IRCTC Magnificent Madhya Pradesh Tour: ದೇಶದ ಅತ್ಯುತ್ತಮ ಹಲವು ಐತಿಹಾಸಿಕ ಪ್ರವಾಸಿ ಸ್ಥಳಗಳು ಮಧ್ಯಪ್ರದೇಶದಲ್ಲಿವೆ. ಆಧ್ಯಾತ್ಮಿಕ, ಪುರಾತನ, ವಿಶ್ವ ಪರಂಪರೆಯ, ಆಧ್ಯಾತ್ಮಿಕ, ನೈಸರ್ಗಿಕ ಮತ್ತು ವನ್ಯಜೀವಿ ಅಭಯಾರಣ್ಯಗಳು ಈ ರಾಜ್ಯದಲ್ಲಿವೆ. ಈ ಎಲ್ಲಾ ತಾಣಗಳನ್ನು ಒಂದೇ ಪ್ರವಾಸದಲ್ಲಿ ವೀಕ್ಷಿಸುವುದು ತುಂಬಾ ಕಷ್ಟ. ಇಂಡಿಯನ್ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್, ನಿಮಗಾಗಿ ಮೂರು ಪ್ರಮುಖ ನಗರಗಳಿಗೆ ಭೇಟಿ ನೀಡುವುದಕ್ಕಾಗಿ ಸೂಪರ್ ಟೂರ್ ಪ್ಯಾಕೇಜ್ ತಂದಿದೆ.
IRCTC 'ಮ್ಯಾಗ್ನಿಫಿಸೆಂಟ್ ಮಧ್ಯಪ್ರದೇಶ' (Magnificent Madhya Pradesh) ಎಂಬ ಹೆಸರಿನಲ್ಲಿ ಪ್ರವಾಸದ ಪ್ಯಾಕೇಜ್ನ್ನು ಘೋಷಿಸಿದೆ. ಪ್ರವಾಸದಲ್ಲಿ 5 ರಾತ್ರಿಗಳು ಮತ್ತು 6 ಹಗಲು ಒಳಗೊಂಡಿರುತ್ತದೆ. ನೀವು ಈ ಒಂದೇ ಪ್ರವಾಸದಲ್ಲಿ ಗ್ವಾಲಿಯರ್, ಖಜುರಾಹೊ ಮತ್ತು ಓರ್ಚಾದಲ್ಲಿರುವ ದೇವಾಲಯಗಳು ಹಾಗೂ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಬಹುದು.
ಪ್ರವಾಸದ ವಿವರಗಳು ಇಲ್ಲಿವೆ ನೋಡಿ:
1ನೇ ದಿನ: ಮೊದಲ ದಿನದ ಬೆಳಿಗ್ಗೆ ಹೈದರಾಬಾದ್‌ನಿಂದ ವಿಮಾನ ಪ್ರಯಾಣ ಆರಂಭವಾಗುತ್ತದೆ. ಮಧ್ಯಾಹ್ನದ ವೇಳೆಗೆ ಖಜುರಾಹೊ ತಲುಪಿ ಹೋಟೆಲ್‌ಗೆ ಚೆಕ್ ಇನ್ ಮಾಡಬೇಕಾಗುತ್ತದೆ. ಬಳಿಕ ಖಜುರಾಹೊದಲ್ಲಿರುವ ಹಲವಾರು ದೇವಾಲಯಗಳನ್ನು ವೀಕ್ಷಿಸಲಾಗುವುದು. ಮತ್ತೆ ಹೋಟೆಲ್‌ಗೆ ಹಿಂತಿರುಗಲಾಗುವುದು. ಅಲ್ಲಿ ಊಟ ಮಾಡಿ, ರಾತ್ರಿ ಉಳಿದುಕೊಳ್ಳಲಾಗುವುದು.
2ನೇ ದಿನ: ಎರಡನೇ ದಿನ ಬೆಳಿಗ್ಗೆ ಉಪಹಾರದ ಸೇವಿಸಿದ ನೀವು ಖಜುರಾಹೊದ ವಿವಿಧ ದೇವಾಲಯಗಳಿಗೆ ಭೇಟಿ ಕೊಡಬೇಕಾಗುತ್ತದೆ. ಸಂಜೆ ಸಮಯದಲ್ಲಿ ಖಜುರಾಹೊ ನೃತ್ಯ ಉತ್ಸವಕ್ಕೆ ಭೇಟಿ ನೀಡಲಾಗುವುದು. ಊಟ ಮಾಡಿದ ಬಳಿಕ ಇಲ್ಲಿರುವ ಹೋಟೆಲ್ನಲ್ಲಿಯೇ ತಂಗಲಾಗುವುದು.
3ನೇ ದಿನ: ಮೂರನೇ ದಿನ ಬೆಳಿಗ್ಗೆ ಉಪಹಾರದ ಸೇವಿಸಿದ ನಂತರ ನೀವು ಹೋಟೆಲ್ನಿಂದ ಚೆಕ್ ಔಟ್ ಮಾಡಿ ಓರ್ಚಾಗೆ ಹೊರಡಲಾಗುವುದು. ಅಲ್ಲಿನ ಹೋಟೆಲ್‌ಗೆ ಭೇಟಿ ನೀಡಿದ ಬಳಿಕ, ಓರ್ಚಾ ಕೋಟೆ ಸಂಕೀರ್ಣ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ಕೊಡಲಾಗುವುದು. ಹೋಟೆಲ್‌ಗೆ ಹಿಂತಿರುಗಿ ರಾತ್ರಿ ಅಲ್ಲಿಯೇ ತಂಗಲಾಗುವುದು.
