ETV Bharat / technology

ಮುಂದಿನ ವರ್ಷ ದೇಶಿಯ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಸವೆನ್​ ಸೀಟರ್​ ಹೈಬ್ರಿಡ್​ ಕಾರುಗಳಿವು! - UPCOMING HYBRID CARS

Upcoming Hybrid Cars: ಭಾರತೀಯ ಮಾರುಕಟ್ಟೆಯಲ್ಲಿ ಹೈಬ್ರಿಡ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಬೇಡಿಕೆಯನ್ನು ಗಮನಿಸಿದ ಹಲವು ಹೈಬ್ರಿಡ್ ಕಾರು ಕಂಪನಿಗಳು ತಮ್ಮ ವಾಹನಗಳ ಸವೆನ್​ ಸೀಟರ್ ಮಾಡೆಲ್​ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧಗೊಂಡಿವೆ.

UPCOMING HYBRID CARS IN 2025  SEVEN SEATER CARS  CARS FEATURES  HYBRID CARS PRICE IN INDIA
ಸವೆನ್​ ಸೀಟರ್​ ಹೈಬ್ರಿಡ್​ ಕಾರು (Toyota, Maruti Suzuki and Kia)
author img

By ETV Bharat Tech Team

Published : 4 hours ago

Upcoming Hybrid Cars In 2025: ಹಲವಾರು ಹೊಸ ಹೈಬ್ರಿಡ್ ಕಾರುಗಳು ಒಂದರ ನಂತರ ಒಂದರಂತೆ ಭಾರತದಲ್ಲಿ ಪ್ರವೇಶಿಸಲಿವೆ. ಉತ್ತರ ಪ್ರದೇಶ ಸೇರಿದಂತೆ ದೇಶದ ಇತರ ರಾಜ್ಯ ಸರ್ಕಾರಗಳು ಹೈಬ್ರಿಡ್ ಕಾರುಗಳ ಬಳಕೆಗೆ ಗಮನ ನೀಡುತ್ತಿವೆ. ಮುಂಬರುವ ದಿನಗಳಲ್ಲಿ ಈ ಕಾರುಗಳಿಗೆ ದೇಶಾದ್ಯಂತ ಹೆಚ್ಚಿನ ಬೇಡಿಕೆ ಕಾಣಬಹುದು.

ಹೈಬ್ರಿಡ್ ಕಾರುಗಳು ಒಂದಕ್ಕಿಂತ ಹೆಚ್ಚು ಮೋಡ್‌ಗಳಲ್ಲಿ ಓಡಿಸಬಹುದಾದ ವಾಹನಗಳಾಗಿವೆ. ಇದು ಇಂಟರ್ನಲ್​ ಕಾಂಬಿಷನ್​ ಎಂಜಿನ್ ಮತ್ತು ಮತ್ತೊಂದು ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದೆ. ಈ ಕಾರಿನಲ್ಲಿ ಅಳವಡಿಸಲಾಗಿರುವ ಬ್ಯಾಟರಿಯು ರಿಜೆನ್ರೆಟಿವ್​ ಬ್ರೇಕಿಂಗ್ ಸಿಸ್ಟಮ್ ಮತ್ತು ಇಂಟರ್ನಲ್​ ಕಾಂಬಿಷನ್ ಎಂಜಿನ್ ಸಹಾಯದಿಂದ ಚಾರ್ಜ್ ಆಗುತ್ತದೆ. ಹೊಸ ವರ್ಷದಲ್ಲಿ ಬಿಡುಗಡೆಯಾಗಲಿರುವ ಹೈಬ್ರಿಡ್ ಕಾರುಗಳ ಬಗ್ಗೆ ತಿಳಿಯೋಣ ಬನ್ನಿ.

Toyota Hyryder: ಟೊಯೊಟಾ ಹೇರೈಡರ್ 5 ಆಸನಗಳ ಎಸ್‌ಯುವಿ. ಈ ಕಾರಿನ ಒಂದು ಲಕ್ಷಕ್ಕೂ ಹೆಚ್ಚು ಯುನಿಟ್‌ಗಳು ಇಲ್ಲಿಯವರೆಗೆ ಮಾರುಕಟ್ಟೆಯಲ್ಲಿ ಮಾರಾಟವಾಗಿವೆ. ಈ ಕಾರಿನ ಆನ್ ರೋಡ್ ಬೆಲೆ 13.23 ಲಕ್ಷ ರೂಪಾಯಿಗಳಿಂದ ಆರಂಭವಾಗಿ 23.65 ಲಕ್ಷ ರೂಪಾಯಿಗಳವರೆಗೂ ಇದೆ. ಈಗ ವಾಹನ ತಯಾರಕರು ಈ ಹೈಬ್ರಿಡ್ ಕಾರಿನ 7-ಸೀಟರ್ ಮಾದರಿಯನ್ನು 2025 ರಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದೆ. 7 ಆಸನಗಳ ಈ ಕಾರಿನ ಎಕ್ಸ್ ಶೋ ರೂಂ ಬೆಲೆ ಸುಮಾರು 17 ಲಕ್ಷ ರೂ.ದಿಂದ ಪ್ರಾರಂಭವಾಗಬಹುದು ಎಂದು ಅಂದಾಜಿಸಲಾಗಿದೆ.

