ಅಡುಗೆ ಅನಿಲ ಸೋರಿಕೆ: ಮಗನ ಮದುವೆಗಿಟ್ಟಿದ್ದ ಚಿನ್ನಾಭರಣ, ಬಟ್ಟೆಬರೆ ಸುಟ್ಟು ಕರಕಲು - GAS CYLINDER LEAK

🎬 Watch Now: Feature Video

thumbnail

By ETV Bharat Karnataka Team

Published : Feb 14, 2025, 9:43 AM IST

ಹಾವೇರಿ : ಅಡುಗೆ ಅನಿಲ ಸೋರಿಕೆಯಿಂದ ಮನೆಗೆ ಬೆಂಕಿ ಹೊತ್ತಿಕೊಂಡು , ಮಗನ ಮದುವೆಗೆಂದು ಸಾಲ ಮಾಡಿ ತೆಗೆದಿಟ್ಟಿದ್ದ ಚಿನ್ನಾಭರಣ, ಬಟ್ಟೆಬರೆಗೆಳು ಸುಟ್ಟು ಕರಕಲಾಗಿರುವ ಘಟನೆ ಶಿಗ್ಗಾಂವ್​​ ತಾಲೂಕಿನ ಹೊಸೂರು ಯತ್ತಿನಹಳ್ಳಿಯಲ್ಲಿ ನಡೆದಿದೆ.

ಇಮಾಮ್ ಹುಸೇನ್ ಬಾಡದ್ ಎಂಬುವರ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ಇಮಾಮ್ ಹುಸೇನ್ ತನ್ನ ಮಗನ ಮದುವೆಗೆ ಎಲ್ಲಾ ಸಿದ್ಧತೆ ನಡೆಸಿದ್ದರು. ಬ್ಯಾಂಕ್​ನಲ್ಲಿ ಸಾಲ ಮಾಡಿ ಬಟ್ಟೆಯಿಂದ ಹಿಡಿದು ಚಿನ್ನಾಭರಣ ಖರೀದಿ ಮಾಡಿ ತಂದು ಮನೆಯಲ್ಲಿಟ್ಟಿದ್ದರು. ಈ ಘಟನೆಯಿಂದ ಸುಮಾರು 5 ಲಕ್ಷಕ್ಕೂ ಅಧಿಕ ಮೌಲ್ಯದ ಬೆಳ್ಳಿ ಬಂಗಾರ ಮತ್ತು ಇತರ ವಸ್ತುಗಳು ಸುಟ್ಟು ಕರಕಲಾಗಿವೆ‌. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಶಿಗ್ಗಾಂವ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಕಡಲೆ ಬಣವೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಲಕ್ಷಾಂತರ ರೂ. ಮೌಲ್ಯದ ಕಡಲೆ‌ ಬೆಂಕಿಗೆ ಆಹುತಿ

ಇದನ್ನೂ ಓದಿ : ಮೈಸೂರು : ಕಸ ಸಂಗ್ರಹಣ ಘಟಕದಲ್ಲಿ ಬೆಂಕಿ ಅವಘಡ ; ಪಾಲಿಕೆ ಅಧಿಕಾರಿಗಳ ಭೇಟಿ, ಪರಿಶೀಲನೆ 

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.