Oil Free Poori Recipe: ಪೂರಿ ಅಂದ್ರೆ ಹಲವು ಜನರು ತುಂಬಾ ಇಷ್ಟಪಟ್ಟು ಸೇವಿಸುವ ಉಪಹಾರಗಳಲ್ಲಿ ಒಂದಾಗಿದೆ. ಪೂರಿಗಳನ್ನು ಉಪಹಾರಕ್ಕಾಗಿ ಮಾತ್ರವಲ್ಲದೆ ಹಬ್ಬ ಹರಿದಿನಗಳಲ್ಲಿ ಹಾಗೂ ನಿಮಗೆ ತಿನ್ನಬೇಕೆನಿಸಿದಾಗ ಸಿದ್ಧಪಡಿಸಬಹುದಾಗಿದೆ. ಕೆಲವು ಜನರು ಚಿಕನ್ ಹಾಗೂ ಮಟನ್ ಕರಿಯ ಜೊತೆಗೆ ಪೂರಿಗಳನ್ನು ತುಂಬಾ ಇಷ್ಟಪಟ್ಟು ಸೇವಿಸುತ್ತಾರೆ. ಬಹುತೇಕರು ಗೋಧಿ ಹಿಟ್ಟಿನಿಂದ ಮಾಡಿರುವ ಪೂರಿಗಳನ್ನು ಎಣ್ಣೆಯಲ್ಲಿ ಫ್ರೈ ಮಾಡುತ್ತಾರೆ.
ಆದರೆ, ಎಣ್ಣೆಯಲ್ಲಿ ಹುರಿಯದೆಯೇ ಪೂರಿಗಳನ್ನು ರೆಡಿ ಮಾಡಬಹುದು. ಎಣ್ಣೆ ಇಲ್ಲದೆ ಪೂರಿ ಹೇಗೆ ಮಾಡುವುದು? ಇವುಗಳು ಕೂಡ ಎಣ್ಣೆಯಲ್ಲಿ ಹುರಿದ ಪೂರಿಗಳಂತೆ ಉಬ್ಬುತ್ತವೆ. ಬಣ್ಣ ಹಾಗೂ ರುಚಿ ಕೂಡ ವಿಭಿನ್ನವಾಗಿರುತ್ತದೆ. ಈ ಪೂರಿಗಳು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಆಯಿಲ್ ಇಲ್ಲದೇ ಪೂರಿಗಳನ್ನು ಹೇಗೆ ಸಿದ್ಧಪಡಿಸುವುದು? ಈ ಆಯಿಲ್ ಫ್ರೀ ಪೂರಿಗಳಿಗೆ ಬೇಕಾದ ಪದಾರ್ಥಗಳೇನು ಎಂಬುದನ್ನು ನೋಡೋಣ.
ಆಯಿಲ್ ಫ್ರೀ ಪೂರಿಗಳಿಗೆ ಬೇಕಾಗಿರುವ ಪದಾರ್ಥಗಳು:
- ಅಕ್ಕಿ ಹಿಟ್ಟು - ಎರಡು ಕಪ್
- ಆಲೂಗಡ್ಡೆ - ಒಂದು
- ಮೆಂತ್ಯ ಸೊಪ್ಪಿನ ಪುಡಿ - 1 ಟೀಸ್ಪೂನ್
- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಚಿಲ್ಲಿ ಫ್ಲೆಕ್ಸ್ - ಟೀಸ್ಪೂನ್
- ಉಪ್ಪು - ರುಚಿಗೆ ತಕ್ಕಷ್ಟು
- ಎಣ್ಣೆ - 4 ಟೀಸ್ಪೂನ್
ಆಯಿಲ್ ಫ್ರೀ ಪೂರಿ ಸಿದ್ಧಪಡಿವುದು ಹೇಗೆ?:
- ಮೊದಲು ಆಲೂಗಡ್ಡೆ ಕುದಿಸಬೇಕು, ಬಳಿಕ ಅದರ ಸಿಪ್ಪೆ ತೆಗೆದುಹಾಕಿ, ನುಣ್ಣಗೆ ತುರಿದು ಪಕ್ಕಕ್ಕೆ ಇಟ್ಟುಕೊಳ್ಳಿ.
