ETV Bharat / state

ದಾವಣಗೆರೆಯಲ್ಲಿ ಸ್ವಚ್ಛ ಗೃಹ ಕಲಿಕಾ ಕೇಂದ್ರ: ಕಸವನ್ನು ಇಂಧನವಾಗಿ ಪರಿವರ್ತಿಸಲು ಪ್ರಾತ್ಯಕ್ಷಿಕೆ ಮೂಲಕ ತರಬೇತಿ - SWACHAGRAHA KALIKA KENDRA

ಮನೆಗಳಲ್ಲಿ ಉತ್ಪತ್ತಿಯಾಗುವ ಹಸಿ ಕಸ, ಒಣ ಕಸವನ್ನು ಗೊಬ್ಬರ ಮತ್ತು ಜೈವಿಕ ಇಂಧನವಾಗಿ ಪರಿವರ್ತಿಸಲು ಹಾಗು ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲು ಸ್ವಚ್ಛ ಗೃಹ ಕಲಿಕಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದು ಜನವರಿಯಲ್ಲಿ ಆರಂಭ ಆಗಲಿದೆ.

DAVANAGERE  CONVERTING GARBAGE INTO FUEL  SWACHH BHARAT MISSION  ಸ್ವಚ್ಛ ಗೃಹ ಕಲಿಕಾ ಕೇಂದ್ರ
ದಾವಣಗೆರೆಯಲ್ಲಿ ಸ್ವಚ್ಛ ಗೃಹ ಕಲಿಕಾ ಕೇಂದ್ರ: ಕಸವನ್ನು ಇಂಧನವಾಗಿ ಪರಿವರ್ತಿಸಲು ಪ್ರಾತ್ಯಕ್ಷಿಕೆ ಮೂಲಕ ತರಬೇತಿ (ETV Bharat)
author img

By ETV Bharat Karnataka Team

Published : 11 hours ago

Updated : 11 hours ago

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಗೆ ಕಸದ್ದೇ ಬಹುದೊಡ್ಡ ಸಮಸ್ಯೆ. ಈ ಸಮಸ್ಯೆ ಹೋಗಲಾಡಿಸಲು ಪಾಲಿಕೆಯ ಅಧಿಕಾರಿಗಳು ಇದೀಗ ದಾರಿಯೊಂದನ್ನು ಕಂಡುಕೊಂಡಿದ್ದಾರೆ‌.

ಹೌದು, ನಗರದ ಜೆ.ಎಚ್‌. ಪಟೇಲ್ ಬಡಾವಣೆಯ ಉದ್ಯಾನದಲ್ಲಿ ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ನೂತನ "ಸ್ವಚ್ಛ ಗೃಹ ಕಲಿಕಾ ಕೇಂದ್ರ" ನಿರ್ಮಾಣ ಆಗಿದೆ. ಒಟ್ಟು 05 ಎಕರೆ ವಿಸ್ತೀರ್ಣದ ಉದ್ಯಾನದಲ್ಲಿ 01 ಎಕರೆಯಷ್ಟು ಪ್ರದೇಶದಲ್ಲಿ 1.06 ಕೋಟಿ ವೆಚ್ಚದಲ್ಲಿ ಈ ಕಲಿಕಾ ಕೇಂದ್ರ ನಿರ್ಮಾಣವಾಗಿದೆ.

ದಾವಣಗೆರೆಯಲ್ಲಿ ಸ್ವಚ್ಛ ಗೃಹ ಕಲಿಕಾ ಕೇಂದ್ರ (ETV Bharat)

ರಾಜ್ಯದ ಮೊದಲ ಕೇಂದ್ರ ಬೆಂಗಳೂರಿನ ಎಚ್‌.ಎಸ್‌.ಆರ್ ಬಡಾವಣೆ ಹಾಗೂ ತೆಲಂಗಾಣದಲ್ಲಿ ಎರಡನೆಯ ಕೇಂದ್ರ ನಿರ್ಮಾಣ ಮಾಡಲಾಗಿದ್ದು. ದಾವಣಗೆರೆಯಲ್ಲಿ ಮೂರನೇ ಕೇಂದ್ರವನ್ನು ನಿರ್ಮಿಸಲಾಗಿದೆ. ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 42 ವಾರ್ಡ್​ಗಳ ಪೈಕಿ 170 ಟನ್​ ಕಸ ಸಂಗ್ರಹವಾಗುತ್ತಿದೆ.

