ನಾರಾಯಣಪುರ (ಛತ್ತೀಸ್‌ಗಢ): ಕುತುಲ್ ಪ್ರದೇಶ ಸಮಿತಿಗೆ ಸೇರಿದ 29 ಸುದ್ದಿ ಬೆನ್ನಲ್ಲೇ ಸುಕ್ಮಾ ಜಿಲ್ಲೆಯಲ್ಲೂ 9 ನಕ್ಸಲರು ಬುಧವಾರ ಪೊಲೀಸರ ಮುಂದೆ ಶರಣಾಗಿದ್ದಾರೆ.
ಶರಣಾದ 29 ನಕ್ಸಲರ ಪೈಕಿ 22 ಪುರುಷರು ಮತ್ತು 7 ಮಹಿಳೆಯರು ಸೇರಿದ್ದಾರೆ. ಪೊಳ್ಳು ಮಾವೋವಾದಿ ಸಿದ್ಧಾಂತದಿಂದ ನಿರಾಶೆ ಅನುಭವಿಸಿ ಮತ್ತು ಸಂಘಟನೆಯಲ್ಲಿ ಹೆಚ್ಚುತ್ತಿರುವ ಆಂತರಿಕ ಭಿನ್ನಾಭಿಪ್ರಾಯಗಳಿಂದ ಬೇಸತ್ತು ನಕ್ಸಲರು ತಮ್ಮ ಮುಂದೆ ಶರಣಾಗಿದ್ದಾರೆ. ನಾರಾಯಣಪುರದ ಕುತುಲ್ ಪ್ರದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯ, ತ್ವರಿತ ರಸ್ತೆ ನಿರ್ಮಾಣ ಸೇರಿದಂತೆ ಇತರ ಅಭಿವೃದ್ಧಿ ವಿಚಾರಗಳಿಂದ ಪ್ರಭಾವಿತರಾಗಿದ್ದೇವೆ ಮತ್ತು ಇನ್ನು ಮುಂದೆ ಸಾಮಾನ್ಯ ಜೀವನ ನಡೆಸಲು ಬಯಸುವುದಾಗಿ ಶರಣಾದ ನಕ್ಸಲರು ತಮ್ಮ ಮುಂದೆ ಹೇಳಿಕೊಂಡಿದ್ದಾರೆ ಎಂದು ನಾರಾಯಣಪುರ ಪೊಲೀಸ್ ವರಿಷ್ಠಾಧಿಕಾರಿ ಪ್ರಭಾತ್ ಕುಮಾರ್ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಬಿಜಾಪುರ ಜಿಲ್ಲೆಯ ಭಟ್ಟಿಗುಡದ ದಟ್ಟ ಕಾಡುಗಳಲ್ಲಿ PLGA ಬೆಟಾಲಿಯನ್ ಸಂಖ್ಯೆ 01ರ ಕೋರ್ ಪ್ರದೇಶದಲ್ಲಿ ನಕ್ಸಲರ ತರಬೇತಿ ಶಿಬಿರವನ್ನು ಭದ್ರತಾ ಪಡೆಗಳು ನಿಯಂತ್ರಣಕ್ಕೆ ತೆಗೆದುಕೊಂಡವು. ಸೇನೆಯ ಶೋಧ ಕಾರ್ಯಾಚರಣೆ ವೇಳೆ ಹಲವು ನಕ್ಸಲರು ಶಿಬಿರವನ್ನು ಬಿಟ್ಟು ಪಲಾಯನ ಮಾಡಿದರು.
ಮತ್ತೊಂದೆಡೆ ಸುಕ್ಮಾ ಜಿಲ್ಲೆಯಲ್ಲಿಯೂ 9 ನಕ್ಸಲರು ಸ್ಥಳೀಯ ಪೊಲೀಸರ ಮುಂದೆ ಶರಣಾಗಿದ್ದಾರೆ. ಈ ನಕ್ಸಲರ ಪ್ರತಿ ತಲೆಗೆ ಬಹುಮಾನ ಘೋಷಿಸಲಾಗಿತ್ತು.
9 ನಕ್ಸಲೀಯರ ತಲೆಗೆ ಒಟ್ಟು 52 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಶರಣಾಗತ ಎಲ್ಲಾ ನಕ್ಸಲರಿಗೆ ಸರ್ಕಾರದಿಂದ ತಲಾ 25,000 ರೂ. ಪ್ರೋತ್ಸಾಹ ಧನ ನೀಡಲಾಗಿದೆ. ಸರ್ಕಾರದ ಇತರ ಪುನರ್ವಸತಿ ನೀತಿ ಯೋಜನೆಗಳ ಅಡಿಯಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಶೀಘ್ರದಲ್ಲೇ ಲಭ್ಯವಾಗುವಂತೆ ಮಾಡಲಾಗುವುದು - ಕಿರಣ್ ಚವಾಣ್, ಸುಕ್ಮಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