ETV Bharat / technology

ಈ ಗ್ರಾಹಕರಿಗೆ ಖುಷಿ ಸುದ್ದಿ, ಮೊಬೈಲ್​ ರೀಚಾರ್ಜ್​ ಜೊತೆ ಜಿಯೋಹಾಟ್‌ಸ್ಟಾರ್ ಫ್ರೀ - JIOHOTSTAR FREE ACCESS MOBILE PLANS

JioHotstar Free Access Mobile Plans: ಜಿಯೋ ಮತ್ತು ವೋಡಾಫೋನ್​ ಐಡಿಯಾ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ನೀವು ಈ ರೀಚಾರ್ಜ್‌ಗಳೊಂದಿಗೆ 'ಜಿಯೋಹಾಟ್‌ಸ್ಟಾರ್' ಸಬ್​ಸ್ಕ್ರೀಪ್ಶನ್​ ಉಚಿತವಾಗಿ ಪಡೆಯಲಿದ್ದೀರಿ.

MOBILE PLANS WITH JIOHOTSTAR ACCESS  VODAFONE IDEA JIOHOTSTAR PLANS  RELIANCE JIO JIOHOTSTAR PLANS  JIOHOTSTAR SUBSCRIPTION
ಜಿಯೋಹಾಟ್‌ಸ್ಟಾರ್ (Photo Credit: JioHotstar)
author img

By ETV Bharat Tech Team

Published : Feb 26, 2025, 8:25 PM IST

JioHotstar Free Access Mobile Plans: ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಜಿಯೋಸಿನಿಮಾ ವಿಲೀನದೊಂದಿಗೆ 'ಜಿಯೋಹಾಟ್‌ಸ್ಟಾರ್' ಎಂಬ ಹೊಸ ಒಟಿಟಿ ಪ್ಲಾಟ್‌ಫಾರ್ಮ್ ಇತ್ತೀಚೆಗೆ ಲಾಂಚ್​ ಆಗಿದೆ. ಈ ಹೊಸ ಪ್ಲಾಟ್‌ಫಾರ್ಮ್‌ಗೆ ಸಬ್​ಸ್ಕ್ರಿಪ್ಶನ್​ ಪ್ಲಾನ್​ಗಳು ಶುರುವಾಗಿವೆ. ಆದರೂ ಈ ಎರಡು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಪ್ರತ್ಯೇಕವಾಗಿ ಅಸ್ತಿತ್ವದಲ್ಲಿರುವ ಗ್ರಾಹಕರು ತಮ್ಮ ಯೋಜನೆಯ ಅಂತ್ಯದವರೆಗೆ ತಮ್ಮ ಚಂದಾದಾರಿಕೆಗಳನ್ನು ಮುಂದುವರಿಸುತ್ತಾರೆ. ಅದಾದ ನಂತರ, ಹೊಸದಾಗಿ ಪ್ರಾರಂಭಿಸಲಾದ 'JioHotstar' ಸಬ್​ಸ್ಕ್ರೀಪ್ಶನ್​ ಪ್ಲಾನ್​ ಅನ್ನು ಇದಕ್ಕಾಗಿ ತೆಗೆದುಕೊಳ್ಳಬೇಕಾಗುತ್ತದೆ.

ಹೀಗಿದ್ದರೂ ಜಿಯೋ ಮತ್ತು ವೊಡಾಫೋನ್ ಐಡಿಯಾ ತಮ್ಮ ಮೊಬೈಲ್ ಯೋಜನೆಗಳೊಂದಿಗೆ ಉಚಿತ 'ಜಿಯೋಹಾಟ್‌ಸ್ಟಾರ್' ಎಂಟ್ರಿಯನ್ನು ಸಹ ನೀಡುತ್ತಿವೆ. ನೀವು ಮೊಬೈಲ್ ರೀಚಾರ್ಜ್‌ಗಳೊಂದಿಗೆ 'JioHotstar' ಚಂದಾದಾರಿಕೆಯನ್ನು ಸಹ ಪಡೆಯಬಹುದು. ಇದರಲ್ಲಿ ಯಾವ ಯೋಜನೆಗಳು ಉಚಿತ 'ಜಿಯೋಹಾಟ್‌ಸ್ಟಾರ್' ಪ್ರವೇಶವನ್ನು ನೀಡುತ್ತವೆ ಎಂಬುದನ್ನು ನೋಡೋಣ.

