ಮೈಸೂರಿನ ಸಂತ ಫಿಲೋಮಿನಾ ಚರ್ಚ್‌ನಲ್ಲಿ ಕ್ರಿಸ್‌ಮಸ್ ಸಂಭ್ರಮ: ವಿಡಿಯೋ - CHRISTMAS CELEBRATION
🎬 Watch Now: Feature Video
Published : 12 hours ago
ಮೈಸೂರು: ಮೈಸೂರು ನಗರದಲ್ಲಿರುವ ಚರ್ಚ್ಗಳು ಸೇರಿದಂತೆ ಕ್ರೈಸ್ತಬಾಂಧವರ ಮನೆಗಳಲ್ಲಿ ಕ್ರಿಸ್ಮಸ್ ಹಬ್ಬದ ಸಂಭ್ರಮ ಮನೆ ಮಾಡಿದೆ. ಮಂಗಳವಾರ ರಾತ್ರಿಯಿಂದಲೇ ಮನೆ, ಚರ್ಚ್ಗಳು ದೀಪಾಲಂಕಾರ, ತೂಗುಬಿಟ್ಟ ನಕ್ಷತ್ರಗಳು, ಕ್ರಿಸ್ಮಸ್ ಟ್ರೀಗಳು ಗಮಸ ಸೆಳೆಯುತ್ತಿವೆ. ಅದರಂತೆ ಕ್ಯಾಥೊಲಿಕ್ ಸಂತ ಫಿಲೋಮಿನಾ ಚರ್ಚ್‌ನಲ್ಲಿ ಧರ್ಮಕ್ಷೇತ್ರದ ಆಡಳಿತಾಧಿಕಾರಿ ನೇತೃತ್ವದಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆಗಳು ಅದ್ಧೂರಿಯಾಗಿ ಜರುಗಿದವು.
ಮಂಗಳವಾರ ಮಧ್ಯರಾತ್ರಿಯಿಂದಲೇ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಿದ್ದು, ಚರ್ಚ್‌ಗಳಿಗೆ ಆಗಮಿಸುತ್ತಿರುವ ಕ್ರೈಸ್ತ ಬಾಂಧವರು ಯೇಸುವನ್ನು ಪ್ರಾರ್ಥಿಸಿ, ಪರಸ್ಪರ ಕ್ರಿಸ್‌ಮಸ್ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಸರಿಯಾಗಿ ಮಧ್ಯರಾತ್ರಿ 12 ಗಂಟೆಗೆ ಬಾಲ ಯೇಸುವನ್ನು ಮೆರವಣಿಗೆ ಮೂಲಕ ಗೋದಲಿಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಯೇಸು ಕ್ರಿಸ್ತನ ಜೀವನ ಚರಿತ್ರೆ ವಿವರಿಸುವ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತಿದೆ.
ಆರ್ಚ್ ಬಿಷಪ್ ಬರ್ನಾಡ್ ಮೊರಾಸ್ ಅವರು ಮಾತನಾಡಿ, "ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು. ಸಹೋದರತ್ವ, ಪರೋಪಕಾರದ ಮಹತ್ವ ಸಾರುವ ಮತ್ತು ಶಾಂತಿಯ ಸಂದೇಶದ ನಕ್ಷತ್ರವು ಪ್ರತಿಯೊಬ್ಬರ ಮನದಲ್ಲೂ ಮಿನುಗಲಿ ಎಂಬ ಆಶಯದ ಈ ಹಬ್ಬದ ಆಚರಣೆಗೆ ವಿಶೇಷ ಮಹತ್ವವಿದೆ. ನಾವು ದೇವರ ಮಕ್ಕಳು, ಸಹಬಾಳ್ವೆಯಿಂದ ಬದುಕಬೇಕು" ಎಂದು ಕರೆ ನೀಡಿದರು.
ಇದನ್ನೂ ಓದಿ: ಶಿವಮೊಗ್ಗ, ಬಳ್ಳಾರಿಯಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ: ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಕ್ರೈಸ್ತ ಬಾಂಧವರು