Murugan Chutney Recipe : ಮನೆ ಹಾಗೂ ಹೋಟೆಲ್ಗಳಲ್ಲಿ ಸಾಮಾನ್ಯವಾಗಿ ಇಡ್ಲಿ, ದೋಸೆ, ಬಜ್ಜಿ, ವಡೆ, ಉಪ್ಪಿಟ್ಟು ಸೇರಿದಂತೆ ವಿವಿಧ ಉಪಹಾರಗಳಲ್ಲಿ ಶೇಂಗಾ ಇಲ್ಲವೇ ಕೊಬ್ಬರಿ ಚಟ್ನಿಯನ್ನು ಸೇವಿಸುತ್ತೇವೆ. ಇನ್ನೂ ಕೆಲವರು ಇಡ್ಲಿಗಳಿಗಾಗಿ ವಿಶೇಷವಾಗಿರುವಂತಹ ಸಾಂಬಾರ್ ಸಿದ್ಧಪಡಿಸುತ್ತಾರೆ. ಪ್ರತಿದಿನ ಒಂದೇ ರೀತಿಯ ಚಟ್ನಿ ಮಾಡುವ ಬದಲು ಈ ಬಾರಿ ಚೆನ್ನೈನ ಪ್ರಸಿದ್ಧ ಮುರುಗನ್ ಚಟ್ನಿಯ ಟ್ರೈ ಮಾಡಿ ನೋಡಿ. ರುಚಿಕರ ಮುರುಗನ್ ಚಟ್ನಿಯನ್ನು ಇಡ್ಲಿ, ದೋಸೆ ಮತ್ತು ಉಪ್ಪಿಟ್ಟಿನ ಜೊತೆಗೆ ಹೊಂದಿಕಯಾಗುತ್ತದೆ. ಈ ಚಟ್ನಿ ಮಾಡುವುದು ಕೂಡ ತುಂಬಾ ಸುಲಭ. ಮನೆಯಲ್ಲಿ ಲಭ್ಯವಿರುವ ಪದಾರ್ಥಗಳಿಂದ ಮುರುಗನ್ ಚಟ್ನಿಯನ್ನು ತಯಾರಿಸಬಹುದು. ಮುರುಗನ್ ಚಟ್ನಿಯನ್ನು ಸರಳ ರೀತಿಯಲ್ಲಿ ಹೇಗೆ ತಯಾರಿಸಬೇಕು ಎಂಬುದನ್ನು ತಿಳಿಯೋಣ.
ಮುರುಗನ್ ಚಟ್ನಿಗೆ ಬೇಕಾಗಿರುವ ಪದಾರ್ಥಗಳೇನು ?
- ಹಣ್ಣಾಗಿರುವ ಟೊಮೆಟೊ - 4
- ಎಣ್ಣೆ - 2 ಚಮಚ
- ಸಾಸಿವೆ - 1 ಟೀಸ್ಪೂನ್
- ಸಿಪ್ಪೆ ಸುಲಿದ ಬಾದಾಮಿ - ¼ ಕಪ್
- ಒಣಮೆಣಸಿನಕಾಯಿ - 6
- ಬೆಳ್ಳುಳ್ಳಿ ಎಸಳು - 5
- ತುರಿದ ಬೆಲ್ಲ - ಅರ್ಧ ಟೀಸ್ಪೂನ್
- ಇಂಗು - ಒಂದು ಚಿಟಿಕೆ
- ಉಪ್ಪು - ರುಚಿಗೆ ತಕ್ಕಷ್ಟು
ಒಗ್ಗರಣೆಗಾಗಿ ಬೇಕಾಗುವ ಸಾಮಗ್ರಿಗಳು :
- ಎಣ್ಣೆ - 1 ಟೀಸ್ಪೂನ್
- ಸಾಸಿವೆ - 1 ಟೀಸ್ಪೂನ್
- ಕರಿಬೇವು - ಸ್ವಲ್ಪ
ಮುರುಗನ್ ಚಟ್ನಿ ತಯಾರಿಸುವ ವಿಧಾನ :
- ಮೊದಲು ಹಣ್ಣಾಗಿರುವ ಟೊಮೆಟೊಗಳನ್ನು ಮಧ್ಯಮ ಗಾತ್ರದ ಪೀಸ್ಗಳಾಗಿ ಕತ್ತರಿಸಿ ಪಕ್ಕಕ್ಕೆ ಇಡಿ.
