ETV Bharat / business

ಸೆನ್ಸೆಕ್ಸ್​ 313 ಅಂಕ ಕುಸಿತ; ಡಾಲರ್ ವಿರುದ್ಧ ರೂಪಾಯಿ 87.35ಕ್ಕೆ ಇಳಿಕೆ! ಸಾರ್ವಕಾಲಿಕ ಕನಿಷ್ಠ ಮಟ್ಟ - STOCK MARKET CLOSE HIGHLIGHTS

ಭಾರತದ ಷೇರು ಮಾರುಕಟ್ಟೆ ಬುಧವಾರ ಕುಸಿತದೊಂದಿಗೆ ಕೊನೆಗೊಂಡಿದೆ.

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್
ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (IANS)
author img

By ETV Bharat Karnataka Team

Published : Feb 5, 2025, 5:40 PM IST

ಮುಂಬೈ: ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ 50 ಬುಧವಾರದ ವಹಿವಾಟಿನಲ್ಲಿ ನಷ್ಟದೊಂದಿಗೆ ಕೊನೆಗೊಂಡಿವೆ. ಬಿಎಸ್ಇ ಸೆನ್ಸೆಕ್ಸ್ 312.53 ಪಾಯಿಂಟ್ಸ್ ಅಥವಾ ಶೇಕಡಾ 0.40 ರಷ್ಟು ಕುಸಿದು 78,271.28 ರಲ್ಲಿ ಕೊನೆಗೊಂಡಿದೆ. ಸೆನ್ಸೆಕ್ಸ್​ ದಿನದ ವಹಿವಾಟಿನಲ್ಲಿ 78,735.41-78,226.26 ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು.

ಎನ್ಎಸ್ಇ ನಿಫ್ಟಿ 42.95 ಪಾಯಿಂಟ್ಸ್ ಅಥವಾ ಶೇಕಡಾ 0.18 ರಷ್ಟು ಕುಸಿದು 23,696.30 ಕ್ಕೆ ತಲುಪಿದೆ. ನಿಫ್ಟಿ 50 ಒಂದು ದಿನದ ವಹಿವಾಟಿನಲ್ಲಿ ಗರಿಷ್ಠ 23,807.30 ಹಾಗೂ ಕನಿಷ್ಠ 23,680.45 ರ ನಡುವೆ ವಹಿವಾಟು ನಡೆಸಿತು.

ಯಾರಿಗೆ ಲಾಭ, ನಷ್ಟ?: ನಿಫ್ಟಿ ಫಿಫ್ಟಿಯ 50 ಷೇರುಗಳ ಪೈಕಿ 25 ಇಳಿಕೆಯೊಂದಿಗೆ ಕೊನೆಗೊಂಡವು. ನಿಫ್ಟಿಯಲ್ಲಿ ಏಷಿಯನ್ ಪೇಂಟ್ಸ್, ಟೈಟಾನ್ ಕಂಪನಿ, ನೆಸ್ಲೆ ಇಂಡಿಯಾ, ಬ್ರಿಟಾನಿಯಾ ಇಂಡಸ್ಟ್ರೀಸ್ ಮತ್ತು ಟಾಟಾ ಕನ್ಸೂಮರ್ ಷೇರುಗಳು ಶೇಕಡಾ 3.40 ರಷ್ಟು ನಷ್ಟ ಕಂಡವು. ಒಎನ್​ಜಿಸಿ, ಹಿಂಡಾಲ್ಕೊ, ಅಪೊಲೊ ಹಾಸ್ಪಿಟಲ್ಸ್ ಮತ್ತು ಬಿಪಿಸಿಎಲ್ ಷೇರುಗಳು ಶೇಕಡಾ 2.90 ರಷ್ಟು ಲಾಭದೊಂದಿಗೆ ಕೊನೆಗೊಂಡವು.

