ಮಾರುಕಟ್ಟೆ ರೌಂಡಪ್: 550 ಅಂಕ ಜಿಗಿದ ಸೆನ್ಸೆಕ್ಸ್, 11,300 ಅಂಕ ತಲುಪಿದ ನಿಫ್ಟಿ - ಇಂದಿನ ಮಾರುಕಟ್ಟೆ
🎬 Watch Now: Feature Video
ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರದ ವಹಿವಾಟಿನಂದು 558 ಅಂಕ ಏರಿಕೆ ಕಂಡಿದ್ದು, ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 11,300 ಅಂಕ ತಲುಪಿದೆ. ಜಾಗತಿಕ ಷೇರುಪೇಟೆಗಳ ಸಕಾರಾತ್ಮಕ ಪ್ರವೃತ್ತಿ ದೇಶಿ ಪೇಟೆಯಲ್ಲೂ ಕಂಡುಬಂದಿದೆ. 30-ಷೇರುಗಳ ಸೆನ್ಸೆಕ್ಸ್ ದಿನದ ಮಧ್ಯಂತರ ವಹಿವಾಟಿನಲ್ಲಿ ಗರಿಷ್ಠ 38,555 ಅಂಕಗಳಿಗೆ ಮುಟ್ಟಿತ್ತು. ಇದು ಅಂತಿಮವಾಗಿ 558.22 ಅಂಕ ಅಥವಾ ಶೇ 1.47ರಷ್ಟು ಏರಿಕೆ ಕಂಡು 38,492.95 ಅಂಕಗಳಲ್ಲಿ ಕೊನೆಗೊಂಡಿತು.