ETV Bharat / state

ಸಿಎಂ ಕುರ್ಚಿ ಖಾಲಿ ಇಲ್ಲ, ಸಿದ್ದರಾಮಯ್ಯನವರೇ ಮುಂದುವರೆಯುತ್ತಾರೆ: ಸಚಿವ ಹೆಚ್​.ಸಿ. ಮಹದೇವಪ್ಪ - H C MAHADEVAPPA

ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಅನಾವಶ್ಯಕವಾಗಿ ಸಿಎಂ ಕುರ್ಚಿ ಬಗ್ಗೆ ಚರ್ಚೆ ಆಗುತ್ತಿದೆ ಅಷ್ಟೇ ಎಂದು ಸಚಿವ ಹೆಚ್​.ಸಿ. ಮಹದೇವಪ್ಪ ಹೇಳಿದರು.

ಸಚಿವ ಹೆಚ್​.ಸಿ. ಮಹದೇವಪ್ಪ
ಸಚಿವ ಹೆಚ್​.ಸಿ. ಮಹದೇವಪ್ಪ (ETV Bharat)
author img

By ETV Bharat Karnataka Team

Published : Jan 12, 2025, 10:51 PM IST

ಮೈಸೂರು: "ಸಿಎಂ ಕುರ್ಚಿ ಖಾಲಿ ಇಲ್ಲ. ಸಿದ್ದರಾಮಯ್ಯ ಸಿಎಂ ಆಗಿ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ" ಎಂದು ಸಚಿವ ಹೆಚ್​.ಸಿ. ಮಹದೇವಪ್ಪ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕೂಗಾಟ, ಚರ್ಚೆ ಏನು ಇಲ್ಲ. ಈಗ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಅನಾವಶ್ಯಕವಾಗಿ ಸಿಎಂ ಕುರ್ಚಿ ಬಗ್ಗೆ ಚರ್ಚೆ ಆಗುತ್ತಿದೆ ಅಷ್ಟೇ" ಎಂದರು.

ಸಿಎಂ ಬದಲಾವಣೆ ವಿಚಾರ ಮುನ್ನೆಲೆಗೆ ಬಂದಿರುವ ಸಂದರ್ಭದಲ್ಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿರುವ ವಿಚಾರ ಕುರಿತು ಮಾತನಾಡಿದ ಅವರು, "ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇದರ ಬಗ್ಗೆ ಚರ್ಚೆ ಮಾಡುವುದಕ್ಕೆ ಸಭೆ ಕರೆಯಲಾಗಿದೆ. ಸುರ್ಜೇವಾಲಾ ಕೂಡ ಸಭೆಗೆ ಬರುತ್ತಿದ್ದಾರೆ. ಇದು ಯಾವುದೇ ಶಕ್ತಿ ಪ್ರದರ್ಶನ ಅಲ್ಲ" ಎಂದು ಸ್ಪಷ್ಟಪಡಿಸಿದರು.

ಸಚಿವ ಹೆಚ್​.ಸಿ. ಮಹದೇವಪ್ಪ (ETV Bharat)

"ಡಿ.ಕೆ.ಶಿವಕುಮಾರ್​ಗೆ ಹೈಕಮಾಂಡ್ ಬೆಂಬಲ ಇದೆ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿ, ಇಡೀ ಕಾಂಗ್ರೆಸ್​ಗೆ ಹೈಕಮಾಂಡ್ ಬೆಂಬಲವಾಗಿ ನಿಂತಿದೆ. ಹೈಕಮಾಂಡ್ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಪರವಾಗಿದೆ. ಡಿ.ಕೆ.ಶಿವಕುಮಾರ್​​ ಹೇಳಿರುವುದು ಸರಿ ಇದೆ. ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೋ ಅದೇ ಅಂತಿಮ. ಒಂದು ಕಡೆ ಸೇರಿ ಊಟ ಮಾಡುವುದು ಅಪರಾಧವಾ?, ಟೀ ಕುಡಿಯಲು ಸೇರಿವುದು ಗುಂಪುಗಾರಿಕೆಯಾ?, ಆ ರೀತಿ ಏನೂ ಇಲ್ಲ. ಕಾಂಗ್ರೆಸ್​ನಲ್ಲಿ ಎಲ್ಲರೂ ಒಗಟ್ಟಾಗಿದ್ದೇವೆ" ಎಂದು ಹೇಳಿದರು.

