ನಾಗರ್ಕುರ್ನೂಲ್ (ತೆಲಂಗಾಣ): ತ್ರೀ-ಇನ್-ಒನ್ ಹೈಬ್ರಿಡ್ ಸೈಕಲ್ ಅನ್ನು ವಿನ್ಯಾಸಗೊಳಿಸಿರುವ ನಾಗರಕುರ್ನೂಲ್ ಜಿಲ್ಲೆಯ ನಲ್ಲಮಲ ಪ್ರದೇಶದ 9ನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಸಿಎಂ ರೇವಂತ್ ರೆಡ್ಡಿ ಅವರು ಶ್ಲಾಘಿಸಿದ್ದಾರೆ. ಬಲ್ಮೂರ್ ಮಂಡಲದ ಜಿಲ್ಲಾ ಪಂಚಾಯಿತಿ ಪ್ರೌಢಶಾಲೆಯ ಗಗನ್ ಚಂದ್ರ ಪ್ರಶಂಸೆಗೆ ಪಾತ್ರರಾದ ವಿದ್ಯಾರ್ಥಿ.
ಬಾಲ್ಯದಿಂದಲೂ ಕಾಡುತ್ತಿದ್ದ ತನ್ನ ಅನಾರೋಗ್ಯವನ್ನು ಲೆಕ್ಕಿಸಿದೇ ಅತ್ಯಾಧುನಿಕ ತ್ರೀ-ಇನ್-ಒನ್ ಹೈಬ್ರಿಡ್ ಸೈಕಲ್ ವಿನ್ಯಾಸಗೊಳಿಸುವ ಮೂಲಕ ಗಗನ್ ಚಂದ್ರ ಗಮನ ಸೆಳೆದಿದ್ದಾನೆ. ಜನವರಿ 20 ರಿಂದ 25 ರವರೆಗೆ ಪುದುಚೇರಿಯಲ್ಲಿ ನಡೆದ ದಕ್ಷಿಣ ಭಾರತದ ಮಟ್ಟದ ಮಕ್ಕಳ ವಿಜ್ಞಾನ ಪ್ರದರ್ಶನದಲ್ಲಿ ಈ ವಿದ್ಯಾರ್ಥಿ ಮಾಡಿದ ಆವಿಷ್ಕಾರ ಮೂರನೇ ಸ್ಥಾನ ಪಡೆದಿದ್ದಲ್ಲದೇ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೂ ಆಯ್ಕೆಯಾಗಿದೆ.
The inspiring story I came across today is of 14 year old Gagan Chandra, whose innovation has started capturing attention.
— Revanth Reddy (@revanth_anumula) February 2, 2025
His design and make of a hybrid 3-in-1 bicycle, solar-powered, with backup of battery & petrol is an amazing invention.
I wholeheartedly congratulate… pic.twitter.com/qR7X6xwELS
ಬಾಲ್ಯದಿಂದಲೂ ಆರೋಗ್ಯ ಸಮಸ್ಯೆ: ವಿದ್ಯಾರ್ಥಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ ರೇವಂತ್ ರೆಡ್ಡಿ, ವಿದ್ಯಾರ್ಥಿ ಗಗನ್ ಚಂದ್ರ ಅವರನ್ನು ಅಭಿನಂದಿಸಿದ್ದಾರೆ. ನಾಗರಕುರ್ನೂಲ್ ಜಿಲ್ಲೆಯ ಮಚಿನಪಲ್ಲಿಯ ಸುವರ್ಣ ಮತ್ತು ಭಾಸ್ಕರ್ ದಂಪತಿಯ ಪುತ್ರನಾಗಿರುವ ಗಗನ್ ಚಂದ್ರನಿಗೆ ಜನಿಸಿದ ಕೆಲವು ದಿನಗಳಲ್ಲೇ ನ್ಯುಮೋನಿಯಾ ಅಪ್ಪಳಿಸಿತ್ತು. ಸುಮಾರು ಏಳು ವರ್ಷಗಳ ಕಾಲ ನ್ಯುಮೋನಿಯಾದ ವಿರುದ್ಧ ಹೋರಾಡುತ್ತಲೇ ಬಂದಿದ್ದನು. ಈ ಅನಾರೋಗ್ಯದ ಸಮಸ್ಯೆಯ ಹೊರತು ತನ್ನ ಆವಿಷ್ಕಾರವನ್ನು ಮುಂದುವರೆಸಿದ್ದನು. ಬಲ್ಮೂರ್ ಮಂಡಲದ ಜಿಲ್ಲಾ ಪಂಚಾಯಿತಿ ಪ್ರೌಢಶಾಲೆಯ ವಿದ್ಯಾರ್ಥಿಯೂ ಆಗಿರುವ ಗಗನ್ ಚಂದ್ರ, ಸಾಮಾನ್ಯ ಸೈಕಲ್‌ನಂತೆ ಪೆಡಲ್ ಮಾಡಬಹುದಾದ, ಸೌರಶಕ್ತಿಯಿಂದ ಚಾಲಿಸಬಲ್ಲ ಜೊತೆಗೆ ವಿದ್ಯುತ್ ಚಾರ್ಜ್ ಮಾಡಬಹುದಾದ ವಿಶಿಷ್ಟ ಸೈಕಲ್ ವಿನ್ಯಾಸಗೊಳಿಸಿ ಇದೀಗ ಸೈ ಅನ್ನಿಸಿಕೊಂಡಿದ್ದಾನೆ.