ರಿಲಯನ್ಸ್ ಜಿಯೋ ಹಾಟ್‌ಸ್ಟಾರ್ ಯೋಜನೆಗಳು: ಜಿಯೋ ಈಗಾಗಲೇ ಉಚಿತ 'ಜಿಯೋಸಿನಿಮಾ' ಪ್ರವೇಶವನ್ನು ನೀಡುವ ಹಲವಾರು ಯೋಜನೆಗಳನ್ನು ನೀಡುತ್ತದೆ. ಈ ಸಂದರ್ಭದಲ್ಲಿ ಈ ನೆಟ್‌ವರ್ಕ್ ಆಪರೇಟರ್ 'JioHotstar' ಚಂದಾದಾರಿಕೆಯೊಂದಿಗೆ ಹಲವು ಯೋಜನೆಗಳನ್ನು ಹೊಂದಿರಬಹುದು. ಆದರೂ ಪ್ರಸ್ತುತ ಈ ಹೊಸ ಪ್ಲಾಟ್‌ಫಾರ್ಮ್‌ನಲ್ಲಿ ಕಂಟೆಂಟ್​ ಅನ್ನು ವೀಕ್ಷಿಸಲು ಜಿಯೋ ನೆಟ್‌ವರ್ಕ್‌ನಲ್ಲಿ ಕೇವಲ ಎರಡು ಯೋಜನೆಗಳಿವೆ.

ಇವೆರಡರಲ್ಲಿ ಅಗ್ಗವಾದದ್ದು ಹೊಸದಾಗಿ ಬಿಡುಗಡೆಯಾದ 195 ರೂ ಕ್ರಿಕೆಟ್ ಡೇಟಾ ಪ್ಯಾಕ್. ಇದು 3 ತಿಂಗಳ ಉಚಿತ 'JioHotstar' ಸಬ್​ಸ್ಕ್ರೀಪ್ಶನ್​ ನೀಡುತ್ತದೆ. ಈ ಡೇಟಾ-ಓನ್ಲಿ ಆಡ್-ಆನ್ ಯೋಜನೆಯು 15GB 4G/5G ಡೇಟಾದೊಂದಿಗೆ ಬರುತ್ತದೆ. ಇದು ಜಾಹೀರಾತು ಬೆಂಬಲಿತ 'JioHotstar' ಮೊಬೈಲ್ ಯೋಜನೆಗೆ ಉಚಿತ ಎಂಟ್ರಿ ಅನ್ನು ಒದಗಿಸುತ್ತದೆ. ಇದು ಬಳಕೆದಾರರಿಗೆ ಸಿಂಗಲ್​ ಡಿವೈಸ್​ಗೆ ಮಾತ್ರ HD ರೆಸಲ್ಯೂಶನ್‌ನಲ್ಲಿ ಕಂಟೆಂಟ್​ ಅನ್ನು ಸ್ಟ್ರೀಮ್ ಮಾಡಲು ಅನುಮತಿಸುತ್ತದೆ.

ಈ ಪಟ್ಟಿಯಲ್ಲಿ 949 ರೂ.ಗಳ ಯೋಜನೆಯನ್ನು ಈಚೆಗೆ ಅಪ್​ಡೇಟ್​ ಮಾಡಿದೆ. ಪ್ರಿಪೇಯ್ಡ್ ಯೋಜನೆಯು 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಪ್ರತಿದಿನ 2GBಯ 4G ಡೇಟಾ, ಅನ್​ಲಿಮಿಟೆಡ್​ ಕಾಲ್ಸ್​, ದಿನಕ್ಕೆ 100 ಮೆಸೇಜ್​ ಮತ್ತು ಅನ್​ಲಿಮಿಟೆಡ್​ 5G ಡೇಟಾವನ್ನು ನೀಡುತ್ತದೆ.

