ETV Bharat / technology

ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿರುವ ಇಸ್ರೋ: 100ನೇ ಉಡಾವಣೆಗೆ ಟೈಮಿಂಗ್​ ಫಿಕ್ಸ್​ - ISRO 100TH LAUNCH

ISRO 100th Launch: ಇಸ್ರೋ ದೇಶದ ಬಾಹ್ಯಾಕಾಶ ಮಿಷನ್​ನಲ್ಲಿ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಇಸ್ರೋದ 100ನೇ ಉಡಾವಣೆಯು ಜನವರಿ 29 ರಂದು ನಡೆಯಲಿದ್ದು, ದಿನಗಣನೆ ಆರಂಭವಾಗಿದೆ.

SATISH DHAWAN SPACE CENTRE  SRIHARIKOTA 100TH LAUNCH  ISRO
ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿರುವ ಇಸ್ರೋ (Photo Credit: ETV Bharat via ISRO)
author img

By ETV Bharat Tech Team

Published : Jan 25, 2025, 4:03 PM IST

ISRO 100th Launch: ಐತಿಹಾಸಿಕ ಕ್ಷಣಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸಜ್ಜಾಗುತ್ತಿದೆ. ಇಸ್ರೋದ 100ನೇ ಉಡಾವಣೆಯು ಜನವರಿ 29 ರಂದು ಬೆಳಗ್ಗೆ 6:23 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (SHAR) GSLV-F15 ಮಿಷನ್​ ಮೂಲಕ ನಡೆಯಲಿದೆ.

ಈ ಕಾರ್ಯಾಚರಣೆಯ ಅಡಿ NVS-02 ಉಪಗ್ರಹವನ್ನು ಉಡಾವಣೆ ಮಾಡಲಾಗುವುದು. ಇದು ಭಾರತದ ಪ್ರಾದೇಶಿಕ ನ್ಯಾವಿಗೇಷನ್​ ವಿತ್​ ಇಂಡಿಯನ್​ ಕಾನ್ಸ್ಟೆಲ್ಲೇಷನ್​ (NavIC) ಸಿಸ್ಟಮ್​ ಮತ್ತಷ್ಟು ಬಲಪಡಿಸುತ್ತದೆ.

GSLV-F15 ಮಿಷನ್​ ಮಹತ್ವ: GSLV-F15 ಮಿಷನ್ GSLVಯ 17ನೇ ಹಾರಾಟ ಮತ್ತು ಸ್ವದೇಶಿ ಕ್ರಯೋಜೆನಿಕ್ ಹಂತದ 11 ನೇ ಹಾರಾಟವಾಗಿದೆ. ಇದು ಸಂಪೂರ್ಣವಾಗಿ ಸ್ವದೇಶಿ ಕ್ರಯೋಜೆನಿಕ್ ಹಂತವನ್ನು ಬಳಸಿಕೊಂಡು ಜಿಎಸ್ಎಲ್​ವಿಯ ಎಂಟನೇ ಕಾರ್ಯಾಚರಣಾ ಹಾರಾಟವಾಗಿದ್ದು, ಇಸ್ರೋದ ತಾಂತ್ರಿಕ ಸಾಮರ್ಥ್ಯ ಪ್ರದರ್ಶಿಸುತ್ತದೆ.

ಶ್ರೀಹರಿಕೋಟಾದ ಎರಡನೇ ಉಡಾವಣಾ ಪ್ಯಾಡ್ (SLP) ನಿಂದ 3.4 ಮೀಟರ್ ವ್ಯಾಸದ ಲೋಹದ ಪೇಲೋಡ್ ಫೇರಿಂಗ್ ಬಳಸಿ ಈ ಉಡಾವಣೆ ನಡೆಯಲಿದೆ. NVS-02 ಉಪಗ್ರಹವನ್ನು ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್ (GTO) ಗೆ ಇರಿಸುವುದು ಈ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ.

