ETV Bharat / state

ಹಾವೇರಿ: ವಿಶ್ವದಲ್ಲೇ ಬೃಹತ್ ಸ್ಪಟಿಕ ಲಿಂಗ ಪ್ರತಿಷ್ಠಾಪನೆ - WORLD LARGEST CRYSTAL LINGAM

ಹಾವೇರಿಯ ಲಿಂಗದಹಳ್ಳಿ ಗ್ರಾಮದಲ್ಲಿ ವಿಶ್ವದಲ್ಲೇ 9 ಅಡಿ ಎತ್ತರದ ಹಾಗೂ 7 ಟನ್ ತೂಕದ ಬೃಹತ್ ಸ್ಪಟಿಕ ಲಿಂಗ ಪ್ರತಿಷ್ಠಾಪನೆ ಮಾಡಲಾಗಿದೆ.

WORLD LARGEST CRYSTAL LINGAM
ಬೃಹತ್ ಸ್ಪಟಿಕ ಲಿಂಗ ಪ್ರತಿಷ್ಠಾಪನೆ (ETV Bharat)
author img

By ETV Bharat Karnataka Team

Published : Feb 26, 2025, 6:30 PM IST

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ವಿಶ್ವದಲ್ಲೇ ಅತಿ ದೊಡ್ಡ ಸ್ಪಟಿಕ ಲಿಂಗ ಸ್ಥಾಪಿಸುವ ಮೂಲಕ ಇಂದು ಮಹಾಶಿವರಾತ್ರಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ಅಮೆರಿಕದ ಕಡೂಲ್​ನಲ್ಲಿ ಮೂರೂವರೆ ಅಡಿ ಎತ್ತರದ ಸ್ಪಟಿಕ ಲಿಂಗವಿದೆ. ಅದನ್ನು ಹೊರತುಪಡಿಸಿದರೆ ಕರ್ನಾಟಕದ ಹಾವೇರಿಯ ಲಿಂಗದಹಳ್ಳಿ ಮಠದಲ್ಲಿ ಇದೀಗ 9 ಅಡಿ ಎತ್ತರ, 7 ಟನ್ ತೂಕದ ಸ್ಪಟಿಕ ಲಿಂಗವನ್ನು ಪ್ರತಿಷ್ಠಾಪಿಸಿರುವುದು ವಿಶೇಷ.

ಬೃಹತ್ ಸ್ಪಟಿಕ ಲಿಂಗದ ಕುರಿತು ಮಾಹಿತಿ ನೀಡುತ್ತಿರುವುದು (ETV Bharat)

ಕೈಲಾಸ ಪರ್ವತದ ಟಿಬೆಟ್​ನಿಂದ ಸ್ಪಟಿಕ ಲಿಂಗವನ್ನು ತರಲಾಗಿದೆ. ಹಿಮದಲ್ಲಿ ಲಿಂಗದ ರೂಪ ತಾಳಿದ್ದನ್ನು ಕಂಟೇನರ್ ಮೂಲಕ ತಂದು ರಾಜಸ್ತಾನದಲ್ಲಿ ನಿರ್ಮಿಸಲಾಯಿತು. ಬಳಿಕ ಗುಜರಾತ್ ಮಾರ್ಗವಾಗಿ ಲಿಂಗದಹಳ್ಳಿಯ ಮಠಕ್ಕೆ ತಂದು ಪ್ರತಿಷ್ಠಾಪಿಸಲಾಗಿದೆ.

ಇದಕ್ಕೂ ಮೊದಲು ಶ್ರೀಮಠದಲ್ಲಿ ಚಿಕ್ಕ ಮೂಲ ಶಿವಲಿಂಗವಿತ್ತು. ಆದರೆ, ಅದರ ಮೇಲೆ ಕಳ್ಳರ ಕಣ್ಣು ಬಿದ್ದು ಕಳ್ಳತನವಾಗಿತ್ತು. ಅದಾದ ನಂತರ ಮೂರೂವರೆ ಅಡಿ ಎತ್ತರದ ಸ್ಪಟಿಕ ಶಿವಲಿಂಗವನ್ನು ಗುಜರಾತಿನಿಂದ ಮಠಕ್ಕೆ ತರಿಸಲಾಗಿತ್ತು.

WORLD LARGEST CRYSTAL LINGAM
ಬೃಹತ್ ಸ್ಪಟಿಕ ಲಿಂಗ (ETV Bharat)

ಲಿಂಗದಹಳ್ಳಿಯ ಶ್ರೀ ರಂಭಾಪುರಿ ಶಾಖಾಮಠದ ವೀರಭದ್ರೇಶ್ವರ ಶ್ರೀಗಳು ವಿವಿಧ ಪೂಜಾ ವಿಧಿವಿಧಾನಗಳ ಮೂಲಕ ನೂತನ ಸ್ಪಟಿಕ ಲಿಂಗವನ್ನು ಗುಜರಾತ್ ಮಾರ್ಬಲ್ ಮೇಲೆ ಸ್ಥಾಪಿಸಿದರು. ಶಿವರಾತ್ರಿಯಂದು ಸ್ಪಟಿಕ ಲಿಂಗದ ದರ್ಶನ ಮಾಡಿದರೆ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಇದ್ದುದರಿಂದ ಲಿಂಗದಹಳ್ಳಿಗೆ ಸುತ್ತಮುತ್ತಲಿನ ಭಕ್ತರು ಆಗಮಿಸಿ ದರ್ಶನ ಪಡೆದು ಹೋಗುತ್ತಿದ್ದಾರೆ.