ನೀವು ಈಗಾಗಲೇ ಅನ್​ಲಿಮಿಟೆಡ್​ ಕಾಲ್ಸ್​ ಮತ್ತು ದೈನಂದಿನ ಡೇಟಾವನ್ನು ನೀಡುವ ಜಿಯೋ ಯೋಜನೆಗೆ ಚಂದಾದಾರಿಕೆ ಹೊಂದಿದ್ದರೆ ನೀವು 'ಜಿಯೋಹಾಟ್‌ಸ್ಟಾರ್'ಗೆ ಉಚಿತ ಪ್ರವೇಶವನ್ನು ಪಡೆಯಲು 195 ರೂ ಪ್ಯಾಕ್ ಅತ್ಯುತ್ತಮ ಆಯ್ಕೆಯಾಗಿದೆ. ಆದರೆ ನೀವು ನಿಮ್ಮ ಮೊಬೈಲ್ ಅನ್ನು ರೀಚಾರ್ಜ್ ಮಾಡಲು ಬಯಸಿದರೆ ದುಬಾರಿ ಪ್ಲಾನ್​ ಅನ್ನು ಆಯ್ಕೆ ಮಾಡುವುದು ಉತ್ತಮ.

ವೊಡಾಫೋನ್ ಐಡಿಯಾ ಜಿಯೋ ಹಾಟ್‌ಸ್ಟಾರ್ ಯೋಜನೆಗಳು: ವೊಡಾಫೋನ್ ಐಡಿಯಾ ಕೆಲವು ಲಾಭದಾಯಕ ಪ್ರಿಪೇಯ್ಡ್ ಯೋಜನೆಗಳನ್ನು ಸಹ ನೀಡುತ್ತದೆ. ಇವು ಉಚಿತ 'ಜಿಯೋಹಾಟ್‌ಸ್ಟಾರ್' ಸದಸ್ಯತ್ವವನ್ನು ನೀಡುತ್ತವೆ. ನೀವು ಈಗಾಗಲೇ ಸಕ್ರಿಯ ಬೇಸ್ ಪ್ಲಾನ್ ಹೊಂದಿದ್ದರೆ, 4GB ಮತ್ತು 30 ದಿನಗಳ ಮಾನ್ಯತೆಯೊಂದಿಗೆ ಬರುವ ರೂ. 151 ಆಡ್-ಆನ್ ಪ್ಲಾನ್ ಅನ್ನು ಪರಿಶೀಲಿಸಿ. ಇದರೊಂದಿಗೆ ನೀವು ಯಾವುದೇ ಸೇವಾ ಮಾನ್ಯತೆಯನ್ನು ಪಡೆಯದಿದ್ದರೂ ಇದು 3 ತಿಂಗಳ 'ಜಿಯೋಹಾಟ್‌ಸ್ಟಾರ್' ಚಂದಾದಾರಿಕೆಯನ್ನು ನೀಡುತ್ತದೆ.

ನೀವು ಸರಳವಾದ ಪ್ರಿಪೇಯ್ಡ್ ಯೋಜನೆಯನ್ನು ಹುಡುಕುತ್ತಿದ್ದರೆ 469 ರೂ ಯೋಜನೆಯು ನಿಮ್ಮ ಅಗತ್ಯಗಳನ್ನು ಪೂರೈಸಬಹುದು. ಈ ಯೋಜನೆ 28 ದಿನಗಳ ಮಾನ್ಯತೆಯೊಂದಿಗೆ ಅನ್​ಲಿಮಿಟೆಡ್​ ಕಾಲ್ಸ್​ ಮತ್ತು ದಿನಕ್ಕೆ 100 ಮೆಸೇಜ್​ಗಳನ್ನು ನೀಡುತ್ತದೆ. ಹೆಚ್ಚುವರಿಯಾಗಿ ಈ ಯೋಜನೆಯೊಂದಿಗೆ ನೀವು ಪ್ರತಿದಿನ 12 AMನಿಂದ 12 PMರವರೆಗೆ ಅನ್​ಲಿಮಿಟೆಡ್​ ಡೇಟಾ ಮತ್ತು 2.5 ಜಿಬಿ ಮೊಬೈಲ್ ಡೇಟಾವನ್ನು ಪಡೆಯಲಿದ್ದೀರಿ. ಮೇಲೆ ತಿಳಿಸಿದ ಆಡ್-ಆನ್ ಯೋಜನೆಯಂತೆಯೇ ನೀವು ಇದರೊಂದಿಗೆ 3 ತಿಂಗಳ ಉಚಿತ 'ಜಿಯೋಹಾಟ್‌ಸ್ಟಾರ್' ಸದಸ್ಯತ್ವವನ್ನು ಸಹ ಪಡೆಯುತ್ತೀರಿ.