- ಪಾತ್ರೆಯನ್ನು ಒಲೆಯ ಮೇಲೆ ಇಡಿ, ನಂತರ, ಸುಮಾರು ಒಂದೂವರೆ ಕಪ್ ನೀರು ಸುರಿಯಿರಿ ಮತ್ತು ಕಡಿಮೆ ಉರಿಯಲ್ಲಿ ಕುದಿಸಬೇಕಾಗುತ್ತದೆ.
- ಬಳಿಕ, ಅದರೊಳಗೆ ಮೆಂತ್ಯ ಸೊಪ್ಪಿನ ಪುಡಿ ಹಾಗೂ ಚಿಲ್ಲಿ ಫ್ಲೆಕ್ಸ್, ಉಪ್ಪು, ಅಕ್ಕಿ ಹಿಟ್ಟನ್ನು ಒಂದಾದ ನಂತರ ಒಂದರಂತೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕಾಗುತ್ತದೆ. ಬಳಿಕ ಪಾತ್ರೆಯ ಮುಚ್ಚಳವನ್ನು ಅರ್ಧ ನಿಮಿಷ ಮುಚ್ಚಿ ಹಾಗೆಯೇ ಬಿಡಿ. ತದನಂತರ ಆ ಮುಚ್ಚಳವನ್ನು ತೆಗೆಯಿರಿ.
- ಈ ಹಿಂದೆ ತಯಾರಿಸಿದ ತುರಿದ ಆಲೂಗಡ್ಡೆ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕಾಗುತ್ತದೆ. ಇದನ್ನು ಪೂರಿ ಹಿಟ್ಟಿನಂತೆ ನಿಧಾನವಾಗಿ ಮಿಕ್ಸ್ ಮಾಡಬೇಕಾಗುತ್ತದೆ.
- ಬಳಿಕ ಈ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ ಮತ್ತು ಪೂರಿಗಳಂತೆ ಚಪಾತಿ ಮಣೆಯ ಮೇಲೆ ನಿಮಗೆ ಬೇಕಾದ ಗಾತ್ರದಲ್ಲಿ ರೆಡಿ ಮಾಡಿ.
- ಈಗ ದೋಸೆ ಮಾಡುವ ಪ್ಯಾನ್ ಅನ್ನು ಒಲೆಯ ಮೇಲೆ ಇಟ್ಟು ಬಿಸಿ ಮಾಡಬೇಕಾಗುತ್ತದೆ. ಪ್ಯಾನ್ ಬಿಸಿಯಾದ ಬಳಿಕ ಒಂದು ಟೀಸ್ಪೂನ್ ಸ್ವಲ್ಪ ಸ್ವಲ್ಪ ಎಣ್ಣೆಯನ್ನು ಮೊದಲೇ ತಯಾರಿಸಿದ ಪೂರಿಗಳನ್ನು ಒಂದೊಂದಾಗಿ ಫ್ರೈ ಮಾಡಿಕೊಳ್ಳಿ. ಇಷ್ಟು ಮಾಡಿದರೆ ಸಾಕು ಎಣ್ಣೆ ರಹಿತ ಪೂರಿಗಳು ರೆಡಿಯಾಗುತ್ತವೆ.
- ನಿಮಗೆ ಇಷ್ಟವಾದರೆ ಈ ರೀತಿಯ ಪೂರಿಗಳನ್ನು ಒಮ್ಮೆಯಾದರು ಟ್ರೈ ಮಾಡಿ ನೋಡಿ.
ಇವುಗಳನ್ನೂ ಓದಿ: |