ETV Bharat / technology

Xiaomiಯಿಂದ ಬ್ಲಿಂಕಿಟ್​ವರೆಗೆ: ಓದಿ ಇಂದಿನ ಟೆಕ್​ ಸುದ್ದಿಗಳು - DAILY TECH NEWS

Daily Tech News: ದೇಶಿಯ ಮಾರುಕಟ್ಟೆಗೆ Xiaomi ತನ್ನ ಹೊಸ ಟ್ಯಾಬ್ಲೆಟ್ ಪರಿಚಯಿಸಿದೆ. ಲಾವಾ ತನ್ನ ಸ್ಮಾರ್ಟ್ ವಾಚ್ ಬಿಡುಗಡೆ ಮಾಡಿದೆ. ಈ ದಿನದ ಟೆಕ್​ ಜಗತ್ತಿನ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

DAILY TECH NEWS  ONEPLUS 13 5G  XIAOMI PAD 7  DAILY TECH NEWS IN KANNADA
Xiaomi ದಿಂದ ಬ್ಲಿಂಕಿಟ್​ವರೆಗೆ (Photo Credit: Xiaomi)
author img

By ETV Bharat Karnataka Team

Published : Jan 11, 2025, 9:45 AM IST

Daily Tech News: ಟೆಕ್​ ಜಗತ್ತಿನಲ್ಲಿ ನಿತ್ಯ ಏನಾದರೂ ವಿಶೇಷ ನಡೆಯುತ್ತಲೇ ಇರುತ್ತದೆ. ಇಂದಿಗೂ ಟೆಕ್​ ಲೋಕ ಅನೇಕ ವಿಷಯಗಳಿಂದ ಸುದ್ದಿಯಾಗಿದೆ. ಇವುಗಳಲ್ಲಿ ಅತ್ಯಂತ ವಿಶೇಷವೆಂದರೆ Xiaomiಯ ಹೊಸ ಟ್ಯಾಬ್ಲೆಟ್, ಲಾವಾದ ಸ್ಮಾರ್ಟ್ ವಾಚ್, ಬ್ಲಿಂಕಿಟ್​ನಿಂದ ಹೊಸ ಸೇವೆ ಸೇರಿದಂತೆ ಇನ್ನೂ ಅನೇಕ ಪ್ರಾಡಕ್ಟ್​ಗಳು ಲಾಂಚ್​ ಆಗಿವೆ.

Redmi 14C 5G ಮೊದಲ ಮಾರಾಟ: Redmi 14C 5G ಅನ್ನು ಕೆಲವು ದಿನಗಳ ಹಿಂದೆ ಅಂದರೆ ಜನವರಿ 6 ರಂದು ಬಿಡುಗಡೆ ಮಾಡಲಾಗಿತ್ತು. ಈ ಫೋನ್ ಶಿಯೋಮಿ ಇಂಡಿಯಾದ ಅಧಿಕೃತ ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಲ್ಲಿ ಮಾರಾಟಕ್ಕೆ ಲಭ್ಯವಾಗಿದೆ. ಈ ಫೋನಿನ ಬೆಲೆ 9,999 ರೂ.ಗಳಿಂದ ಆರಂಭವಾಗುತ್ತದೆ. ಇದರಲ್ಲಿ ಬಳಕೆದಾರರು 4GB RAM ಮತ್ತು 64GB ಸ್ಟೋರೇಜ್ ಸೌಲಭ್ಯ ಪಡೆಯುತ್ತಾರೆ.