3 ರೀತಿಯಲ್ಲಿ ಬಳಸಬಹುದಾದ ಆವಿಷ್ಕಾರ: ಶಿಕ್ಷಕರ ಸಹಾಯದಿಂದ ಹೈಬ್ರಿಡ್ ಸೈಕಲ್ ತಯಾರಿಸಿದ ಗಗನ್ ಚಂದ್ರ, ಅದಕ್ಕೆ ಬೇಕಾದ ಸೌರ ಫಲಕ, ಬ್ಯಾಟರಿ, ವಿದ್ಯುತ್ ಹೊಂದಾಣಿಕೆಗಾಗಿ ವೈಪರ್ ಮೋಟಾರ್ (ಬೂಸ್ಟರ್), ಸೆಲ್‌ಫೋನ್ ಡಿಸ್ಪ್ಲೇ ಮತ್ತು ಜಿಪಿಎಸ್ ಅಳವಡಿಸಿದ್ದಾನೆ. ಒಂದು ಬಾರಿ ಸೌರಶಕ್ತಿಯಿಂದ ಚಾರ್ಜ್ ಆದರೆ 30 ಕಿ.ಮೀ. ಪ್ರಯಾಣಿಬಹುದಾಗಿದೆ. ಸೂರ್ಯನ ಬೆಳಕು ಲಭ್ಯವಿಲ್ಲದಿದ್ದಾಗ, ಅದನ್ನು ಎಲೆಕ್ಟ್ರಿಕ್ ಬೈಕ್‌ನಂತೆ ಚಾರ್ಜ್ ಮಾಡಬಹುದು ಮತ್ತು ದ್ವಿಚಕ್ರ ವಾಹನದಂತೆ ಓಡಿಸಬಹುದು. ನೀವು ಸಾಮಾನ್ಯ ಸೈಕಲ್‌ನಂತೆ ಇದನ್ನು ಸವಾರಿ ಕೂಡ ಮಾಡಬಹುದಾಗಿದೆ.
ಸಿಎಂ ಅಭಿನಂದನೆ: ಜನವರಿ 20 ರಿಂದ 25 ರವರೆಗೆ ಪುದುಚೇರಿಯಲ್ಲಿ ನಡೆದ ದಕ್ಷಿಣ ಭಾರತ ಮಕ್ಕಳ ವಿಜ್ಞಾನ ಪ್ರದರ್ಶನದಲ್ಲಿ ವಿದ್ಯಾರ್ಥಿ ಗಗನ್ ಚಂದ್ರ ಅವರ ಆವಿಷ್ಕಾರವು ಮೂರನೇ ಸ್ಥಾನ ಪಡೆದುಕೊಂಡಿದೆ. ಜೊತೆಗೆ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ. ಈ ವಿದ್ಯಾರ್ಥಿ ಕಥೆ ಇಂದು ನನಗೆ ಸ್ಪೂರ್ತಿ ನೀಡಿದೆ. ಜೊತೆಗೆ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೂಡ ನೀಡಲ್ಲದಾಗಿದೆ. ಬ್ಯಾಟರಿ ಮತ್ತು ಪೆಟ್ರೋಲ್ ಬ್ಯಾಕಪ್ ಹೊಂದಿರುವ ಸೌರಶಕ್ತಿ ಚಾಲಿತ ಹೈಬ್ರಿಡ್ 3-ಇನ್-1 ಬೈಸಿಕಲ್‌ನ ಅವನ ವಿನ್ಯಾಸ ಮತ್ತು ತಯಾರಿಕೆಯು ಅದ್ಭುತ ಆವಿಷ್ಕಾರವಾಗಿದೆ. ನಾನು ಅವನನ್ನು ಪೂರ್ಣ ಹೃದಯದಿಂದ ಅಭಿನಂದಿಸುತ್ತೇನೆ. ಹೆಚ್ಚಿನ ಪ್ರಯೋಗಗಳನ್ನು ನಡೆಸಲು ಮತ್ತು ಹೆಚ್ಚಿನ ನಾವೀನ್ಯತೆಗಳಿಗಾಗಿ ನಾವು ಅವನಿಗೆ ಬೆಂಬಲ ನೀಡುತ್ತೇವೆ ಎಂದು ವಿದ್ಯಾರ್ಥಿ ಗಗನ್ ಚಂದ್ರ ಅವರನ್ನು ತಮ್ಮ ಎಕ್ಸ್ ಖಾತೆಯಲ್ಲಿ ಅಭಿನಂದಿಸಿದ್ದಾರೆ.
ಇದನ್ನೂ ಓದಿ: ನೀರಿನಿಂದ ಕ್ಯಾನ್ಸರ್ಕಾರಕ ಬಣ್ಣ ತೆಗೆದು ಹಾಕುವ ತಂತ್ರಜ್ಞಾನ ಆವಿಷ್ಕರಿಸಿದ ಎನ್ಐಟಿ ರೂರ್ಕೆಲಾ - WASTE WATER TREATMENT