Maruti Grand Vitara: ಟೊಯೊಟಾ ಹೇರೈಡರ್ ಜೊತೆಗೆ ಅದರ ಪ್ರತಿಸ್ಪರ್ಧಿ ಮಾರುತಿ ಗ್ರಾಂಡ್ ವಿಟಾರಾ 7-ಸೀಟರ್ ಮಾದರಿಯನ್ನು ಸಹ ಮಾರುಕಟ್ಟೆಯಲ್ಲಿ ತರಬಹುದು. ಗ್ರ್ಯಾಂಡ್ ವಿಟಾರಾ ಟೊಯೋಟಾ ಹೇರೈಡರ್‌ನ ಮರುಬ್ಯಾಡ್ಜ್ ಆವೃತ್ತಿಯಾಗಿದೆ. ಈ ಎರಡು ವಾಹನ ತಯಾರಕರ ಜಂಟಿ ಉದ್ಯಮದ ಮೊದಲ ಕಾರು ಇದಾಗಿದೆ. ಗ್ರ್ಯಾಂಡ್ ವಿಟಾರಾದ 7 ಆಸನಗಳ ಮಾದರಿಯು 2025 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ವಾಹನದ ಎಕ್ಸ್ ಶೋ ರೂಂ ಬೆಲೆ ಸುಮಾರು 18.5 ಲಕ್ಷ ರೂ.ದಿಂದ ಪ್ರಾರಂಭವಾಗಬಹುದು.

ಮಾರುತಿಯ ಸಣ್ಣ ಹೈಬ್ರಿಡ್ ಕಾರು: ಜನರ ಬೇಡಿಕೆಯನ್ನು ಅರ್ಥಮಾಡಿಕೊಂಡ ಮಾರುತಿ ಎಲ್ಲಾ ವಿಭಾಗಗಳಲ್ಲಿ ಕಾರುಗಳನ್ನು ತರಲು ಬಯಸಿದೆ. ಈಗ ವಾಹನ ತಯಾರಕರು ಭಾರತದಲ್ಲಿ ಸಣ್ಣ ಮತ್ತು ಕೈಗೆಟುಕುವ ಹೈಬ್ರಿಡ್ ಕಾರನ್ನು ತರಲು ಯೋಜಿಸುತ್ತಿದೆ. ಮಾರುತಿ 2025 ರಲ್ಲಿ ಮಾರುಕಟ್ಟೆಯಲ್ಲಿ ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಸ್ವಿಫ್ಟ್ ಅಥವಾ ಫೋರ್ಡ್ ಅನ್ನು ಪ್ರಾರಂಭಿಸಬಹುದು. ಈ ಕಾರಿನ ಎಕ್ಸ್ ಶೋ ರೂಂ ಬೆಲೆ ಸುಮಾರು 8.5 ಲಕ್ಷ ರೂ.ದಿಂದ ಶುರುವಾಗಬಹುದು.

Kia Seltos Hybrid: ಮಾಧ್ಯಮ ವರದಿಗಳ ಪ್ರಕಾರ, ಕಿಯಾ ತನ್ನ ಜನಪ್ರಿಯ ಸಬ್ - ಕಾಂಪ್ಯಾಕ್ಟ್ ಎಸ್​ಯುವಿ ಸೆಲ್ಟೋಸ್‌ನ ಹೈಬ್ರಿಡ್ ಆವೃತ್ತಿಯಲ್ಲಿ ಕೆಲಸ ಮಾಡುತ್ತಿದೆ. ಕಿಯಾ ಸೆಲ್ಟೋಸ್ ಜನಪ್ರಿಯತೆ ಮತ್ತು ಭಾರತದಲ್ಲಿ ಹೆಚ್ಚುತ್ತಿರುವ ಹೈಬ್ರಿಡ್ ಕಾರುಗಳ ಕ್ರೇಜ್‌ನೊಂದಿಗೆ, ಈ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲೂ ಬಿಡುಗಡೆ ಮಾಡಬಹುದು. ಕಿಯಾ ಸೆಲ್ಟೋಸ್ ಹೈಬ್ರಿಡ್ ಅನ್ನು 2025 ರಲ್ಲಿ 15 ಲಕ್ಷ ರೂಪಾಯಿಗಳ ಎಕ್ಸ್ ಶೋ ರೂಂ ಬೆಲೆಯೊಂದಿಗೆ ಬಿಡುಗಡೆ ಮಾಡಬಹುದಾಗಿದೆ.

ಓದಿ: ಟಾಟಾ ಕಾರು, ಎನ್​ಫೀಲ್ಡ್​ ಬೈಕ್​ ಸೇರಿದಂತೆ ಉದ್ಯೋಗಿಗಳಿಗೆ ದುಬಾರಿ ಗಿಫ್ಟ್​ ನೀಡಿದ ಕಂಪನಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.