ETV Bharat / technology

ಆಹಾ!! ಹೊಸ ಇಂಟರ್​ನೆಟ್​ ಟಿವಿ ಸೇವೆ ಪ್ರಾರಂಭಿಸಿದ ಬಿಎಸ್​ಎನ್​ಎಲ್​: ಖಾಸಗಿ ಕಂಪನಿಗಳಿಗೆ ಶುರುವಾಯ್ತು ಢವ-ಢವ! - BSNL FREE INTERMENT TV SERVICE

BSNL Launches Free Intranet TV: ಬಿಎಸ್​ಎನ್​ಎಲ್​ ಈಗ ಖಾಸಗಿ ಕಂಪನಿಗಳಿಗೆ ಠಕ್ಕರ್​ ನೀಡಲು ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಓಟಿಟಿ ಪ್ಲಾಟ್​ಫಾರ್ಮ್​ಗಳು ಬಿಎಸ್​ಎನ್​ಎಲ್​ ವಿರುದ್ಧ ತೀವ್ರ ಪೈಪೋಟಿ ಎದುರಿಸಲಿವೆ. ಏಕೆ ಎಂಬುದು ಇಲ್ಲಿ ತಿಳಿಯಿರಿ..

BSNL LAUNCHES FREE INTRANET TV  BSNL FREE OTT SERVICE  BSNL COSTUMERS  BSNL NEWS
ಹೊಸ ಇಂಟರ್​ನೆಟ್​ ಟಿವಿ ಸೇವೆ ಪ್ರಾರಂಭಿಸಿದ ಬಿಎಸ್​ಎನ್​ಎಲ್ (IANS)
author img

By ETV Bharat Tech Team

Published : 4 hours ago

BSNL Launches Free Intranet TV: ಬಿಎಸ್​ಎನ್​ಎಲ್​ ತನ್ನ ಮೊಬೈಲ್​ ಚಂದಾದಾರರಿಗಾಗಿ ಹೊಸ ಇಂಟರ್ನೆಟ್ ಟಿವಿ ಸೇವೆಯನ್ನು ಪ್ರಾರಂಭಿಸಿದೆ. ಇದರ ಹೆಸರು BiTV ಅಂತಾ. ಈ ಹೊಸ ಇಂಟರ್ನೆಟ್ ಟಿವಿಯಲ್ಲಿ ನೀವು ಸುಮಾರು 300 ಟಿವಿ ಚಾನೆಲ್‌ಗಳು, ಚಲನಚಿತ್ರಗಳು, ವೆಬ್ ಸೀರಿಸ್​ ಮತ್ತು ಸಾಕ್ಷ್ಯಚಿತ್ರಗಳು ಉಚಿತವಾಗಿ ನೋಡಬಹುದಾಗಿದೆ. ಇದರ ಬಗೆಗಿನ ಹೆಚ್ಚಿನ ಮಾಹಿತಿ ಇಲ್ಲಿದೆ..

ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್​ಎನ್​ಎಲ್​ ತನ್ನ ಗ್ರಾಹಕರಿಗಾಗಿ ಮೊಬೈಲ್‌ನಲ್ಲಿ ಇಂಟರ್ನೆಟ್ ಟಿವಿಯನ್ನು ಪ್ರಾರಂಭಿಸಿದೆ. ಈ ಸೇವೆಗೆ ಬಿಎಸ್​ಎನ್​ಎಲ್​ನ ಇಂಟ್ರಾನೆಟ್ ಟಿವಿ (BiTV) ಎಂದು ಹೆಸರಿಸಲಾಗಿದೆ. ಈ ಯೋಜನೆಯಲ್ಲಿ ಕಂಪನಿಯು ಮೊಬೈಲ್‌ನಲ್ಲಿ 300 ಟಿವಿ ಚಾನೆಲ್‌ಗಳನ್ನು ನೀಡುತ್ತಿದೆ. ಸದ್ಯ ಈ ಯೋಜನೆಯನ್ನು ಪುದುಚೇರಿಯಲ್ಲಿ ಪ್ರಾರಂಭಿಸಲಾಗಿದೆ. ನಂತರ ಇದನ್ನು ದೇಶದ ಇತರ ಭಾಗಗಳಲ್ಲಿಯೂ ಅಳವಡಿಸಲಾಗುತ್ತದೆ. ಇದರಲ್ಲಿ ಬಿಎಸ್​ಎನ್​ಎಲ್​ ಗ್ರಾಹಕರು ಯಾವುದೇ ವೆಚ್ಚವಿಲ್ಲದೇ ಉತ್ತಮ ಗುಣಮಟ್ಟದ ಮನರಂಜನೆ ಪಡೆಯಲಿದ್ದಾರೆ.