ಪರಮೇಶ್ವರ್​ ಅವರ ಡಿನ್ನರ್​ ​ಪಾರ್ಟಿಗೆ ಬ್ರೇಕ್ ಹಾಕಿರುವ ವಿಚಾರದ ಬಗ್ಗೆ ಮಾತನಾಡಿ, "ಡಿನ್ನರ್​ ಪಾರ್ಟಿಗೆ ತಡೆಯಾಗಿಲ್ಲ. ಸುರ್ಜೇವಾಲ ನಾಳೆ ಬರ್ತಿದ್ದಾರೆ. ಚರ್ಚೆ ಮಾಡಿ ಕಾರ್ಯಕ್ರಮ ಮಾಡುತ್ತೇವೆ. ಡಿನ್ನರ್​ಗೆ ಯಾವ ತಡೆಯನ್ನೂ ಕೊಟ್ಟಿಲ್ಲ. ನಿಲ್ಲಿಸಿ ಎಂದು ಯಾರು ಹೇಳಿಲ್ಲ. ಡಿ. ಕೆ. ಶಿವಕುಮಾರ್​ ಇದ್ದಾಗಲೂ ಡಿನ್ನರ್​ ಪಾರ್ಟಿ ನಡೆದಿದೆ, ಇಲ್ಲದಿದ್ದಾಗಲೂ ನಡೆದಿದೆ. ಅದಕ್ಕೆ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ" ಎಂದರು.

"ಶಿವಕುಮಾರ್​ ಧಾರ್ಮಿಕವಾಗಿ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ. ಸಂವಿಧಾನದಲ್ಲಿ ಸ್ವಾತಂತ್ರ್ಯ ಇದೆ. ಧಾರ್ಮಿಕ ಆಚರಣೆಗಳಲ್ಲಿ ಶಿವಕುಮಾರ್​ ಮುಕ್ತವಾಗಿದ್ದಾರೆ. ರಾಜಕಾರಣದಲ್ಲಿ ಯಾರೂ ಕೂಡ ಸನ್ಯಾಸಿಗಳಲ್ಲ. ಅಧಿಕಾರ ಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ನನಗೆ, ಜನಗಳಿಗೆ ಮತ್ತು ದೇಶಕ್ಕೆ ಸಂವಿಧಾನಕ್ಕೆ ಒಳ್ಳೆಯದಾಗಬೇಕೆಂಬ ಆಸೆ ಇದೆ. ರೇಸ್ ಇಲ್ಲದ ಮೇಲೆ ಆಸೆ ಇಲ್ಲ" ಎಂದು ತಿಳಿಸಿದರು.

"ಕೆಆರ್‌ಎಸ್ ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರಿಡುವುದು, ಬಿಡುವುದು ಸ್ಥಳೀಯ ಆಡಳಿತಕ್ಕೆ ಬಿಟ್ಟ ವಿಚಾರ. ಸಿದ್ದರಾಮಯ್ಯನವರಿಗೆ ರಸ್ತೆಗೆ ಹೆಸರಿಟ್ಟುಕೊಂಡು ಗುರುತಿಸಿಕೊಳ್ಳುವ ಪರಿಸ್ಥಿತಿ ಇದೆಯಾ?. ಸಾಧನೆ ಮಾಡಿದವರು, ಸಮಾಜಮುಖಿ ಕೆಲಸ ಮಾಡಿದವರ ಹೆಸರನ್ನು ವೃತ್ತಕ್ಕೆ, ರಸ್ತೆಗೆ ಇಡುತ್ತಾರೆ. ಯಾರದ್ದೋ ಹೆಸರನ್ನು ತೆಗೆದು ಅವರ ಹೆಸರಿಡುವುದು ಬೇಡ. ಅದರ ಬಗ್ಗೆ ನಾನು ಏನು ಹೇಳಲ್ಲ, ಇದೆಲ್ಲ ಸ್ಥಳೀಯ ಆಡಳಿತಕ್ಕೆ ಬಿಟ್ಟ ವಿಚಾರ. ಹೆಸರಿಡುವ ವಿಚಾರಕ್ಕೆ ಪಟ್ಟು ಹಿಡಿದಿಲ್ಲ. ಹೆಸರಿಡಿ ಎಂದು ಸಿದ್ದರಾಮಯ್ಯನವರೂ ಸಹ ಕೇಳಿಲ್ಲ" ಎಂದರು.

ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ಸಿಎಂ ಆಗೇ ಆಗ್ತಾರೆ : ಶಾಸಕ ಶಿವಗಂಗಾ ಬಸವರಾಜ್

ಇದನ್ನೂ ಓದಿ: ಅನಗತ್ಯ ಗೊಂದಲ ಬೇಡ, ಒಕ್ಕಲಿಗರ ಸಭೆ ಮುಂದೂಡಿ: ಡಿ.ಕೆ.ಶಿವಕುಮಾರ್ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.