ETV Bharat / entertainment

ಹೈದರಾಬಾದ್​ ಮೆಟ್ರೋನಲ್ಲಿ ಕಿಚ್ಚನ ಪ್ರಯಾಣ ; ಸುದೀಪ್​ ಸರಳತೆಗೆ ಮನಸೋತ ಅಭಿಮಾನಿಗಳು - KICCHA SUDEEP IN HYDERABAD METRO

ಸಿಸಿಎಲ್​ ಹಿನ್ನೆಲೆ ಹೈದರಾಬಾದ್​ಗೆ ತೆರಳಿರುವ ನಟ ಸುದೀಪ್​ ತಮ್ಮ ತಂಡದ ಆಟಗಾರರೊಂದಿಗೆ ಮೆಟ್ರೋದಲ್ಲಿ ಕ್ರಿಕೆಟ್​ ಸ್ಟೇಡಿಯಂಗೆ ತಲುಪಿದರು.

kiccha-sudeep-travelled-in-hyderabad-metro-rail
ತಂಡದ ಸದಸ್ಯರೊಂದಿಗೆ ನಟ ಸುದೀಪ್​ (ಈಟಿವಿ ಭಾರತ್​)
author img

By ETV Bharat Karnataka Team

Published : Feb 13, 2025, 2:15 PM IST

ಹೈದರಾಬಾದ್ ​: ಕಿಚ್ಚ ಸುದೀಪ್​ ಹೈದರಾಬಾದ್​ ಹೈದರಾಬಾದ್​ನ ಮೆಟ್ರೋದಲ್ಲಿ ಪ್ರಯಾಣ ಮಾಡಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸೆಲೆಬ್ರಿಟಿ ಕ್ರಿಕೆಟ್​ ಲೀಗ್​ (CCL)ಗಾಗಿ ಹೈದರಾಬಾದ್​ಗೆ ತೆರಳಿದ ಅವರು ತಮ್ಮ ತಂಡದ ಸದಸ್ಯರೊಂದಿಗೆ ಉಪ್ಪಾಳ್​​ ಸ್ಟೇಡಿಯಂಗೆ ಮೆಟ್ರೋದಲ್ಲಿ ಬುಧವಾರ ಸಂಜೆ ಪ್ರಯಾಣಿಸಿದರು. ಈ ವೇಳೆ ತಮ್ಮ ನೆಚ್ಚಿನ ನಟನನ್ನು ಕಂಡ ಅನೇಕ ಅಭಿಮಾನಿಗಳು ಮತ್ತು ಮೆಟ್ರೋ ಸಿಬ್ಬಂದಿಗಳು ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾದರು. ಸಾಮಾನ್ಯ ಜನರಂತೆ ಮೆಟ್ರೋದಲ್ಲಿ ಪ್ರಯಾಣಿಸಿದ ಸುದೀಪ್​ ಅವರ ನಡೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

11ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್​ ಲೀಗ್​ ನಡೆಯುತ್ತಿದ್ದು, ಕರ್ನಾಟಕ ಬುಲ್ಡೋಜರ್​ ತಂಡದ ನಾಯಕನಾಗಿ ಸುದೀಪ್​ ಇದ್ದಾರೆ. ನಾಳೆ (ಫೆಬ್ರವರಿ 14) ಕರ್ನಾಟಕ ತಂಡ ಚೆನ್ನೈನ ರೈನೊಸ್​​ ತಂಡವನ್ನು ಎದುರಿಸಲಿದೆ. ಜೊತೆಗೆ ಫೆಬ್ರವರ 15ರಂದು ತೆಲುಗು ವಾರಿಯರ್ಸ್​ ಮತ್ತು ಚೆನ್ನೈ ರೈನೋಸ್​ ತಂಡ ಕೂಡ ಸೆಣಸಲಿದ್ದು, ಇದಕ್ಕಾಗಿ ಸ್ಟೇಡಿಯಂ ಮುಂದೆ ಬಿಗಿ ಪೊಲೀಸ್​ ಭದ್ರತೆ ಕೂಡ ಮಾಡಲಾಗಿದೆ.

kiccha-sudeep-travelled-in-hyderabad-metro-rail
ಮೆಟ್ರೋ ಸಿಬ್ಬಂದಿಗಳೊಂದಿಗೆ ಸುದೀಪ್​ (ETV Bharat)

