ETV Bharat / state

ಬಂಡೀಪುರದಲ್ಲಿ ಭೀಮನ ಖದರ್: ಪ್ರಿನ್ಸ್ ಬಳಿಕ ಇವನ ದರ್ಬಾರ್ ಶುರು - TIGER BHIMA LOOK

ಬಂಡೀಪುರದಲ್ಲಿ ರಾಜನಂತೆ ಮೆರೆದಿದ್ದ ಪ್ರಿನ್ಸ್ ಬಳಿಕ ಈಗ ಭೀಮನ ದರ್ಬಾರ್ ಶುರುವಾಗಿದೆ. ಪ್ರವಾಸಿಗರ ಫೇವರೇಟ್ ಆಗಿ ಭೀಮ‌ ಎಲ್ಲರ ಗಮನ ಸೆಳೆಯುತ್ತಿದ್ದಾನೆ.

TIGER BHIMA LOOK
ಬಂಡೀಪುರದಲ್ಲಿ ಭೀಮನ ಖದರ್ (ETV Bharat)
author img

By ETV Bharat Karnataka Team

Published : Jan 27, 2025, 2:42 PM IST

ಚಾಮರಾಜನಗರ: ಭಾರತದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾಗಿರುವ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಈಗ ಭೀಮನದ್ದೇ ದರ್ಬಾರ್. ಒಂದು ಕಾಲದಲ್ಲಿ ಪ್ರವಾಸಿಗರ ಫೇವರೇಟ್ ಆಗಿದ್ದ ಪ್ರಿನ್ಸ್ ನಂತೆ ಈಗ ಭೀಮ ಕೂಡ ಎಲ್ಲರ ನೆಚ್ಚಿನ ಹುಲಿರಾಯ ಆಗಿದ್ದಾನೆ.

ಬಂಡೀಪುರ ಅಂದರೆ ಸಾಕು ವನ್ಯಪ್ರೇಮಿಗಳಿಗೆ ನೆನಪಾಗುವುದು ಪ್ರಿನ್ಸ್ ಹೆಸರಿನ ಹುಲಿ. ಹುಲಿ ಬಲಿಷ್ಠ ಪ್ರಾಣಿಯಾಗಿದ್ದರೂ ಮನುಷ್ಯರನ್ನು ಕಂಡರೇ ಮರೆಯಾಗುವುದೇ ಹೆಚ್ಚು. ಆದರೆ, ಬಂಡೀಪುರದಲ್ಲಿ ಈ ಹಿಂದೆ ಇದ್ದ ಪ್ರಿನ್ಸ್ ಎಂಬ ಹುಲಿ ಪ್ರವಾಸಿಗರನ್ನು ಕಂಡರೇ ದೂರ ಓಡದೇ ಹತ್ತಿರಕ್ಕೆ ಬರುತ್ತಿದ್ದ. ಗಂಟೆಗಟ್ಟಲೆ ದರ್ಶನ ಕೊಡುತ್ತಿದ್ದ ಪ್ರಿನ್ಸ್, ಸಫಾರಿ ಜೀಪ್ ಹತ್ತಿರವೇ ಸುಳಿದಾಡುತ್ತಿದ್ದ. ಈಗ ಪ್ರಿನ್ಸ್ ನಂತೆ ಭೀಮ ಎಂಬ ಹುಲಿಯು ಪ್ರವಾಸಿಗರನ್ನು ಸೆಳೆಯುತ್ತಿದೆ.