NavIC ಸಿಸ್ಟಮ್​ ಮಹತ್ವ: NavIC ಭಾರತದ ಸ್ವದೇಶಿ ನ್ಯಾವಿಗೇಷನ್ ಉಪಗ್ರಹ ಸಿಸ್ಟಮ್​ ಆಗಿದ್ದು, ನಿಖರವಾದ ಸ್ಥಾನ, ವೇಗ ಮತ್ತು ಸಮಯ (PVT) ಸೇವೆಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಈ ವ್ಯವಸ್ಥೆಯು ಭಾರತ ಮತ್ತು ಭಾರತೀಯ ಉಪಖಂಡದಾದ್ಯಂತ 1500 ಕಿ.ಮೀ. ಪ್ರದೇಶವನ್ನು ಆವರಿಸುತ್ತದೆ. ಇದು ಎರಡು ರೀತಿಯ ಸೇವೆಗಳನ್ನು ಒದಗಿಸುತ್ತದೆ. 20 ಮೀಟರ್‌ಗಳಿಗಿಂತ ಹೆಚ್ಚಿನ ಸ್ಥಾನಿಕ ನಿಖರತೆಯನ್ನು ಒದಗಿಸುವ ಸ್ಟ್ಯಾಂಡರ್ಡ್ ಪೊಸಿಷನಿಂಗ್ ಸರ್ವಿಸ್ (SPS) ಮತ್ತು ವಿಶೇಷ ಸಂಚರಣೆ ಸಾಮರ್ಥ್ಯಗಳನ್ನು ಒದಗಿಸುವ ರೆಸ್ಟ್ರಿಕ್ಟೆಡ್​ ಸರ್ವಿಸ್​ (RS).

NVS-02 ಉಪಗ್ರಹದ ವೈಶಿಷ್ಟ್ಯಗಳು: NVS-02 ಉಪಗ್ರಹವು ಎರಡನೇ ತಲೆಮಾರಿನ NavIC ಉಪಗ್ರಹಗಳ ಭಾಗವಾಗಿದ್ದು, I-2K ಬಸ್ ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತದೆ. ಈ ಉಪಗ್ರಹ 2,250 ಕೆಜಿ ತೂಕವಿದ್ದು, ಸುಮಾರು 3 ಕಿ.ವ್ಯಾಟ್ ವಿದ್ಯುತ್ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು L1, L5 ಮತ್ತು S ಬ್ಯಾಂಡ್‌ಗಳಲ್ಲಿ ನ್ಯಾವಿಗೇಷನ್ ಪೇಲೋಡ್‌ಗಳನ್ನು ಮತ್ತು C-ಬ್ಯಾಂಡ್‌ನಲ್ಲಿ ರೇಂಡಿಂಗ್ ಪೇಲೋಡ್ ಅನ್ನು ಹೊಂದಿರುತ್ತದೆ.

ಸ್ವದೇಶಿ ಟೆಕ್ನಾಲಾಜಿಕಲ್​ ಅಡ್ವಾನ್ಸ್​ಮೆಂಟ್ಸ್​: ಯುಆರ್ ಸ್ಯಾಟಲೈಟ್ ಸೆಂಟರ್​ (ಯುಆರ್‌ಎಸ್‌ಸಿ) ನಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾದ ಈ ಉಪಗ್ರಹವು ಬಾಹ್ಯಾಕಾಶದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಥರ್ಮೋವಾಕ್ ಮತ್ತು ಡೈನಾಮಿಕ್ ಪರೀಕ್ಷೆಗೆ ಒಳಪಡಿಸಲಾಯಿತು. NVS-02 ಉಡಾವಣೆಯು ಇಸ್ರೋದ ತಾಂತ್ರಿಕ ಪರಾಕ್ರಮ ಮತ್ತು ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತದ ಬೆಳೆಯುತ್ತಿರುವ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ.

ಈ ಕಾರ್ಯಾಚರಣೆಯು ಶ್ರೀಹರಿಕೋಟಾದಿಂದ ಇಸ್ರೋದ 100 ನೇ ಉಡಾವಣೆಯನ್ನು ಗುರುತಿಸಲಿದೆ. ಅಷ್ಟೇ ಅಲ್ಲ ಸ್ಥಳೀಯ ಬಾಹ್ಯಾಕಾಶ ತಂತ್ರಜ್ಞಾನಗಳು ಮತ್ತು ನ್ಯಾವಿಗೇಷನ್​ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಓದಿ: ಸತೀಶ್ ಧವನ್ ಕೇಂದ್ರದಿಂದ 100ನೇ ರಾಕೆಟ್‌ ಉಡಾವಣೆಗೆ ಇಸ್ರೋ ಸನ್ನದ್ಧ: ಇಲ್ಲಿಗೆ ಈ ಹೆಸರೇಕೆ ಬಂತು? ಸ್ಥಳದ ಆಯ್ಕೆ ಹೇಗಾಯಿತು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.