ಸಿಸಿಎಲ್​ಗೆ ಬಿಗಿ ಭದ್ರತೆ : ಸೆಲೆಬ್ರಿಟಿ ಕ್ರಿಕೆಟ್​ ಲೀಗ್​ ಮ್ಯಾಚ್​ಗೆ ಜನರು ತಮ್ಮ ನೆಚ್ಚಿನ ನಟರನ್ನು ಕಣ್ತುಂಬಿಕೊಳ್ಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಉಪ್ಪಾಳ್​ನ ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ಈ ಮ್ಯಾಚ್​ಗಳು ನಡೆಯಲಿದೆ. ಈ ನಿಟ್ಟಿನಲ್ಲಿ ಬಿಗಿ ಭದ್ರತೆ ನಡೆಸಲಾಗಿದೆ. ಈ ಕುರಿತು ಮಾತನಾಡಿರುವ ಪೊಲೀಸ್​ ಆಯುಕ್ತರು ಸಿಸಿಎಲ್​ ಮ್ಯಾಚ್​ಗೆ ಯಾವುದೇ ಅಡ್ಡಿಯಾಗದಂತೆ ಕ್ರಮ ನಡೆಸಲು ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ಮ್ಯಾಚ್​ನಲ್ಲಿ ಪ್ರತಿಯೊಬ್ಬರ ಚಲನವನದ ಮೇಲೂ ಕಣ್ಣಿಡಲಾಗಿದೆ. ಹಾಗೇ ವಾಹನ ಪಾರ್ಕಿಂಗ್​ಗೆ ವ್ಯವಸ್ಥೆ ನಡೆಸಲಾಗಿದೆ ಎಂದರು.

ಕರ್ನಾಟಕ ತಂಡಕ್ಕೆ ಜಯ : ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯನಲ್ಲಿ ಫೆಬ್ರವರಿ 8ರಂದು ಕರ್ನಾಟಕ ಬುಲ್ಡೋಜರ್​ ಮತ್ತು ತೆಲುಗು ವಾರಿಯರ್​ ನಡುವೆ ಪಂದ್ಯ ನಡೆದಿದ್ದು, ಇದರಲ್ಲಿ ತೆಲುಗು ತಂಡ 46 ರನ್​ಗಳಿಂದ ಸೋಲು ಕಂಡಿತು. ತೆಲುಗು ವಾರಿಯರ್​ ತಂಡದ ನೇತೃತ್ವವನ್ನು ಅಕ್ಕಿನೇನಿ ಅಖಿಲ್​ ವಹಿಸಿದ್ದರೆ, ಕರ್ನಾಟಕ ತಂಡಕ್ಕೆ ಸುದೀಪ್​ ಸಾರಥ್ಯವಿದೆ.

ತಂಡದ ಸದಸ್ಯರೊಂದಿಗೆ ನಟ ಸುದೀಪ್​ (ETV Bharat)

ಮೆಟ್ರೋದಲ್ಲಿ ಇವರನ್ನು ಕಂಡ ಸಹ ಪ್ರಯಾಣಿಕರು ಸುದೀಪ್​ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಲ್ಲದೆ ಅವರ ಸರಳತೆಗೆ ಮನಸೋತರು. ತೆಲುಗಿನ 'ಈಗಾ' ಚಿತ್ರದಲ್ಲಿ ವಿಲನ್​ ಆಗಿ ನಟಿಸಿರುವ ಬಹುಭಾಷಾ ನಟ ಸುದೀಪ್​ ತೆಲುಗು ನಾಡಿನಲ್ಲಿಯೂ ತಮ್ಮದೇ ಆದ ಅಭಿಮಾನ ಬಳಗ ಹೊಂದಿದ್ದಾರೆ.

ಇದನ್ನೂ ಓದಿ: ಶತಮಾನದ ಸಂಭ್ರಮದಲ್ಲಿ 'ಹರಿಭಾವು ವಿಶ್ವನಾಥ ಮ್ಯೂಸಿಕಲ್'​; ಸ್ಥಳ ಬದಲಿಸಿದ ಸಂಗೀತ ಪರಂಪರೆಯ ಅಂಗಡಿ

ಇದನ್ನೂ ಓದಿ: ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ತುಳುನಾಡಿನ ದೈವ ನೇಮದಲ್ಲಿ ಭಾಗಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.