ಹೈದರಾಬಾದ್: ತೆಲಂಗಾಣದ ಪ್ರಮುಖ ಮನರಂಜನಾ ತಾಣ ಮತ್ತು ಥೀಮ್ ಪಾರ್ಕ್ ಆಗಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ (ಆರ್ಎಫ್ಸಿ) ಭಾನುವಾರ 76 ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಆರ್ಎಫ್ಸಿ ವ್ಯವಸ್ಥಾಪಕ ನಿರ್ದೇಶಕರಾದ ವಿಜಯೇಶ್ವರಿ ಅವರು ಧ್ವಜಾರೋಹಣ ನೆರವೇರಿಸಿ, ಇಲ್ಲಿನ ಭದ್ರತಾ ಸಿಬ್ಬಂದಿಯಿಂದ ಗೌರವ ವಂದನೆ ಸ್ವೀಕರಿಸಿದರು.
ಧ್ವಜಾರೋಹಣ ಸಮಾರಂಭದ ನಂತರ ಫೋಟೋ ಸೆಷನ್ ನಡೆಯಿತು. ಕಾರ್ಯಕ್ರಮದಲ್ಲಿ ಹಾಜರಿದ್ದವರು ತ್ರಿವರ್ಣ ಧ್ವಜದೊಂದಿಗೆ ಚಿತ್ರಗಳನ್ನು ಕ್ಲಿಕ್ಕಿಸಿಕೊಂಡರು.
ಈ ಕಾರ್ಯಕ್ರಮದಲ್ಲಿ ರಾಮೋಜಿ ಫಿಲ್ಮ್ ಸಿಟಿ ನಿರ್ದೇಶಕಿ ಕೀರ್ತಿ ಸೋಹಾನ, ಈಟಿವಿ ಸಿಇಒ ಕೆ. ಬಾಪಿನೀಡು ಚೌಧರಿ, ಯುಕೆಎಂಎಲ್ ನಿರ್ದೇಶಕ ಶಿವ ರಾಮಕೃಷ್ಣ, ಉಪಾಧ್ಯಕ್ಷ ಎವಿ ರಾವ್, ತೋಟಗಾರಿಕೆ ಇಲಾಖೆಯ ಉಪಾಧ್ಯಕ್ಷ ರವಿ ಚಂದ್ರಶೇಖರ್ ಸೇರಿದಂತೆ ಸಮೂಹ ಕಂಪನಿಗಳ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
ರಾಮೋಜಿ ಫಿಲ್ಮ್ ಸಿಟಿ ಬಗ್ಗೆ ಒಂದಿಷ್ಟು : ರಾಮೋಜಿ ಫಿಲ್ಮ್ ಸಿಟಿ 2 ಸಾವಿರ ಎಕರೆಗಳಿಗೂ ಹೆಚ್ಚು ವಿಸ್ತೀರ್ಣವನ್ನು ಹೊಂದಿದೆ. ಇದೊಂದು ವಿಶಿಷ್ಟ ವಿಷಯಾಧಾರಿತ ಪ್ರವಾಸೋದ್ಯಮ ತಾಣವಾಗಿದೆ. ವಿಶ್ವದ ಅತಿದೊಡ್ಡ ಚಲನಚಿತ್ರ ನಗರ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದೆ. ಪ್ರತಿ ವರ್ಷ, ಇಲ್ಲಿ 200 ಚಲನಚಿತ್ರಗಳು ಚಿತ್ರೀಕರಣವಾಗುತ್ತವೆ. ಇಲ್ಲಿಯವರೆಗೆ, ದೇಶದ ವಿವಿಧ ಭಾಷೆಗಳಲ್ಲಿ 3,300 ಕ್ಕೂ ಹೆಚ್ಚು ಸಿನಿಮಾಗಳು ಇಲ್ಲಿ ಚಿತ್ರೀಕರಣಗೊಂಡಿದ್ದು ದಾಖಲೆಯಾಗಿದೆ.
ಚಲನಚಿತ್ರ ನಗರವನ್ನು ದಿವಂಗತ ರಾಮೋಜಿ ರಾವ್ ಅವರ ಕನಸಿನ ಗೋಪುರವಾಗಿದೆ. ಸಿನಿಮಾ ನಗರಿಯನ್ನು ಅವರು ವಿಶ್ವ ದರ್ಜೆಯ ಮಟ್ಟದಲ್ಲಿ ರೂಪಿಸುವ ಕಲ್ಪನೆ ಹೊಂದಿದ್ದರು. ಇದನ್ನು 1996 ರಲ್ಲಿ ಸ್ಥಾಪಿಸಲಾಯಿತು. ಸಾರ್ವಜನಿಕರ ವೀಕ್ಷಣೆಯೂ ಇದು ಲಭ್ಯವಿದೆ. ಇದರಿಂದ ಅತಿ ಕಡಿಮೆ ಅವಧಿಯಲ್ಲಿ ಪ್ರಮುಖ ಪ್ರವಾಸಿ ತಾಣವಾಗಿ ಬೆಳೆಯಿತು. ವಾರ್ಷಿಕ ಸುಮಾರು 1.5 ಮಿಲಿಯನ್ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.
ಇದನ್ನೂ ಓದಿ: ಐಐಟಿಎಂ ಪ್ರವಾಸೋದ್ಯಮ ಮೇಳ: ಜನರ ಮೆಚ್ಚುಗೆಗೆ ಪಾತ್ರವಾಗುತ್ತಿರುವ ರಾಮೋಜಿ ಫಿಲ್ಮ್ ಸಿಟಿ ಸ್ಟಾಲ್ - IITM Tourism Fair