ಮರಳಿನೊಂದಿಗೆ 550 ಕೆಜಿ ಚಾಕೊಲೇಟ್‌ಗಳ ಮೂಲಕ ಪ್ರಪಂಚದ ಅತಿದೊಡ್ಡ ಸಾಂಟಾಕ್ಲಾಸ್ ರಚಿಸಿದ ಸುದರ್ಶನ್ ಪಟ್ನಾಯಕ್ - CHOCOLATE SANTA CLAUS
🎬 Watch Now: Feature Video
Published : Dec 25, 2024, 11:01 AM IST
ಪುರಿ(ಒಡಿಶಾ): ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರ ಚಾಕೊಲೇಟ್ ಸಾಂಟಾ ಕ್ಲಾಸ್ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದಿದೆ. ಕ್ರಿಸ್ಮಸ್ ಹಿನ್ನೆಲೆ ಸುದರ್ಶನ್ ಪಟ್ನಾಯಕ್ ಅವರು ಪುರಿ ಬ್ಲೂ ಫ್ಲಾಗ್ ಬೀಚ್‌ನಲ್ಲಿ ವಿಶ್ವದ ಅತಿದೊಡ್ಡ ಚಾಕೊಲೇಟ್ ಸಾಂಟಾ ಕ್ಲಾಸ್ ರಚಿಸಿದ್ದಾರೆ.
ವಿಶ್ವವಿಖ್ಯಾತ ಮರಳು ಕಲಾವಿದ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿರುವ ಸುದರ್ಶನ್ ಪಟ್ನಾಯಕ್ ತಮ್ಮ ವಿದ್ಯಾರ್ಥಿಗಳೊಂದಿಗೆ 16,000 ಚದರ ಅಡಿ ಪ್ರದೇಶದಲ್ಲಿ ಮರಳಿನೊಂದಿಗೆ 550 ಕೆಜಿ ಚಾಕೊಲೇಟ್‌ಗಳ ಮೂಲಕ 160 ಅಡಿ ಉದ್ದ ಮತ್ತು 100 ಅಡಿ ಅಗಲದ ಸಾಂಟಾ ಕ್ಲಾಸ್‌ನ ಬೃಹತ್ ಮರಳು ಕಲೆಯನ್ನು ರಚಿಸಿದರು. 6 ಗಂಟೆಗಳ ಕಾಲ ಸಮಯ ತೆಗೆದುಕೊಂಡು ಬೀಚ್‌ನಲ್ಲಿ ಹೊಸ ವಿಶ್ವ ದಾಖಲೆ ಬರೆದರು.
ಈ ಬಗ್ಗೆ ಪಟ್ನಾಯಕ್ ಮಾತನಾಡಿ, 'ಪ್ರತಿ ವರ್ಷ ಕ್ರಿಸ್‌ಮಸ್ ಸಂದರ್ಭದಲ್ಲಿ ಮರಳು ಶಿಲ್ಪಗಳನ್ನು ರಚಿಸುತ್ತೇವೆ. ಈ ಬಾರಿ ನನ್ನ ಶಾಲಾ ವಿದ್ಯಾರ್ಥಿಗಳೊಂದಿಗೆ ಸೇರಿ ವಿಶ್ವದ ಅತಿದೊಡ್ಡ ಚಾಕೊಲೇಟ್ ಸಾಂಟಾ ಕ್ಲಾಸ್ ರಚಿಸಿದ್ದೇವೆ. 16,000 ಚದರ ಅಡಿಯಲ್ಲಿ ಈ ಬೃಹತ್ ಮರಳು ಶಿಲ್ಪವನ್ನು ರಚಿಸಿದ್ದೇವೆ. ಇದನ್ನು ರಚಿಸಲು 6 ಗಂಟೆಗಳನ್ನು ತೆಗೆದುಕೊಂಡಿತು. ಪುರಿಯಲ್ಲಿರುವ ಬ್ಲೂ ಫ್ಲಾಗ್ ಬೀಚ್‌ಗೆ ಭೇಟಿ ನೀಡಲು ಬಂದವರು ವಿಶ್ವದ ಅತಿದೊಡ್ಡ ಸಾಂಟಾ ಕ್ಲಾಸ್ ಅನ್ನು ನೋಡಬಹುದು. ಆದ್ದರಿಂದ, ನಾವು ಈ ಸಾಂಟಾ ಕ್ಲಾಸ್ಸ್ ಅನ್ನು ವರ್ಲ್ಡ್ ಬುಕ್ ಆಫ್ ರೆಕಾರ್ಡ್ನಲ್ಲಿ ಇರಿಸಲು ಪ್ರಯತ್ನಿಸಿದ್ದೇವೆ. ಇಲ್ಲಿವರೆಗೆ ಚಾಕೊಲೇಟ್ ಮತ್ತು ಮರಳಿನಿಂದ ತಯಾರಿಸಿದ ಅಂತಹ ದೊಡ್ಡ ಸಾಂಟಾ ಕ್ಲಾಸ್ ಜಗತ್ತಿನಲ್ಲಿ ಇಲ್ಲ" ಎಂದು ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬದುಕಿಗೆ ಬೆಳಕಾದ ಸೌರಶಕ್ತಿ: ಜೀವನ ಹಸನಾಗಿಸಿಕೊಂಡು ಇತರರ ಬಾಳು ಬೆಳಗುತ್ತಿರುವ ಸೋಲಾರ್ ದೀದಿಯರು!