- ಬೆಳ್ಳುಳ್ಳಿ ಎಸಳುಗಳನ್ನು ಸಿಪ್ಪೆ ತೆಗೆದು ಪಕ್ಕಕ್ಕೆ ಇಡಿ.
- ಈಗ ಒಲೆಯ ಮೇಲೆ ಪಾತ್ರೆ ಇಟ್ಟು, ಅದರೊಳಗೆ ಎಣ್ಣೆ ಹಾಕಿ ಬಿಸಿ ಮಾಡಬೇಕಾಗುತ್ತದೆ. ನಂತರ ಸಾಸಿವೆ ಹಾಗೂ ಸಿಪ್ಪೆ ಸುಲಿದ ಬಾದಾಮಿ ಹಾಕಿ ಹುರಿಯಿರಿ. ಸರಿಯಾಗಿ ಬೇಯಿಸಲು ಕಡಿಮೆ ಉರಿಯನ್ನು ಹೊಂದಿಸಿ. ಈಗ ಒಣಗಿದ ಮೆಣಸಿನಕಾಯಿ ಹಾಗೂ ಬೆಳ್ಳುಳ್ಳಿ ಎಸಳುಗಳನ್ನು ಸೇರಿಸಿ ಹುರಿಯಿರಿ.
- ಬಳಿಕ ಟೊಮೆಟೊ ಹೋಳುಗಳು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
- ಟೊಮೆಟೊ ಬೇಯುತ್ತಿರುವಾಗ ತುರಿದ ಬೆಲ್ಲ ಮತ್ತು ಇಂಗು ಹಾಕಿ ಮಿಶ್ರಣ ಮಾಡಿ.
- ಟೊಮೆಟೊ ಸಂಪೂರ್ಣವಾಗಿ ಬೆಂದ ಬಳಿಕ ಒಲೆ ಆಫ್ ಮಾಡಿ. ಈ ಮಿಶ್ರಣ ಸಂಪೂರ್ಣವಾಗಿ ತಣ್ಣಗಾದ ನಂತರ ಅದನ್ನು ಮಿಕ್ಸಿಂಗ್ ಬೌಲ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
- ಈ ಚಟ್ನಿಯನ್ನು ಒಂದು ಮಿಕ್ಸಿಂಗ್ ಬೌಲ್‌ನಲ್ಲಿ ತೆಗೆದುಕೊಂಡು ಅದಕ್ಕೆ ಸಾಕಷ್ಟು ನೀರು ಸೇರಿಸಬೇಕಾಗುತ್ತದೆ. ಈ ಹಂತದಲ್ಲಿ ಚಟ್ನಿಯಲ್ಲಿರುವ ಉಪ್ಪಿನ ರುಚಿ ನೋಡಿ.
- ಇದೀಗ ಒಗ್ಗರಣೆಗಾಗಿ ಮತ್ತೊಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಸೇರಿಸಿ. ಸ್ವಲ್ಪ ಬಿಸಿಯಾದ ನಂತರ ಸಾಸಿವೆ ಮತ್ತು ಕರಿಬೇವು ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ.
- ನಂತರ ಚಟ್ನಿಗೆ ಸಿದ್ಧವಾದ ಒಗ್ಗರಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕಾಗುತ್ತದೆ.
- ಇದೀಗ ರುಚಿಕರವಾದ ಚೆನ್ನೈನ ಫೇಮಸ್ ಮುರುಗನ್ ಚಟ್ನಿ ಸಿದ್ಧವಾಗಿದೆ.
- ಈ ಮುರುಗನ್ ಚಟ್ನಿ ನಿಮಗೆ ಇಷ್ಟವಾದರೆ ಮನೆಯಲ್ಲಿಯೇ ಪ್ರಯತ್ನಿಸಿ ನೋಡಿ.