ನಿಫ್ಟಿ ಸ್ಮಾಲ್ ಕ್ಯಾಪ್ 100 ಸೂಚ್ಯಂಕವು ಶೇಕಡಾ 1.85 ರಷ್ಟು ಹಾಗೂ ನಿಫ್ಟಿ ಮಿಡ್ ಕ್ಯಾಪ್ 100 ಸೂಚ್ಯಂಕವು ಶೇ 0.68 ರಷ್ಟು ಲಾಭದೊಂದಿಗೆ ಕೊನೆಗೊಂಡಿವೆ.

ವಲಯವಾರು ನೋಡುವುದಾದರೆ: ನಿಫ್ಟಿ ಎಫ್ಎಂಸಿಜಿ, ರಿಯಾಲ್ಟಿ, ಆಟೋ ಮತ್ತು ಕನ್ಸ್ಯೂಮರ್ ಡ್ಯೂರೇಬಲ್ ಸೂಚ್ಯಂಕಗಳು ಶೇ 1.85ರಷ್ಟು ಇಳಿಕೆಯೊಂದಿಗೆ ಕೊನೆಗೊಂಡವು. ನಿಫ್ಟಿ ಪಿಎಸ್ ಯು ಬ್ಯಾಂಕ್, ಮೆಟಲ್, ಒಎಂಸಿಗಳು ಮತ್ತು ಮಾಧ್ಯಮ ಸೂಚ್ಯಂಕಗಳು ತಲಾ ಶೇ 1 ಕ್ಕಿಂತ ಹೆಚ್ಚು ಏರಿಕೆ ಕಂಡವು.

ವಿದೇಶಿ ಹೂಡಿಕೆದಾರರಿಂದ ಷೇರು ಮಾರಾಟ: ಸಾಗರೋತ್ತರ ಹೂಡಿಕೆದಾರರು 2025 ರಲ್ಲಿ ಇಲ್ಲಿಯವರೆಗೆ 8 ಬಿಲಿಯನ್ ಡಾಲರ್ ಮೌಲ್ಯದ ಸ್ಥಳೀಯ ಷೇರುಗಳು ಮತ್ತು ಬಾಂಡ್​ಗಳನ್ನು ಮಾರಾಟ ಮಾಡಿದ್ದಾರೆ.

ರೂಪಾಯಿ ಪಾತಾಳಕ್ಕೆ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ವಾರದ ಕೊನೆಯಲ್ಲಿ ಬಡ್ಡಿದರಗಳನ್ನು ಕಡಿತಗೊಳಿಸಬಹುದು ಎಂಬ ಸುದ್ದಿಗಳಿಂದ ಒತ್ತಡಕ್ಕೊಳಗಾದ ರೂಪಾಯಿ ಬುಧವಾರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಯುಎಸ್ ಡಾಲರ್ ವಿರುದ್ಧ ರೂಪಾಯಿ 0.3 ಯಷ್ಟು ಕುಸಿದು 87.35 ಕ್ಕೆ ಇಳಿದಿದೆ. ಸೋಮವಾರ ರೂಪಾಯಿ ತನ್ನ ಹಿಂದಿನ ಜೀವಮಾನದ ಕನಿಷ್ಠ 87.28 ಕ್ಕೆ ಇಳಿದಿತ್ತು.

ಇದನ್ನೂ ಓದಿ: ಡಾಲರ್‌-ರೂಪಾಯಿ ಪರಿವರ್ತನೆ ಹೆಸರಲ್ಲಿ ₹5 ಲಕ್ಷ ವಂಚನೆ; ಮೂವರು ಪೊಲೀಸರು ಸೇರಿ 9 ಮಂದಿ ಅರೆಸ್ಟ್‌

ಇದನ್ನೂ ಓದಿ : ಕೇವಲ 99 ರೂ.ಗೆ ಅನ್​ಲಿಮಿಟೆಡ್​ ಕಾಲಿಂಗ್​ ಪ್ಲಾನ್​ ತಂದ ಬಿಎಸ್​ಎನ್​ಎಲ್​! - BSNL RS 99 PLAN

ETV Bharat Logo

Copyright © 2025 Ushodaya Enterprises Pvt. Ltd., All Rights Reserved.