DAVANAGERE  CONVERTING GARBAGE INTO FUEL  SWACHH BHARAT MISSION  ಸ್ವಚ್ಛ ಗೃಹ ಕಲಿಕಾ ಕೇಂದ್ರ
ದಾವಣಗೆರೆಯಲ್ಲಿ ಸ್ವಚ್ಛ ಗೃಹ ಕಲಿಕಾ ಕೇಂದ್ರ (ETV Bharat)

ಇದನ್ನು ವಿಲೇವಾರಿ ಮಾಡುವ ಬದಲು ಜೈವಿಕ ಇಂಧನ, ಗೊಬ್ಬರ ಸಿದ್ಧಪಡಿಸಲು ಉಪಯೋಗಿಸಿಕೊಳ್ಳುವ ಮೂಲಕ ಜನರಿಗೆ ತರಬೇತಿ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ. ಅಲ್ಲದೇ ಮನೆಯಲ್ಲಿ, ಹೋಟೆಲ್​, ಅಪಾರ್ಟ್​ಮೆಂಟ್​​ ಹೀಗೆ ನಾನಾ ಕಡೆ ಉತ್ಪತ್ತಿಯಾಗುವ ಕಸವನ್ನು ಗೊಬ್ಬರವಾಗಿ ಪರಿವರ್ತಿಸಲು ಯಂತ್ರಗಳನ್ನು ಅಳವಡಿಸಲಾಗಿದೆ. ಎರೆಹುಳು ಗೊಬ್ಬರ, ಒಣ ಎಲೆ ಗೊಬ್ಬರ, ಜೈವಿಕ ಇಂಧನ ಉತ್ಪತ್ತಿ ಘಟಕಗಳು ಕೂಡ ಇಲ್ಲಿವೆ. ಅಲ್ಲದೆ ಮಳೆ ನೀರು ಸಂಗ್ರಹ ಹಾಗೂ ಸೌರ ವಿದ್ಯುತ್ ಘಟಕವನ್ನು ಅಳವಡಿಸಲಾಗಿದೆ.

ಸ್ವಚ್ಛ ಗೃಹ ಕಲಿಕಾ ಕೇಂದ್ರ (ETV Bharat)

ಈ ಕೇಂದ್ರದಲ್ಲಿ ಏನೆಲ್ಲ ತರಬೇತಿ ಕೊಡಲಾಗುತ್ತದೆ: ಹಸಿಕಸ ಹಾಗೂ ಒಣಕಸವನ್ನು ಮೂಲದಲ್ಲಿಯೇ ವೈಜ್ಞಾನಿಕವಾಗಿ ನಿರ್ವಹಿಸುವ ಬಗ್ಗೆ ಈ ಕಲಿಕಾ ಕೇಂದ್ರದಲ್ಲಿ ಪ್ರಾತ್ಯಕ್ಷಿಕೆ ತೋರಿಸಲಾಗುತ್ತದೆ. ಅದೇ ಕಸವನ್ನು ಗೊಬ್ಬರ, ಜೈವಿಕ ಇಂಧನವಾಗಿ ಪರಿವರ್ತನೆ ಮಾಡುವ ಬಗ್ಗೆ ಮಕ್ಕಳಿಗೆ, ಜನಸಾಮಾನ್ಯರಿಗೆ, ಸಂಘ ಸಂಸ್ಥೆಗಳಿಗೆ ತರಬೇತಿ ಕೊಡಲಾಗುತ್ತದೆ.

ದಾವಣಗೆರೆಯಲ್ಲಿ ಸ್ವಚ್ಛ ಗೃಹ ಕಲಿಕಾ ಕೇಂದ್ರ: ಜನವರಿಯಲ್ಲಿ ಉದ್ಘಾಟನೆ (ETV Bharat)

ಈ ತರಬೇತಿ ನೀಡಲು ಪರಿಸರ ಸ್ನೇಹಿ ಸಭಾಂಗಣವನ್ನೂ ಸಿದ್ಧಪಡಿಸಲಾಗಿದೆ. ತರಬೇತಿ ಪಡೆದ ಆಸಕ್ತರು ಮನೆಗೆ ಸೂಕ್ತವಾದ ಯಂತ್ರೋಪಕರಣವನ್ನು ಆಯ್ಕೆ ಮಾಡಿಕೊಳ್ಳಬಹುದು. ಯಂತ್ರೋಪಕರಣ ಪೂರೈಕೆದಾರರ ಮಾಹಿತಿ ಕೂಡ ಇಲ್ಲಿ ಲಭ್ಯವಾಗಲಿದೆ.

"ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ ಅರಿವು ಮೂಡಿಸುವ ಸ್ವಚ್ಛ ಕಲಿಕಾ ಘಟಕ ಆರಂಭಿಸಲಾಗುತ್ತಿದೆ. ವಿವಿಧ ತ್ಯಾಜ್ಯಗಳಿಂದ ಗೊಬ್ಬರ ತಯಾರು ಮಾಡುವ ಪ್ರಾತ್ಯಕ್ಷಿಕೆ ಮಾಡಲಾಗುತ್ತದೆ. ಇದು ತರಬೇತಿ ರೀತಿ ಕಾರ್ಯನಿರ್ವಹಿಸುತ್ತದೆ. ಬೆಂಗಳೂರಿನ ಹೆಚ್ಎಸ್ಆರ್​ ಲೇಔಟ್ ಅಲ್ಲಿ ಕಲಿಕಾ ಕೇಂದ್ರ ಬಿಟ್ಟರೆ ದಾವಣಗೆರೆಯಲ್ಲಿ ಆರಂಭವಾಗಿದೆ. ಉತ್ಪಾದನೆ ಆದ ತ್ಯಾಜ್ಯ ಜೈವಿಕ ಇಂಧನ, ಗೊಬ್ಬರ ತಯಾರಿಸಬಹುದು, ಇದನ್ನು ಜನವರಿಯಲ್ಲಿ ಉದ್ಘಾಟನೆ ಮಾಡಲಾಗುತ್ತಿದ್ದು, ಇಲ್ಲಿ ಗೊಬ್ಬರ ತಯಾರು ಮಾಡು ಯಂತ್ರ ಅಳವಡಿಕೆ ಮಾಡಲಾಗಿದೆ" ಎಂದು ಪಾಲಿಕೆಯ ಪರಿಸರ ತಾಂತ್ರಿಕ ಸಹಾಯಕ ಜಗದೀಶ್ ಮಾಹಿತಿ ನೀಡಿದ್ದಾರೆ.‌

ಜೈವಿಕ ಇಂಧನ ವಾಹನಗಳಿಗೆ, ಕಸದ ವಾಹನಗಳಿಗೆ ಉಪಯೋಗಿಸಬಹುದು: "ಶೈಕ್ಷಣಿಕ ಪ್ರವಾಸದ ಮಾದರಿಯಲ್ಲಿ ಮಕ್ಕಳನ್ನು ಈ ಕೇಂದ್ರಕ್ಕೆ ಕರೆತರಲು ಅವಕಾಶವಿದೆ. ಶಾಲಾ - ಕಾಲೇಜು ಹಂತದಲ್ಲಿಯೇ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ" ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ..

1 ಎಕರೆಯಷ್ಟು ಪ್ರದೇಶದಲ್ಲಿ ಸ್ವಚ್ಛ ಗೃಹ ಕಲಿಕಾ ಕೇಂದ್ರ (ETV Bharat)

ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, "ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜೆಹೆಚ್ ಬಡಾವಣೆಯಲ್ಲಿ ಸ್ವಚ್ಛ ಕಲಿಕಾ ಕೇಂದ್ರ ನಿರ್ಮಾಣ ಮಾಡಲಾಗಿದೆ. ರಾಜ್ಯ ಕೇಂದ್ರ ಸರ್ಕಾರದ ಅನುದಾನದಲ್ಲಿ ನಿರ್ಮಾಣವಾಗಿದ್ದು, ಬಿಬಿಎಂಪಿ, ಬಿಟ್ಟರೇ ರಾಜ್ಯದಲ್ಲಿ ದಾವಣಗೆರೆಯಲ್ಲಿ ಎರಡನೇ ಕೇಂದ್ರ ಆರಂಭಕ್ಕೆ ಸಿದ್ಧವಾಗಿದೆ. ಹಸಿ ಕಸ, ಒಣ ಕಸ ಬೇರ್ಪಡಿಸಿ, ಅದು ಹೇಗೆ ಉಪಯೋಗವಾಗಲಿದೆ, ಬಯೋ ಗ್ಯಾಸ್​, ಗಿಡಗಳಿಗೆ ಹಸಿ ಗೊಬ್ಬರ, ಪ್ಲಾಸ್ಟಿಕ್​ ಯಾವ ರೀತಿ ನಿವಾರಣೆ ಮಾಡಬೇಕು ಎಂದು ಶಾಲಾ ಮಕ್ಕಳಿಗೆ ಜನಸಾಮಾನ್ಯರಿಗೆ, ಸಂಘ ಸಂಸ್ಥೆಗಳಿಗೆ ತರಬೇತಿ ನೀಡಲಾಗುವುದು. ತ್ಯಾಜ್ಯ ಪುಡಿ ಮಾಡಿ ಯಂತ್ರದಲ್ಲಿ ಹಾಕಿದರೆ ಗ್ಯಾಸ್ ಉತ್ಪಾದನೆ ಆಗುತ್ತದೆ. ಅದೇ ಜೈವಿಕ ಇಂಧನ ವಾಹನಗಳಿಗೆ, ಕಸದ ವಾಹನಗಳಿಗೆ ಉಪಯೋಗಿಸಬಹುದಾಗಿದೆ. ಅಡುಗೆ ಅನಿಲ ವಿದ್ಯುತ್​ಗೂ ಉಪಯೋಗ ಆಗಲಿದ್ದು, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್​ ಅವರಿಂದ ಉದ್ಘಾಟನೆ ಆಗಲಿದೆ" ಎಂದರು.

ಇದನ್ನೂ ಓದಿ: ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ ಹೊಸ ರೂಪದೊಂದಿಗೆ ಪುನಾರಂಭಕ್ಕೆ ದಿನಗಣನೆ

Last Updated : 11 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.