BiTV ಯ ಪ್ರಯೋಜನಗಳೇನು?: ಈ ಸೇವೆಯಲ್ಲಿ ಗ್ರಾಹಕರು ಯಾವುದೇ ಶುಲ್ಕವನ್ನು ಪಾವತಿಸದೇ ಅನಿಯಮಿತವಾಗಿ ವೀಕ್ಷಿಸಬಹುದು. ಗ್ರಾಹಕರು ಲೈವ್ ಟಿವಿ ಜೊತೆಗೆ ವಿವಿಧ ಭಾಷೆಗಳಲ್ಲಿ ಚಲನಚಿತ್ರಗಳು, ವೆಬ್ ಸೀರಿಸ್​ ಮತ್ತು ಸಾಕ್ಷ್ಯಚಿತ್ರಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಈ ಸೇವೆಗೆ ಬಿಎಸ್​ಎನ್​ಎಲ್​ನ ಸುರಕ್ಷಿತ ಇಂಟ್ರಾನೆಟ್ ತಂತ್ರಜ್ಞಾನವನ್ನು ಬಳಸಲಾಗುವುದು. ಇದು ಅತ್ಯುತ್ತಮ ವಿಡಿಯೋ ಗುಣಮಟ್ಟವನ್ನು ಒದಗಿಸುತ್ತದೆ. ಈ ಸೇವೆಗಾಗಿ BSNL OTTplay Premium ನೊಂದಿಗೆ ಪಾಲುದಾರಿಕೆ ಹೊಂದಿದೆ. ಇದು OTT ಅಗ್ರಿಗೇಟರ್ ಆಗಿದ್ದು, ಇದು 37 ಪ್ರೀಮಿಯಂ OTT ಪ್ಲಾಟ್‌ಫಾರ್ಮ್‌ಗಳು ಮತ್ತು 500+ ಲೈವ್ ಟಿವಿ ಚಾನೆಲ್‌ಗಳಿಂದ ವಿಷಯವನ್ನು ಒದಗಿಸುತ್ತದೆ.

ಮುಂದಿನ ದಿನಗಳಲ್ಲಿ ಈ ರಾಜ್ಯಗಳಲ್ಲಿಯೂ ಲಭ್ಯ: ಪುದುಚೇರಿಯ ನಂತರ ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಮುಂದಿನ ತಿಂಗಳು ಈ ಸೇವೆಯನ್ನು ಪ್ರಾರಂಭಿಸಲಾಗುವುದು. ಶೀಘ್ರದಲ್ಲೇ ದೇಶದ ಇತರ ರಾಜ್ಯಗಳಲ್ಲಿ ಬಿಡುಗಡೆ ಮಾಡಲು ಕಂಪನಿ ಸಿದ್ಧತೆ ನಡೆಸಿದೆ. ಬಿಎಸ್‌ಎನ್‌ಎಲ್ ಸಿಎಂಡಿ ರಾಬರ್ಟ್ ರವಿ ಮಾತನಾಡಿ, BiTV ಮೂಲಕ ಕಂಪನಿಯು ಪ್ರತಿಯೊಬ್ಬ ಗ್ರಾಹಕರಿಗೆ ಎಲ್ಲಿಂದಲಾದರೂ ಮತ್ತು ಯಾವುದೇ ಸಮಯದಲ್ಲಿ ಈ ಸೇವೆಯನ್ನು ಬಳಸಬಹುದಾಗಿದೆ ಎಂದು ಹೇಳಿದರು.

ಅಕ್ಟೋಬರ್‌ನಲ್ಲಿ ದೇಶದಾದ್ಯಂತ ಬಿಡುಗಡೆಯಾದ ಐಎಫ್‌ಟಿವಿಯನ್ನು ಪುದುಚೇರಿಯಲ್ಲಿ ಬಿಎಸ್‌ಎನ್‌ಎಲ್ ಬಿಡುಗಡೆ ಮಾಡಿದೆ. ಇದು ಉಚಿತ ಸೇವೆಯೂ ಆಗಿದೆ. ಇದರಲ್ಲಿ 500 ಕ್ಕೂ ಹೆಚ್ಚು ಟಿವಿ ಚಾನೆಲ್‌ಗಳು ಬಿಎಸ್​ಎಲ್​ಎನ್​ನ FTTH ನೆಟ್‌ವರ್ಕ್‌ನಲ್ಲಿ ಲಭ್ಯವಿದೆ. ಎಲ್ಲ ಬಿಎಸ್​ಎನ್​ಎಲ್​ನ FTTH ಗ್ರಾಹಕರು ಈ ಸೇವೆಯನ್ನು ಉಚಿತವಾಗಿ ಬಳಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಅವರು ಕಂಪನಿಗೆ ತಮ್ಮ ಒಪ್ಪಿಗೆಯನ್ನು ನೀಡಬೇಕಾಗುತ್ತದೆ. ನಂತರ ಈ ಸೇವೆಯನ್ನು ಆ್ಯಕ್ಟಿವೇಟ್​ ಆಗುತ್ತದೆ.

ಓದಿ: ಬಿಎಸ್​ಎನ್​ಎಲ್‌ನಿಂದ ಹೊಸ ಸೇವೆಗಳ ಘೋಷಣೆ; 500 ಲೈವ್​ ಚಾನೆಲ್​ ಫ್ರೀ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.