Punjab Kings new captain: ಐಪಿಎಲ್ 18ನೇ ಸೀಸನ್ ಆರಂಭಕ್ಕೆ ಇನ್ನೂ ಎರಡು ತಿಂಗಳು ಬಾಕಿ ಇದ್ದು ಈಗಿನಿಂದಲೇ ಎಲ್ಲಾ ತಂಡಗಳು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿವೆ. ಈ ಆವೃತ್ತಿಯಲ್ಲಿ ಎಲ್ಲಾ 10 ತಂಡಗಳು ಬದಲಾದ ರೂಪದಲ್ಲಿ ಕಾಣಿಸಿಕೊಳ್ಳುತ್ತಿವೆ. ಕಾರಣ ಕಳೆದ ತಿಂಗಳು ಜೆಡ್ಡಾದಲ್ಲಿ ನಡೆದಿದ್ದ ಐಪಿಎಲ್ ಮೆಗಾ ಹರಾಜಿನಲ್ಲಿ ಎಲ್ಲಾ 10 ತಂಡಗಳ 182 ಆಟಗಾರರನ್ನು ಖರೀದಿಸಿವೆ. ಸಧ್ಯ ಹೆಚ್ಚಿನ ತಂಡಗಳು ಹೊಸ ನಾಯಕನ ಹುಡುಕಾಟದಲ್ಲಿ ಬ್ಯುಸಿ ಆಗಿವೆ. ಏತನ್ಮಧ್ಯೆ ಪಂಜಾಬ್ ಕಿಂಗ್ಸ್ ಇಂದು ನೂತನ ನಾಯಕನನ್ನು ಹೆಸರಿಸಿದೆ.
ಪಂಜಾಬ್ ಕಿಂಗ್ಸ್ ತನ್ನ ಹೊಸ ನಾಯಕನಾಗಿ ಶ್ರೇಯಸ್ ಐಯ್ಯರ್ ಅವರನ್ನು ನೇಮಿಸಿದೆ. ಮೆಗಾ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಪಂಜಾಬ್ ಕಿಂಗ್ಸ್ 26.75 ಕೋಟಿ ಕೊಟ್ಟು ಖರೀದಿ ಮಾಡಿತ್ತು. ಇಂದು ಸಲ್ಮಾನ್ ಖಾನ್ ಅವರು ಮುನ್ನಡೆಸುವ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮೂಲಕ ಪಂಜಾಬ್ ಕಿಂಗ್ಸ್ ತಮ್ಮ ನೂತನ ನಾಯಕನನ್ನು ಹೆಸರನ್ನು ಘೋಷಿಸಿತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಐಯ್ಯರ್ ಪಂಜಾಬ್ ಕಿಂಗ್ಸ್ ಮ್ಯಾನೇಜ್ಮೆಂಟ್ಗೆ ಕೃತಜ್ಞತೆ ಸಲ್ಲಿಸಿದ್ದಾರೆ. "ತಂಡವು ನನ್ನ ಮೇಲೆ ನಂಬಿಕೆ ಇಟ್ಟಿರುವುದಕ್ಕೆ ಕೃತಜ್ಞತೆಗಳು. ಮತ್ತೊಮ್ಮೆ ಕೋಚ್ ರಿಕಿ ಪಾಂಟಿಂಗ್ ಅವರೊಂದಿಗೆ ಸೇರಿ ಕೆಲಸ ಮಾಡಲು ನಾನು ಉತ್ಸುಕನಾಗಿದ್ದೇನೆ. ಈ ಬಾರಿ ನಮ್ಮ ತಂಡವೂ ತಂಬ ಬಲಿಷ್ಠವಾಗಿದೆ. ಈ ಬಾರಿ ಉತ್ತಮ ಪ್ರದರ್ಶನದೊಂದಿಗೆ ಚೊಚ್ಚಲ ಕಪ್ ಗೆಲ್ಲುತ್ತೇವೆ ಎಂಬ ನಂಬಿಕೆ ನಮಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
𝘞𝘪𝘵𝘩 𝘨𝘳𝘦𝘢𝘵 𝘱𝘰𝘸𝘦𝘳 𝘤𝘰𝘮𝘦𝘴 𝘨𝘳𝘦𝘢𝘵 𝘳𝘦𝘴𝘱𝘰𝘯𝘴𝘪𝘣𝘪𝘭𝘪𝘵𝘺! 💫#CaptainShreyas #SaddaPunjab #PunjabKings pic.twitter.com/jCYtx4bbVH
— Punjab Kings (@PunjabKingsIPL) January 12, 2025
ಪಂಜಾಬ್ ಕಿಂಗ್ಸ್ ತಂಡ: ಶ್ರೇಯಸ್ ಐಯ್ಯರ್ (ನಾಯಕ), ಪ್ರಭ ಸಿಮ್ರಾನ್ ಸಿಂಗ್, ಶಶಾಂಕ್ ಸಿಂಗ್, ಯುಜ್ವೇಂದ್ರ ಚಾಹಲ್, ಅರ್ಷ್ದೀಪ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್ವೆಲ್, ಹರ್ಪ್ರೀತ್ ಬರಾರ್, ನೆಹಾಲ್ ವಧೇರಾ, ವಿಜಯ್ ಕುಮಾರ್ ವೈಶಾಕ್, ವಿಷ್ಣು ವಿನೋದ್, ಮಾರ್ಕೊ ಜಾನ್ಸೆನ್, ಯಶ್ ಠಾಕೂರ್, ಲೋಕಿ ಫರ್ಗುಸನ್, ಮುಶೀರ್ ಖಾನ್, ಅಜ್ಮತುಲ್ಲಾ ಒಮರ್ಜೈ, ಜೋಸ್ ಇಂಗ್ಲಿಸ್, ಹರ್ನೂರ್ ಪನ್ನು, ಕುಲದೀಪ್ ಸೇನ್, ಪ್ರಿಯಾಂಶ್ ಆರ್ಯ, ಆರನ್ ಹಾರ್ಡಿ, ರಾಜ್ ಅಂಗದ್ ಬಾವಾ, ಸುಯಾಶ್ ಶೆಡ್ಜ್, ಕ್ಸೇವಿಯರ್ ಬಾರ್ಟ್ಲೆ, ಪಾಯ್ಲಾ ಅವಿನಾಶ್.
ಐಪಿಎಲ್ ದಿನಾಂಕ: ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಇಂದು ಐಪಿಎಲ್ ದಿನಾಂಕವನ್ನು ಘೋಷಣೆ ಮಾಡಿದ್ದಾರೆ. ಬಿಸಿಸಿಐ ಸಭೆ ಬಳಿಕ ಮಾತನಾಡಿದ ಅವರು 18ನೇ ಆವೃತ್ತಿಯ ಐಪಿಎಲ್ ಮಾರ್ಚ್, 23ರಿಂದ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಐಪಿಎಲ್ 2025ರ ದಿನಾಂಕ ಘೋಷಣೆ: ಮೊದಲ ಪಂದ್ಯ, ಫೈನಲ್ ಯಾವಾಗ ಗೊತ್ತಾ?