ETV Bharat / health

ಶಾಂಪೂ ಬಳಸಿದ್ರೆ ಹೆಚ್ಚುತ್ತಾ ತಲೆಹೊಟ್ಟು?: ತಜ್ಞರು ಹೇಳಿದ ಸಲಹೆ ಪಾಲಿಸಿದರೆ ಇದಕ್ಕಿದೆ ಪರಿಹಾರ - HOW TO CURE DANDRUFF IN WINTER

How To Cure Dandruff In Winter At Home: ಚಳಿಗಾಲದಲ್ಲಿ ಡ್ಯಾಂಡ್ರಫ್​ ಅಥವಾ ತಲೆಹೊಟ್ಟು ಹೋಗಲಾಡಿಸುವುದು ಹೇಗೆ? ಇದನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು? ಇದಕ್ಕಾಗಿ ಆ್ಯಂಟಿ ಡ್ಯಾಂಡ್ರಫ್ ಶ್ಯಾಂಪೂಗಳನ್ನು ಬಳಸಬಾರದು ಎನ್ನುತ್ತಾರೆ ತಜ್ಞರು.

HOW TO TREAT DANDRUFF IN WINTER  HOW TO MANAGE DANDRUFF IN WINTER  HOW TO HANDLE DANDRUFF NATURALLY  DANDRUFF HOME REMEDIES
ತಲೆಹೊಟ್ಟು ತೊಂದರೆ (Getty Images)
author img

By ETV Bharat Health Team

Published : 14 hours ago

How To Cure Dandruff In Winter At Home: ಇತ್ತೀಚಿನ ದಿನಗಳಲ್ಲಿ ತಲೆಹೊಟ್ಟು ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಏಕೆಂದರೆ, ಬಹುತೇಕರು ತಲೆಹೊಟ್ಟು ತೊಂದರೆಯಿಂದ ಬಳಲುತ್ತಿದ್ದಾರೆ. ಅದರಲ್ಲೂ ಚಳಿಗಾಲದಲ್ಲಿ ಈ ಸಮಸ್ಯೆ ಹೆಚ್ಚು. ಇದು ಕೂದಲು ಉದುರುವಿಕೆಗೆ ಮಾತ್ರವಲ್ಲದೆ ನೆತ್ತಿಯ ತುರಿಕೆ ಮತ್ತು ಮುಖದ ಮೇಲೆ ಸಣ್ಣ ಗುಳ್ಳೆಗಳನ್ನು ಉಂಟುಮಾಡುತ್ತದೆ. ಕೆಲವು ಟಿಪ್ಸ್​ ಪಾಲಿಸಿದರೆ ಚಳಿಗಾಲದಲ್ಲಿ ನಿಮ್ಮನ್ನು ತುಂಬಾ ಕಾಡುವ ಡ್ಯಾಂಡ್ರಫ್‌ನಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ ತಜ್ಞರು.

''ನಮ್ಮಲ್ಲಿ ಅನೇಕರು ಸರಿಯಾಗಿ ತಲೆ ತೊಳೆದುಕೊಳ್ಳದ ಕಾರಣ ಡ್ಯಾಂಡ್ರಫ್ ಉಂಟಾಗುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಆದರೆ ಇದು ಮಿಥ್ಯ. ಒಣ ತಲೆಹೊಟ್ಟು ಅತಿಯಾದ ತೊಳೆಯುವಿಕೆಯಿಂದ ಉಂಟಾಗುತ್ತದೆ. ಫಂಗಲ್ ಸೋಂಕು, ಒತ್ತಡ ಕೂಡ ತಲೆಹೊಟ್ಟುಗೆ ಕಾರಣವಾಗಬಹುದು. ಡ್ಯಾಂಡ್ರಫ್ ಸಮಸ್ಯೆಯಲ್ಲಿ ಹಾರ್ಮೋನುಗಳು ಪ್ರಮುಖ ಪಾತ್ರವಹಿಸುತ್ತವೆ. ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಈ ಸಮಸ್ಯೆ ಹೆಚ್ಚೆನ್ನಬಹುದು.''