OnePlus 13 5G ಮೊದಲ ಮಾರಾಟ: OnePlus 13 5G ಅನ್ನು ಭಾರತದಲ್ಲಿ ಜನವರಿ 7 ರಂದು ಬಿಡುಗಡೆ ಮಾಡಲಾಗಿದೆ. ಗ್ರಾಹಕರು ಈ ಫೋನ್ ಅನ್ನು ಒನ್‌ಪ್ಲಸ್‌ನ ಅಧಿಕೃತ ಆನ್‌ಲೈನ್ ಅಂಗಡಿಗಳಿಂದ ಮತ್ತು ಅಮೆಜಾನ್‌ನಿಂದ ಖರೀದಿಸಬಹುದು. ಈ ಫೋನಿನ ಬೆಲೆ 69,999 ರೂ.ಗಳಿಂದ ಆರಂಭವಾಗುತ್ತದೆ. ಐಸಿಐಸಿಐ ಬ್ಯಾಂಕ್ ಕಾರ್ಡ್ ಮೂಲಕ 5000 ರೂ.ಗಳ ಡಿಸ್ಕೌಂಟ್​ ಪಡೆಯಬಹುದು. ಇದಲ್ಲದೇ, ಈ ಫೋನ್‌ನಲ್ಲಿ 7000 ರೂ.ಗಳ ಹೆಚ್ಚುವರಿ ಎಕ್ಸ್​ಚೇಂಜ್​ ಬೋನಸ್ ಮತ್ತು 12 ತಿಂಗಳವರೆಗೆ ನೋ ಕಾಸ್ಟ್​ ಇಎಂಐ ಆಯ್ಕೆಯೂ ಲಭ್ಯವಿದೆ.

ಶಿಯೋಮಿ ಪ್ಯಾಡ್ 7 ಲಾಂಚ್​: ಶಿಯೋಮಿ ಕಂಪನಿ ದೇಶಿಯ ಮಾರುಕಟ್ಟೆಗೆ ಶಿಯೋಮಿ ಪ್ಯಾಡ್ 7 ಬಿಡುಗಡೆ ಮಾಡಿದೆ. ಈ ಟ್ಯಾಬ್ಲೆಟ್ 11.2-ಇಂಚಿನ 3.2K IPS LCD ಸ್ಕ್ರೀನ್​ ಹೊಂದಿದ್ದು, ಇದರ ರಿಫ್ರೆಶ್ ರೇಟ್​ 144Hz ಆಗಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7+ Gen 3 SoC ಚಿಪ್‌ಸೆಟ್, ಆಂಡ್ರಾಯ್ಡ್ 15 ಆಧಾರಿತ ಹೈಪರ್‌ಓಎಸ್ 2.0 ಓಎಸ್, 8,880mAh ಬ್ಯಾಟರಿ ಮತ್ತು 45W ಸ್ಪೀಡ್​ ಚಾರ್ಜಿಂಗ್‌ನೊಂದಿಗೆ ಬರುತ್ತದೆ. ಇದರ ಬೆಲೆ 27,999 ರೂ.ಗಳಿಂದ ಪ್ರಾರಂಭವಾಗುತ್ತದೆ.

ಲಾವಾ ಪ್ರೊವಾಚ್ V1 ಬಿಡುಗಡೆ: ಲಾವಾ ಭಾರತದಲ್ಲಿ ತನ್ನ ಸ್ಮಾರ್ಟ್ ವಾಚ್ ಬಿಡುಗಡೆ ಮಾಡಿದೆ. ಈ ವಾಚ್​ನ ಹೆಸರು ಲಾವಾ ಪ್ರೊವಾಚ್ V1. ಇದು 1.85 ಇಂಚಿನ AMOLED ಡಿಸ್​ಪ್ಲೇ ಹೊಂದಿದ್ದು, ಇದರ ಬ್ರೈಟ್​ನೆಸ್​ 500 ನಿಟ್ಸ್​. ಇದರ ಸ್ಕ್ರೀನ್​ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್​ ಹೊಂದಿದ್ದು, ಇದು IP68 ಡಸ್ಟ್​ ಮತ್ತು ವಾಟರ್​ ರೆಸಿಸ್ಟೆಂಟ್ ಜೊತೆ​ ಬರುತ್ತದೆ. ಈ ಸಾಧನದಲ್ಲಿ ಪ್ರೊಸೆಸರ್‌ಗಾಗಿ Realtek 8773 SoC ಚಿಪ್‌ಸೆಟ್ ಬಳಸಲಾಗಿದೆ. ಇದು 270mAh ಬ್ಯಾಟರಿ, 2.5D GPU ಅನಿಮೇಷನ್ ಎಂಜಿನ್, GPS ಜೊತೆಗೆ SpO2, ಹಾರ್ಟ್​ ರೇಟ್, ಸ್ಟ್ರೇಸ್​ ಮತ್ತು ಸ್ಲಿಪ್ ಟ್ರ್ಯಾಕಿಂಗ್‌ನಂತಹ ಹಲವು ಆರೋಗ್ಯ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸ್ಮಾರ್ಟ್ ವಾಚ್‌ನ ಬೆಲೆ 2,399 ರೂ.ಗಳಿಂದ ಪ್ರಾರಂಭವಾಗುತ್ತದೆ.