4ನೇ ದಿನ: ನಾಲ್ಕನೇ ದಿನ ಉಪಾಹಾರ ಸೇವಿಸಿದ ನಂತರ, ನೀವು ಓರ್ಚಾದಿಂದ ಗ್ವಾಲಿಯರ್‌ಗೆ ಪ್ರಯಾಣ ಮಾಡಲಿದ್ದೀರಿ. ಹೋಟೆಲ್‌ನಲ್ಲಿ ಚೆಕ್ ಇನ್ ಮಾಡಿದ ಬಳಿಕ ನೀವು ಗ್ವಾಲಿಯರ್ ಕೋಟೆ ಹಾಗೂ ಸೂರ್ಯ ದೇವಾಲಯ ವೀಕ್ಷಣೆ ಮಾಡುತ್ತೀರಿ. ನೀವು ಆ ರಾತ್ರಿ ಅಲ್ಲಿಯೇ ಉಳಿಯಬೇಕಾಗುತ್ತದೆ.
5ನೇ ದಿನ: ಐದನೇ ದಿನ ಉಪಹಾರದ ನಂತರ, ಚೌಸತ್ ಯೋಗಿನಿ ದೇವಸ್ಥಾನಕ್ಕೆ ಭೇಟಿ ನೀಡಲಾಗುವುದು. ಮಧ್ಯಾಹ್ನ ಊಟ ಮಾಡಿದ ನಂತರ, ಜೈ ವಿಲಾಸ ಅರಮನೆ ವೀಕ್ಷಿಸಲಾಗುವುದು. ಆ ರಾತ್ರಿ ಇಲ್ಲಿಯೇ ಉಳಿಯಲಾಗುವುದು.
6ನೇ ದಿನ: ಆರನೇ ದಿನ ಬೆಳಿಗ್ಗೆ ಉಪಹಾರ ಸೇವಿಸಿ ವಿಶ್ರಾಂತಿ ಪಡೆದುಕೊಳ್ಳಿ. ಮಧ್ಯಾಹ್ನದ ನಂತರ, ಗ್ವಾಲಿಯರ್ ವಿಮಾನ ನಿಲ್ದಾಣಕ್ಕೆ ಹೋಗಲಾಗುವುದು, ಅಲ್ಲಿಂದ ಹೈದರಾಬಾದ್‌ಗೆ ಮರಳಲಾಗುವುದು. ಮತ್ತೆ ಹೈದರಾಬಾದ್ ತಲುಪಿದ ನಂತರ ಪ್ರವಾಸ ಪೂರ್ಣವಾಗಲಿದೆ.
ಟೂರ್ ಪ್ಯಾಕೇಜ್ ಶುಲ್ಕದ ವಿವರ:
- ಕಂಫರ್ಟ್‌ನಲ್ಲಿ ಸಿಂಗಲ್ ಸೀಟ್ ಹಂಚಿಕೆ (ವ್ಯಕ್ತಿಯೊಬ್ಬರಿಗೆ)- ₹41,800
- ಡಬಲ್ ಸಿಂಗಲ್ ಸೀಟ್ ಹಂಚಿಕೆ (ವ್ಯಕ್ತಿಯೊಬ್ಬರಿಗೆ)- ₹34,600
- ಟ್ರಿಪಲ್ ಸೀಟ್ ಹಂಚಿಕೆ- ₹33,000
- 5 ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ಹಾಸಿಗೆ ಸಹಿತ ₹29,850 ಹಾಗೂ ಹಾಸಿಗೆ ರಹಿತ ₹26,800
- 2 ರಿಂದ 4 ವರ್ಷ ವಯಸ್ಸಿನ ಮಕ್ಕಳಿಗೆ ಹಾಸಿಗೆ ಸಹಿತ, ಕೊಠಡಿ ಇಲ್ಲದಿದ್ದರೆ ₹21,700 ಶುಲ್ಕ ವಿಧಿಸಲಾಗುತ್ತದೆ.
ಪ್ಯಾಕೇಜ್ನಲ್ಲಿ ಏನಿದೆ?
- ವಿಮಾನ ಟಿಕೆಟ್‌ಗಳು
- ಹೋಟೆಲ್ ವಸತಿ
- 5 ಉಪಾಹಾರ, 5 ರಾತ್ರಿ ಊಟ, 1 ಮಧ್ಯಾಹ್ನ ಊಟ
- ಪ್ರಯಾಣ ವಿಮೆ
- ಸ್ಥಳೀಯ ಸಾರಿಗೆಗಾಗಿ ಪ್ಯಾಕೇಜ್ ಅವಲಂಬಿಸಿರುವ ವಾಹನ
- ಈ ಟೂರ್ ಪ್ಯಾಕೇಜ್ ಪ್ರಸ್ತುತ ಫೆಬ್ರವರಿ 19 ರಂದು ಲಭ್ಯವಿದೆ.
- ಈ ಪ್ರವಾಸದ ಪ್ಯಾಕೇಜ್ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿಯಲು ಹಾಗೂ ಬುಕ್ ಮಾಡಲು ಲಿಂಕ್ ಕ್ಲಿಕ್ ಮಾಡಿ.
ಇದನ್ನೂ ಓದಿ: ಮಹಾ ಕುಂಭಮೇಳ, ವಾರಣಾಸಿ & ಅಯೋಧ್ಯೆಕ್ಕೆ ಕಡಿಮೆ ದರದಲ್ಲಿ IRCTC ಸೂಪರ್ ಟೂರ್ ಪ್ಯಾಕೇಜ್