶಿಫಾರಸು ಮಾಡುತ್ತಿದ್ದವು ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಕುರಿತು ಸಿಬಿಐ ತನಿಖೆಗೆ ಕೂಡ ಎಲ್​ಜಿ ಆದೇಶಿಸಿದ್ದರು .

ಈ ಎಲ್ಲ ರೋಗಗಳ ತಪಾಸಣೆಗೆ ಅನುಕೂಲ ಮಾಡುವ ಯೋಚನೆ: ಈ ಕೇಂದ್ರಗಳನ್ನು ಆಯುಷ್ಮಾನ್ ಆರೋಗ್ಯ ಮಂದಿರಗಳಾಗಿ ಪರಿವರ್ತಿಸಿದರೆ, ಗರ್ಭಕಂಠ, ಸ್ತನ ಮತ್ತು ಬಾಯಿಯ ಕ್ಯಾನ್ಸರ್ ಸೇರಿದಂತೆ ಸಾಮಾನ್ಯ ಸಾಂಕ್ರಾಮಿಕವಲ್ಲದ ರೋಗಗಳ (ಎನ್‌ಸಿಡಿ) ತಪಾಸಣೆ ಮೂಲಕ ಸೇವಾ ವಿತರಣೆ ಮಾಡುವ ಯೋಜನೆ ಹೊಂದಲಾಗಿದೆ.

2025ರ ಜನವರಿ 31 ಅಂಕಿ ಅಂಶದ ಪ್ರಕಾರ ಭಾರತದೆಲ್ಲೆಡೆ 1,76,141 ಆಯುಷ್ಮಾನ್ ಆರೋಗ್ಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಎಎಪಿ ನೇತೃತ್ವದ ದೆಹಲಿ ಸರ್ಕಾರ ಮತ್ತು ಪಶ್ಚಿಮ ಬಂಗಾಳ ಇನ್ನೂ AB-PMJAY ಯೋಜನೆಯನ್ನು ಜಾರಿಗೆ ತಂದಿಲ್ಲ.

AB-PMJAY ಎಂಬುದು ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ಇದು ದೇಶದಲ್ಲಿ ಆರ್ಥಿಕ ದುರ್ಬಲರಾಗಿರುವ ಕುಟುಂಬಕ್ಕೆ ಆರೋಗ್ಯ ಸೇವಾ ಯೋಜನೆಯಾಗಿದೆ. ಅಂದಾಜು 55 ಕುಟುಂಬಗಳಿಗೆ ದ್ವಿತೀಯ ಮತ್ತು ತೃತೀಯ ಆರೈಕೆ ಆಸ್ಪತ್ರೆಗೆ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂಪಾಯಿಗಳ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತದೆ.

ಇತ್ತೀಚಿಗೆ ಈ ಯೋಜನೆಯನ್ನು 70 ವರ್ಷದ ದಾಟಿದ ಹಿರಿಯ ನಾಗರಿಕರಿಗೆ ಅವರ ಸಾಮಾಜಿಕ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆಯೇ ಈ ಯೋಜನೆಯನ್ನು ವಿಸ್ತರಿಸಲಾಗಿದೆ.

ಇದನ್ನೂ ಓದಿ: ಸಂಘರ್ಷಪೀಡಿತ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ

ಇದನ್ನೂ ಓದಿ: ಮದುವೆ ಮಂಟಪಕ್ಕೆ ಬಂದ 'ಅಪರೂಪದ ಅತಿಥಿ': ಕಾರಿನಲ್ಲೇ ಗಂಟೆಗಟ್ಟಲೆ ಕಾದ ವಧು-ವರ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.