ಬ್ಲಿಂಕಿಟ್ ಲ್ಯಾಪ್​ಟಾಪ್ಸ್​ ಸರ್ವಿಸ್​ ​: ಬ್ಲಿಂಕಿಟ್‌ನ ಸಿಇಒ ತಮ್ಮ ಅಧಿಕೃತ 'ಎಕ್ಸ್' ಖಾತೆಯಿಂದ ಹೊಸ ಸೇವೆ ಘೋಷಿಸಿದ್ದಾರೆ. ಈಗ ಜನರು ಲ್ಯಾಪ್‌ಟಾಪ್‌ಗಳು, ಮಾನಿಟರ್‌ಗಳು ಮತ್ತು ಪ್ರಿಂಟರ್‌ಗಳಂತಹ ಎಲೆಕ್ಟ್ರಾನಿಕ್ ವಸ್ತುಗಳನ್ನು ಬ್ಲಿಂಕಿಟ್ ಮೂಲಕ ಕೇವಲ 10 ನಿಮಿಷಗಳಲ್ಲಿ ತಮ್ಮ ಮನೆಗಳಿಗೆ ತಲುಪಿಸಲು ಸಾಧ್ಯವಾಗುತ್ತದೆ. ಪೋಸ್ಟ್ ಪ್ರಕಾರ, ಪ್ರಸ್ತುತ ಬ್ಲಿಂಕಿಟ್ ಮೂಲಕ ಗ್ರಾಹಕರು HP ಲ್ಯಾಪ್‌ಟಾಪ್‌ಗಳು, ಲೆನೊವೊ, MSI ಮತ್ತು ಜೀಬ್ರಾನಿಕ್ಸ್ ಮಾನಿಟರ್‌ಗಳು, ಕ್ಯಾನನ್ ಮತ್ತು HP ಪ್ರಿಂಟರ್‌ಗಳು ಮತ್ತು ಇತರ ಹಲವು ವಸ್ತುಗಳನ್ನು ಕೇವಲ 10 ನಿಮಿಷಗಳಲ್ಲಿ ತಮ್ಮ ಮನೆಗೆ ತಲುಪಿಸಲು ಸಾಧ್ಯವಾಗುತ್ತದೆ. ಈ ಹೊಸ ವೈಶಿಷ್ಟ್ಯವನ್ನು ದೆಹಲಿ NCR, ಪುಣೆ, ಮುಂಬೈ, ಬೆಂಗಳೂರು, ಕೋಲ್ಕತ್ತಾ ಮತ್ತು ಲಖನೌಗಳಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ. ಕೆಲವು ದಿನಗಳ ಹಿಂದೆ ಬ್ಲಿಂಕಿಟ್ ಗುರುಗ್ರಾಮದಲ್ಲಿ ಆಂಬ್ಯುಲೆನ್ಸ್ ಸೇವೆಯನ್ನು ಪ್ರಾರಂಭಿಸಿದೆ ಎಂಬುದು ಗಮನಾರ್ಹ.

ಓದಿ: ಕೈಗೆಟುಕುವ ದರ, ಅಡ್ವಾನ್ಸ್ಡ್​ ಫೀಚರ್ಸ್​: ದೇಶಿಯ ಮಾರುಕಟ್ಟೆಯಲ್ಲಿ ಒಂದೇ ಬಾರಿಗೆ ಮೂರು ಕಾರುಗಳು ಲಾಂಚ್ ಮಾಡಿದ ಟಾಟಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.