ಫೆಬ್ರವರಿ 6, ಗುರುವಾರ ತೆರೆಗಪ್ಪಳಿಸಿದ ದಕ್ಷಿಣ ಚಿತ್ರರಂಗದ ಬಹುಬೇಡಿಕೆ ನಟ ಅಜಿತ್ ಕುಮಾರ್ ಅವರ 'ವಿಡಾಮುಯರ್ಚಿ' ಸಿನಿಮಾ ಪೈರಸಿಗೆ ಬಲಿಯಾಗಿದೆ. ಕಳೆದ ದಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ, ಇಡೀ ಚಿತ್ರ ಆನ್‌ಲೈನ್‌ನಲ್ಲಿ ಸೋರಿಕೆ ಆಗಿದೆ. ಹಲವು ಪೈರಸಿ ವೆಬ್ಸೈಟ್ಗಳಲ್ಲಿ ಸಿನಿಮಾ ಲಭ್ಯವಿದೆ.
ಮಾಗಿಜ್ ತಿರುಮೇನಿ ಬರೆದು, ಆ್ಯಕ್ಷನ್ ಕಟ್ ಹೇಳಿರುವ ಈ ಆಕ್ಷನ್ - ಥ್ರಿಲ್ಲರ್ ಚಿತ್ರದಲ್ಲಿ ಅಜಿತ್ ಕುಮಾರ್ ಜೊತೆಗೆ ದಕ್ಷಿಣದ ಬಹುಬೇಡಿಕೆ ನಟಿ ತ್ರಿಶಾ ಕೃಷ್ಣನ್ ತೆರೆಹಂಚಿಕೊಂಡಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಅಡಿ ಸುಬಾಸ್ಕರನ್ ಅಲ್ಲಿರಾಜ ಅವರು 200 ಕೋಟಿ ರೂಪಾಯಿಗೂ ಹೆಚ್ಚು ಬಜೆಟ್‌ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಉತ್ತಮ ಕಲೆಕ್ಷನ್ ಭರವಸೆಯಲ್ಲಿದ್ದ ಚಿತ್ರತಂಡಕ್ಕೆ ಈಗ ತಮ್ಮ ಸಿನಿಮಾ ಲೀಕ್ನಿಂದಾಗಿ ಶಾಕ್ ಆಗಿದೆ. ತೆರೆಕಂಡ ಕೆಲವೇ ಗಂಟೆಗಳಲ್ಲಿ ಚಿತ್ರ ಸೋರಿಕೆಯಾಗಿರೋದು ಅದರ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಹೊಡೆತ ಬೀಳಲಿದೆ.
ತಮಿಳುರಾಕರ್ಸ್, ಫಿಲ್ಮಿಜಿಲ್ಲಾ, ಮೂವೀಸ್ಡಾ ಮತ್ತು ವೆಗಾಮೂವೀಸ್‌ನಂತಹ ವೆಬ್‌ಸೈಟ್‌ಗಳು ಅಜಿತ್ ಮತ್ತು ತ್ರಿಶಾ ನಟನೆಯ ಈ 'ವಿಡಾಮುಯರ್ಚಿ' ಪೈರಸಿ ಆವೃತ್ತಿಗಳನ್ನು ಬಿಡುಗಡೆ ಮಾಡಿವೆ. ಇದರಲ್ಲಿ ಹೆಚ್ಡಿ ಮತ್ತು ಕಡಿಮೆ ಗುಣಮಟ್ಟದ ಆವೃತ್ತಿಗಳು ಸೇರಿವೆ. ಈ ಸೋರಿಕೆಯು ಚಿತ್ರದ ಬಾಕ್ಸ್ ಆಫೀಸ್ ಪ್ರದರ್ಶನದ ಮೇಲೆ ಪರಿಣಾಮ ಬೀರಬಹುದು ಎಂದು ಚಿತ್ರತಂಡ ಮಾತ್ರವಲ್ಲದೇ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಹಿಳಾ ಅಭಿಮಾನಿಗೆ ಮತ್ತೆ ಮುತ್ತಿಟ್ಟ ಗಾಯಕ ಉದಿತ್ ನಾರಾಯಣ್: ವಿಡಿಯೋ ವೈರಲ್
Every effort counts! 💪 Say NO to piracy and watch VIDAAMUYARCHI only in theatres! 🤩
— Lyca Productions (@LycaProductions) February 5, 2025
FEB 6th 🗓️ in Cinemas Worldwide 📽️✨#Vidaamuyarchi #Pattudala #EffortsNeverFail#AjithKumar #MagizhThirumeni @LycaProductions #Subaskaran @gkmtamilkumaran @trishtrashers @akarjunofficial… pic.twitter.com/WigarpFJ34
'ವಿಡಾಮುಯರ್ಚಿ' ಬಿಡುಗಡೆಗೂ ಮುನ್ನ, ಈ ಪ್ರೊಜೆಕ್ಟ್ನ ಹಿಂದಿರುವ ಲೈಕಾ ಪ್ರೊಡಕ್ಷನ್ಸ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿ, ಪೈರಟೆಡ್ ಆವೃತ್ತಿಯನ್ನು ಪ್ರಚಾರ ಮಾಡದಂತೆ ನೆಟ್ಟಿಗರಲ್ಲಿ ವಿನಂತಿಸಿತ್ತು. ಪ್ರೇಕ್ಷಕರು ಚಿತ್ರವನ್ನು 'ಚಿತ್ರಮಂದಿರಗಳಲ್ಲಿ' ವೀಕ್ಷಿಸೋ ಮೂಲಕ ತಮಗೆ ಬೆಂಬಲ ಸೂಚಿಸುವಂತೆ ಕೇಳಿಕೊಂಡರು. ಪೋಸ್ಟ್ನಲ್ಲಿ, 'ಎವ್ರಿ ಎಫರ್ಟ್ಸ್ ಕೌಂಟ್ಸ್, ಪೈರಸಿ ಬೇಡ ಅಂತಾ ಹೇಳಿ, 'ವಿದಾಮುಯಾರ್ಚಿ' ಸಿನಿಮಾವನ್ನು ಥಿಯೇಟರ್ನಲ್ಲಿ ಮಾತ್ರ ನೋಡಿ. ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಫೆಬ್ರವರಿ 6ಕ್ಕೆ' ಎಂದು ಬರೆಯಲಾಗಿದೆ.
ಇದನ್ನೂ ಓದಿ: 75 ರೂಪಾಯಿ ಸಂಭಾವನೆಗೆ ಡ್ಯಾನ್ಸರ್ ಆಗಿದ್ದ ಇವರ ಈಗಿನ ಆಸ್ತಿ 2,900 ಕೋಟಿ ರೂ.ಗೂ ಹೆಚ್ಚು!
ಥಿಯೇಟ್ರಿಕಲ್ ಬಿಡುಗಡೆ ಆಗಿದ್ದು, ಡಿಜಿಟಲ್ ಪ್ರೀಮಿಯರ್ ಅನ್ನು ಮಾರ್ಚ್ 6ರಂದು ನೆಟ್‌ಫ್ಲಿಕ್ಸ್‌ನಲ್ಲಿ ನಿಗದಿಪಡಿಸಲಾಗಿದೆ. ಆದ್ರೆ ಅದಕ್ಕೂ ಮುನ್ನವೇ ಚಿತ್ರ ಸೋರಿಕೆಯಾಗಿದ್ದು, ನಿರ್ಮಾಪಕರು ಮತ್ತು ನಟರ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಈ ಚಿತ್ರವು ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ.