ETV Bharat / state

ದಲಿತರ ಮನೆಗಳಲ್ಲಿ ಪಾದಪೂಜೆ, ಸಹ ಭೋಜನ : ಶಾಸಕ ಜಿ ಜನಾರ್ದನರೆಡ್ಡಿ - MLA G JANARDHANA REDDY

ಶಾಸಕ ಜನಾರ್ದನ ರೆಡ್ಡಿ ಅವರು ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿರುವ ದಲಿತರ ಮನೆಯಲ್ಲಿ ಸಹ ಭೋಜನ ನಡೆಸುತ್ತೇನೆ ಎಂದಿದ್ದಾರೆ.

mla-g-janardhana-reddy
ಶಾಸಕ ಜಿ ಜನಾರ್ದನರೆಡ್ಡಿ (ETV Bharat)
author img

By ETV Bharat Karnataka Team

Published : Jan 26, 2025, 9:33 PM IST

ಗಂಗಾವತಿ (ಕೊಪ್ಪಳ) : ಮುಂದಿನ ವಾರದಲ್ಲಿ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿರುವ ದಲಿತರ ಮನೆಗಳಿಗೆ ತೆರಳಿ ಅವರ ಪಾದಪೂಜೆ ಮಾಡಿ, ಪೂಜಿಸಿ ಗೌರವಿಸುವ ಮೂಲಕ ಅವರ ಮನೆಯಲ್ಲಿ ಸಹ ಭೋಜನ ಮಾಡುವೆ ಎಂದು ಗಂಗಾವತಿ ಶಾಸಕ ಜಿ. ಜನಾರ್ದನರೆಡ್ಡಿ ಹೇಳಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ 76ನೇ ಗಣರಾಜ್ಯೋತ್ಸವದ ಅಂಗವಾಗಿ ಭಾನುವಾರ ನಡೆದ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವರ್ಗ, ಶ್ರೇಣಿ, ಜಾತಿ ರಹಿತ, ಸಮಾನತೆಯ ಸಮಾಜ ನಿರ್ಮಾಣ ಮಾಡಬೇಕಿರುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.

ಶಾಸಕ ಜಿ ಜನಾರ್ದನರೆಡ್ಡಿ ಅವರು ಮಾತನಾಡಿದರು (ETV Bharat)

ಈ ಹಿನ್ನೆಲೆ ಮುಂದಿನ ವಾರದಿಂದ ಪ್ರಧಾನಿ ನರೇಂದ್ರ ಮೋದಿ ಅವರು, `ಭೀಮ್ ಸಂಗಮ' ಎಂಬ ಯೋಜನೆ ಘೋಷಣೆ ಮಾಡಲಿದ್ದಾರೆ. ಇದಕ್ಕಾಗಿ ಯೋಜನೆಯ ರೂಪುರೇಷೆ ತಯಾರಿಸಲಾಗಿದೆ. ಅದರ ಉದ್ದೇಶ ಎಲ್ಲಾ ಪಕ್ಷದ ಮಂತ್ರಿಗಳು, ಸಂಸದರು, ಶಾಸಕರು ಸೇರಿದಂತೆ ಚುನಾಯಿತ ಪ್ರತಿನಿಧಿಗಳು ದಲಿತರ ಮನೆಗೆ ತೆರಳಬೇಕಿದೆ ಎಂದು ಹೇಳಿದರು.

ಅಲ್ಲಿ ಅವರನ್ನು ಗೌರವಿಸಿ, ಅವರ ಮನೆಯಲ್ಲಿ ಸಹಭೋಜನ ಮಾಡುವ ಮೂಲಕ ಸಮಾನತೆಯ ಸಮಾಜ ನಿರ್ಮಾಣ ಮಾಡಬೇಕು ಎಂಬುದು ಮೋದಿ ಆಶಯ. ಈ ಹಿನ್ನೆಲೆ ಮುಂದಿನ ವಾರದಿಂದ ಗಂಗಾವತಿ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಆಯೋಜಿಸುತ್ತೇನೆ ಎಂದು ತಿಳಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದ ದಿನ ಹಾಗೂ ಗಣರಾಜ್ಯೋತ್ಸವದ ಈ ಎರಡು ದಿನಗಳು ಕನ್ನಡಿಗರ ಪಾಲಿಗೆ ವಿಶೇಷ ದಿನ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕೆಚ್ಚೆದೆಯ ವೀರ ಸಂಗೊಳ್ಳಿ ರಾಯಣ್ಣ ಆಗಸ್ಟ್ 15 ರಂದು ಜನಿಸಿದ್ದರೆ. ಅಲ್ಲದೇ ಜ.26 ಅವರ ದೇಹ ಅಂತ್ಯವಾದ ದಿನ. ಹೀಗಾಗಿ ಈ ಎರಡು ದಿನಗಳು ಕನ್ನಡಿಗರಿಗೆ ವಿಶೇಷ ಎಂದರು.

ಅಭಿವೃದ್ಧಿ ವಿಚಾರವಾಗಿ ಈಗಾಗಲೇ ಅಂಜನಾದ್ರಿಯಲ್ಲಿ ವಿಐಪಿ ಗೆಸ್ಟ್​ಹೌಸ್​ ಹಾಗೂ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಕಾರ್ಯ ನಡೆದಿದೆ. ಮುಂದಿನ ದಿನಗಳಲ್ಲಿ ತಿರುಪತಿ ಮಾದರಿಯಲ್ಲಿ ಮೆಟ್ಟಿಲುಗಳನ್ನು ನಿರ್ಮಾಣ ಮಾಡಲಾಗುವುದು. ದೇಗುಲದ ಮೇಲೆ ರಾಮ-ಸೀತೆ, ಲಕ್ಷ್ಮಣ ಸಹಿತ ಆಂಜನೇಯನ ದೇಗುಲ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಧ್ವಜಾರೋಹಣ ನೆರವೇರಿಸಿದ ಸಾರ್ವಜನಿಕ ಆಚರಣೆ ಸಮಿತಿ ಅಧ್ಯಕ್ಷ ತಹಶೀಲ್ದಾರ್ ಯು. ನಾಗರಾಜ್ ಮಾತನಾಡಿ, ಹಲವು ಜಾತಿ, ಧರ್ಮ, ವೈವಿಧ್ಯತೆಯ ಬೀಡಾಗಿರುವ ಭಾರತದಲ್ಲಿ ಶಿಸ್ತು, ಸಮನ್ವಯತೆ ಮೂಡಿಸಿ ಅಭಿವೃದ್ಧಿಯತ್ತ ಸಾಗುವ ಉದ್ದೇಶಕ್ಕೆ ಸಂವಿಧಾನ ರಚಿಸಿ ಸಮರ್ಪಿತವಾದ ದಿನ ಜ.26 ಎಂದು ಹೇಳಿದರು.

ಇದನ್ನೂ ಓದಿ : ಶ್ರೀರಾಮುಲುರನ್ನ ಜನಾರ್ದನ ರೆಡ್ಡಿ ಬೆಳೆಸಿಲ್ಲ, ಸ್ವಂತ ಶಕ್ತಿಯಿಂದ ಬೆಳೆದಿದ್ದಾರೆ: ವಾಲ್ಮೀಕಿ ಸಮಾಜ - REDDY RAMULU FIGHT

ETV Bharat Logo

Copyright © 2025 Ushodaya Enterprises Pvt. Ltd., All Rights Reserved.