''ಗೂಗಲ್​ನಲ್ಲಿ ಹುಡುಕಿದರೆ ಅಮೆರಿಕದ ಕಡೂಲ್​ನಲ್ಲಿ ಮೂರೂವರೆ ಅಡಿ ಎತ್ತರದ ಸ್ಪಟಿಕ ಲಿಂಗ ಸಿಗುತ್ತದೆ. ಅದು 300 ಕೆ.ಜಿ ತೂಕವಿದೆ. ಅದನ್ನು ಬಿಟ್ಟರೆ ಲಿಂಗದಹಳ್ಳಿ ಮಠದಲ್ಲಿ 9 ಅಡಿ ಎತ್ತರ, 7 ಟನ್ ತೂಕದ ಸ್ಪಟಿಕ ಲಿಂಗ ಇದೆ. ಶಿವರಾತ್ರಿಗೂ ಮುನ್ನ ಇದನ್ನು ಸ್ಥಾಪಿಸುವ ಉದ್ದೇಶವಿತ್ತು. ಕಾರಣಾಂತಗಳಿಂದ ಆಗಲಿಲ್ಲ. ಆದರೆ, ಇಂದು ಪ್ರತಿಷ್ಠಾಪನೆ ಆಗಿದ್ದು ನಮ್ಮ ಸುದೈವ. ಮಾನವರ ಕಲ್ಯಾಣ ಆಗಬೇಕು. ಜಗತ್ತು ಕಲ್ಯಾಣ ಆಗಬೇಕು. ಇರುವೆಯೂ ಸೇರಿ 84 ಲಕ್ಷ ಜೀವರಾಶಿಗಳನ್ನು ಪರಮಾತ್ಮ ಸಲುಹಬೇಕು. ಕಲ್ಯಾಣ ಕಾರ್ಯಗಳ ಕೆಲಸ ಮಾಡಬೇಕು. ಸಮಾಜದಲ್ಲಿ ಅಜ್ಞಾನ ಹೋಗಿ ಸುಜ್ಞಾನ ನೆಲೆಸಬೇಕು. ಮನುಕುಲದ ಕಷ್ಟ-ನಷ್ಟಗಳು ನಿವಾರಣೆಯಾಗಬೇಕು ಎಂಬ ಉದ್ದೇಶದಿಂದ ಸ್ಪಟಿಕ ಲಿಂಗ ಪ್ರತಿಷ್ಠಾಪನೆ ಮಾಡಲಾಗಿದೆ'' ಎಂದು ಲಿಂಗದಹಳ್ಳಿ ಮಠದ ವೀರಭದ್ರೇಶ್ವರ ಸ್ವಾಮೀಜಿ ಹೇಳಿದರು.

WORLD LARGEST CRYSTAL LINGAM
ಲಿಂಗದಹಳ್ಳಿ ಗ್ರಾಮದ ಮಠ (ETV Bharat)

''ಇಲ್ಲಿನ ಬೃಹತ್ ಸ್ಪಟಿಕ ಲಿಂಗ ಕಾಣಲೆಂದೇ ದೂರದೂರಿಂದ ಬಹಳಷ್ಟು ಭಕ್ತರು ಲಿಂಗದಹಳ್ಳಿ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಇದಕ್ಕೂ ಮುನ್ನ ಏಷ್ಯಾದಲ್ಲೇ ದೊಡ್ಡದಾದ ಸ್ಪಟಿಕ ಲಿಂಗ ಸ್ಥಾಪಿಸಲಾಗಿತ್ತು. ಆದರೆ, ಸ್ವಾಮೀಜಿ ಬೃಹತ್ ಸ್ಪಟಿಕ ಲಿಂಗ ಪ್ರತಿಷ್ಠಾಪನೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರಿಂದ ಅದಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ಸಹಕರಿಸಿದರು. ಇದೀಗ ವಿಶ್ವದಲ್ಲಿಯೇ ಬೃಹತ್ ಸ್ಪಟಿಕ ಲಿಂಗ ಪ್ರತಿಷ್ಠಾಪನೆ ಮಾಡಲಾಗಿದೆ. ಟಿಬೆಟ್​ನಿಂದ ಇಲ್ಲಿಗೆ ತರಲು ಹಾಗೂ ಲಿಂಗದ ಖರ್ಚೆಲ್ಲವೂ ಸೇರಿ ಅಂದಾಜು 3 ಕೋಟಿ ರೂಪಾಯಿ ಆಗಿರಬಹುದು" ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಎಲ್ಲಿದೆ ಲಿಂಗದಹಳ್ಳಿ?: ಲಿಂಗದಹಳ್ಳಿ ಗ್ರಾಮ ಹಾವೇರಿ‌ ಜಿಲ್ಲಾ ಕೇಂದ್ರದಿಂದ 51 ಕಿ.ಮೀ ದೂರವಿದೆ. ರಾಣೇಬೆನ್ನೂರು ತಾಲೂಕು ಕೇಂದ್ರದಿಂದ 15 ಕಿ.ಮೀ ದೂರವಿದೆ.

ಇದನ್ನೂ ಓದಿ: ರಾಜ್ಯಾದ್ಯಂತ ಶಿವರಾತ್ರಿ ಸಂಭ್ರಮ: ವಿವಿಧ ಶಿವಾಲಯಗಳಲ್ಲಿ ವಿಶೇಷ ಪೂಜೆ - MAHASHIVRATRI 2025

ETV Bharat Logo

Copyright © 2025 Ushodaya Enterprises Pvt. Ltd., All Rights Reserved.