-ಶೈಲಜಾ ಸೂರಪನೇನಿ, ಚರ್ಮರೋಗ ತಜ್ಞೆ

ಹಾಗಾದರೆ, ಮುನ್ನೆಚ್ಚರಿಕೆ ಹೇಗೆ?:

  • ಕೆಲವರು ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಹೊಸ ಶಾಂಪೂ ಟ್ರೈ ಮಾಡುತ್ತಾರೆ. ಈ ಶಾಂಪೂ ಬಳಕೆಯಿಂದ ತಲೆಹೊಟ್ಟು ಸಮಸ್ಯೆ ಹೆಚ್ಚುವ ಸಾಧ್ಯತೆಯಿದೆ.
  • ಹೆಚ್ಚು ಕೇಂದ್ರೀಕೃತ ಶ್ಯಾಂಪೂಗಳನ್ನು ಬಳಸದಂತೆ ತಜ್ಞರು ಸಲಹೆ ನೀಡುತ್ತಾರೆ. ತಲೆಹೊಟ್ಟು ಸಮಸ್ಯೆ ತೀವ್ರವಾಗಿದ್ದರೆ ವೈದ್ಯರು ಸೂಚಿಸಿದ ಶಾಂಪೂಗಳನ್ನು ಬಳಸುವುದು ಸೂಕ್ತ.
  • ಹೆಚ್ಚಿನ ಒತ್ತಡದಿಂದಲೂ ತಲೆಹೊಟ್ಟು ಸಮಸ್ಯೆ ತೀವ್ರವಾಗುವ ಸಾಧ್ಯತೆ ಇದೆ. ಅದಕ್ಕಾಗಿಯೇ ಒತ್ತಡವನ್ನು ತಗ್ಗಿಸಲು ನಿಯಮಿತವಾಗಿ ಧ್ಯಾನ ಮತ್ತು ಯೋಗವನ್ನು ಮಾಡಲು ಸೂಚಿಸಲಾಗುತ್ತದೆ.
  • ಚಳಿಗಾಲದಲ್ಲಿ ಪ್ರತಿನಿತ್ಯ ತಲೆಸ್ನಾನ ಮಾಡುವುದು ಒಳ್ಳೆಯದಲ್ಲ. ಇದರಿಂದ ತಲೆಬುರುಡೆಯಿಂದ ಉತ್ಪತ್ತಿಯಾಗುವ ಎಲ್ಲಾ ತೈಲಗಳು ನಿವಾರಣೆಯಾಗಿ ತಲೆಹೊಟ್ಟು ಸಮಸ್ಯೆ ಉಂಟಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
  • ವಿಟಮಿನ್ ಬಿ ಮತ್ತು ಸತು ಸಮೃದ್ಧವಾಗಿರುವ ವಾಲ್ ನಟ್ಸ್, ಮೊಟ್ಟೆ ಮತ್ತು ತರಕಾರಿಗಳು ಆಹಾರದ ಭಾಗವಾಗಿರಬೇಕು ಎಂದು ತಜ್ಞರು ಹೇಳುತ್ತಾರೆ. ಇವು ಕೂದಲು ಒಣಗುವುದನ್ನು ತಡೆಯುತ್ತದೆ ಹಾಗೂ ತಲೆಹೊಟ್ಟು ತಡೆಯುತ್ತದೆ.
  • ಚಳಿಗಾಲದಲ್ಲಿ ಆದಷ್ಟು ಹೇರ್ ಸ್ಟೈಲಿಂಗ್ ಉತ್ಪನ್ನಗಳನ್ನು ಬಳಸದಿರುವುದು ಉತ್ತಮ ಎನ್ನುತ್ತಾರೆ ತಜ್ಞರು. ಈ ಸಮಯದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಕೂದಲು ಸುಲಭವಾಗಿ ಒಣಗುತ್ತದೆ. ಇದರಿಂದ ಈ ಸೀಸನ್​ನಲ್ಲಿ ಇಂತಹ ವಸ್ತುಗಳನ್ನು ಬಳಸಿದರೆ ಅವುಗಳಲ್ಲಿರುವ ರಾಸಾಯನಿಕಗಳ ಪ್ರಭಾವದಿಂದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ವಿವರಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್ ವೀಕ್ಷಿಸಿ: https://www.aad.org/public/everyday-care/hair-scalp-care/scalp/treat-dandruff

ಓದುಗರಿಗೆ ಪ್ರಮುಖ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ತೆಳುವಾದ ಹುಬ್ಬುಗಳ ಸಮಸ್ಯೆಯೇ: ತಜ್ಞರ ಟಿಪ್ಸ್​ ಪಾಲಿಸಿದರೆ ಹುಬ್ಬುಗಳು ದಪ್ಪವಾಗಿ ಬೆಳೆಯುತ್ತವೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.