ಬಂಡೀಪುರದಲ್ಲಿ ಭೀಮನ ಖದರ್: ಪ್ರಿನ್ಸ್ ಬಳಿಕ ಇವನ ದರ್ಬಾರ್ ಶುರು (ETV Bharat)

ಬಂಡೀಪುರದ ಸಫಾರಿಯ ಬೆಟ್ಟದಕಟ್ಟೆಯಿಂದ ಮಂಗಲ ಕೆರೆ ತನಕವೂ ತನ್ನ ಸರಹದ್ದನ್ನು ಇಟ್ಟುಕೊಂಡಿರುವ ಭೀಮ, ಪ್ರವಾಸಿಗರಿಗೆ ಆಗಾಗ್ಗೆ ದರ್ಶನ ಕೊಡುತ್ತಿದೆ. ಜೊತೆಗೆ, ಪ್ರವಾಸಿಗರನ್ನು ಕಂಡರೇ ಮರೆಯಾಗದೇ ಗಾಂಭೀರ್ಯದ ಹೆಜ್ಜೆ ಇಡುತ್ತಿದೆ. ಸಫಾರಿ ವಾಹನ ಬಂದರೂ ಹೆದರದೇ ರಸ್ತೆ ದಾಟಿ, ರಗಡ್ ಲುಕ್ ಕೊಡಲಿದ್ದು ಭೀಮನ ಪ್ರವಾಸಿಗರು ಫಿಧಾ ಆಗುತ್ತಿದ್ದಾರೆ.

After Prince in Bandipur, a tiger named Bhima is attracting the attention of tourists
ಭೀಮ ಎಂಬ ಹೆಸರಿನ ಹುಲಿ (ETV Bharat)

ಈ ಕುರಿತು ಬಂಡೀಪುರ‌ ಎಸಿಎಫ್ ನವೀನ್ ಕುಮಾರ್ ಮಾತನಾಡಿದ್ದು, ಭೀಮ ಹುಲಿಯು ಪ್ರಿನ್ಸ್​​​ನಂತೆ ಸ್ವಭಾವ ಹೊಂದಿದ್ದು ಪ್ರಿನ್ಸ್ ರೀತಿಯೇ ಮುಖಭಾವ ಪ್ರದರ್ಶನ ಮಾಡುತ್ತದೆ. ಅಂದಾಜು 5 ವರ್ಷದ ಗಂಡು ಹುಲಿಯಾಗಿರುವ ಭೀಮ, ಅತಿ ದೊಡ್ಡದಾದ ಸರಹದ್ದನೇ ಹೊಂದಿದೆ. ಪ್ರವಾಸಿಗರಿಗೆ ರಾಜ ಗಾಂಭೀರ್ಯದಲ್ಲೇ ಫೋಸ್ ಕೊಡುತ್ತಾನೆ‌. ಪ್ರಿನ್ಸ್ 2018ರಲ್ಲಿ ವಯೋಸಹಜವಾಗಿ ಅಸುನೀಗಿತ್ತು. ಬಳಿಕ ಈಗ ಭೀಮ ಪ್ರವಾಸಿಗರ ನೆಚ್ಚಿನ ಪ್ರಾಣಿ ಆಗಿದೆ ಎಂದಿದ್ದಾರೆ.

ಒಟ್ಟಿನಲ್ಲಿ ಬಂಡೀಪುರದಲ್ಲಿ ರಾಜನಂತೆ ಮೆರೆದಿದ್ದ ಪ್ರಿನ್ಸ್ ಬಳಿಕ ಈಗ ಭೀಮನ ದರ್ಬಾರ್ ಶುರುವಾಗಿದೆ. ಪ್ರವಾಸಿಗರ ಫೇವರೇಟ್ ಆಗಿ ಭೀಮ‌ ಎಲ್ಲರ ಗಮನ ಸೆಳೆಯುತ್ತಿದ್ದಾನೆ.

ಇದನ್ನೂ ಓದಿ: ಬಂಡೀಪುರದಲ್ಲಿ ಲಾರಿ ಮೇಲೆ ಕಾಡಾನೆ ದಾಳಿ : ಬೈಕ್ ಬಿಟ್ಟು ಓಡಿದ ಸವಾರರು - WILD ELEPHANT ATTACK

ETV Bharat Logo

Copyright © 2025 Ushodaya Enterprises Pvt. Ltd., All Rights Reserved.