ನೀವು 3 ತಿಂಗಳ ಉಚಿತ 'JioHotstar' ಪ್ರವೇಶದೊಂದಿಗೆ ತ್ರೈಮಾಸಿಕ ಪ್ರಿಪೇಯ್ಡ್ ಯೋಜನೆಯನ್ನು ಹುಡುಕುತ್ತಿದ್ರೆ, ನಿಮಗೆ 994 ರೂ ಪ್ಯಾಕ್ ಇಷ್ಟವಾಗಬಹುದು. ಇದು 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯು ಪ್ರತಿದಿನ ಅನ್​ಲಿಮಿಟೆಡ್​ ಕಾಲ್ಸ್​, ದಿನಕ್ಕೆ 100 ಮೆಸೇಜ್​, ದಿನಕ್ಕೆ 2GB ಡೇಟಾ ಮತ್ತು ಪ್ರತಿದಿನ 12 AM ಇಂದ 12 PM ರವರೆಗೆ ಅನ್​ಲಿಮಿಟೆಡ್​ ಮೊಬೈಲ್ ಡೇಟಾವನ್ನು ನೀಡುತ್ತದೆ.

ವೊಡಾಫೋನ್ ಐಡಿಯಾದ ಅತ್ಯಂತ ದುಬಾರಿ ಪ್ರಿಪೇಯ್ಡ್ ಪ್ಲಾನ್ ಇದಾಗಿದ್ದು, ಉಚಿತ 'ಜಿಯೋಹಾಟ್‌ಸ್ಟಾರ್' ಅನ್ನು ನೀಡುತ್ತದೆ. ಇದರ ಬೆಲೆ ರೂ. 3,699 ಆಗಿದೆ. ಈ ಯೋಜನೆಯು ಅನ್​ಲಿಮಿಟೆಡ್​ ಕಾಲ್ಸ್​, ದಿನಕ್ಕೆ 100 ಮೆಸೇಜ್​, ದಿನಕ್ಕೆ 2GB ಮೊಬೈಲ್ ಡೇಟಾ ಮತ್ತು ಒಂದು ವರ್ಷದ 'JioHotstar' ಸದಸ್ಯತ್ವದಂತಹ ಪ್ರಮಾಣಿತ ಪ್ರಯೋಜನಗಳನ್ನು ನೀಡುತ್ತದೆ. ದೀರ್ಘಾವಧಿಯಲ್ಲಿ ಹಣ ಉಳಿಸಲು ಬಯಸುವವರಿಗೆ ಈ ಯೋಜನೆ ಸೂಕ್ತವಾಗಿದೆ.

ಗಮನಿಸಿ: ಏರ್‌ಟೆಲ್ ಮತ್ತು ಬಿಎಸ್‌ಎನ್‌ಎಲ್ 'ಜಿಯೋಹಾಟ್‌ಸ್ಟಾರ್' ಸದಸ್ಯತ್ವದೊಂದಿಗೆ ತಮ್ಮ ಪ್ರಿಪೇಯ್ಡ್ ಯೋಜನೆಗಳನ್ನು ಘೋಷಿಸಿವೆ ಎಂದು ವರದಿಯಾಗಿದೆ. ಆದರೆ ಈ ನೆಟ್‌ವರ್ಕ್ ಆಪರೇಟರ್‌ಗಳು ತಮ್ಮ ವೆಬ್‌ಸೈಟ್‌ಗಳಲ್ಲಿ ಈ ವಿವರಗಳನ್ನು ಇನ್ನೂ ಅಪ್​ಡೇಟ್​ ಮಾಡಿಲ್ಲ. ಮುಂದಿನ ದಿನಗಳಲ್ಲಿ ವಿವರ ಲಭ್ಯವಾಗಲಿದೆ.

ಇದನ್ನೂ ಓದಿ: ಆಫ್-ರೋಡ್ ರೈಡರ್ಸ್​ಗೆ ಸಿಹಿ ಸುದ್ದಿ: ದೇಶಿ ಮಾರುಕಟ್ಟೆಗೆ ಬಂತು 22 ಲಕ್ಷ ರೂಪಾಯಿ ಬೈಕ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.