ETV Bharat / business

ಶೇ 12 ರಷ್ಟು ಬಡ್ಡಿ ಅಂದರೆ ಎಷ್ಟು?: ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿಯನ್ನು ಸರಳ ರೀತಿಯಲ್ಲಿ ಲೆಕ್ಕಾಚಾರ ಮಾಡುವುದು ಹೇಗೆ! - INTEREST CALCULATION METHOD

ಶೇಕಡಾವಾರನ್ನು ರೂಪಾಯಿಗಳಲ್ಲಿ ಲೆಕ್ಕ ಹಾಕುವುದು ಹೇಗೆ?

interest-rates-on-loans-are-based-on-processing-fees-and-other-charges-as-per-bank-policy
ಶೇ 12 ರಷ್ಟು ಬಡ್ಡಿ ಅಂದರೆ 1 ರೂ: ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿಯನ್ನು ಸರಳ ರೀತಿಯಲ್ಲಿ ಲೆಕ್ಕಾಚಾರ ಮಾಡುವುದು ಹೇಗೆ! (ETV Bharat)
author img

By ETV Bharat Karnataka Team

Published : Feb 3, 2025, 7:19 AM IST

Interest Calculation Method : ಬಡ್ಡಿ ಲೆಕ್ಕಾಚಾರ ಎನ್ನುವುದು ಕೆಲವರಿಗೆ ಕಬ್ಬಿಣದ ಕಡಲೆ. ಬಡ್ಡಿ ಲೆಕ್ಕಾಚಾರಗಳನ್ನು ಬೆರಳುಗಳ ಮೇಲೆಯೂ ಲೆಕ್ಕ ಹಾಕಬಹುದು. ಲೇವಾದೇವಿಗಾರರು ಒಂದು ರೂಪಾಯಿ ಬಡ್ಡಿ, ಎರಡು ರೂಪಾಯಿ ಬಡ್ಡಿ ಮತ್ತು ಹತ್ತು ರೂಪಾಯಿ ಬಡ್ಡಿಗೆ ಸಾಲ ಕೊಡುತ್ತಾರೆ.

ವ್ಯಾಪಾರಿಗಳು ನೀಡುವ ಸಾಲದ ಬಡ್ಡಿ ಒಂದು ರೂಪಾಯಿ, 2 ರೂಪಾಯಿ ಮತ್ತು 3 ರೂಪಾಯಿ. ಅದೇ ಬ್ಯಾಂಕ್‌ಗಳಲ್ಲಿ ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಸಾಲ ತೆಗೆದುಕೊಳ್ಳುವಾಗ ಬಡ್ಡಿ ದರವನ್ನು ಶೇಕಡಾವಾರು ಲೆಕ್ಕ ಹಾಕಲಾಗುತ್ತದೆ. ಉಳಿತಾಯ ಖಾತೆ ಮತ್ತು ನಿಶ್ಚಿತ ಠೇವಣಿಯ ಬಡ್ಡಿ ದರಗಳನ್ನು ಶೇ 3 , ಶೇ7 ,ಶೇ11 ,ಶೇ12 ಮತ್ತು ಶೇ 18ರಷ್ಟು ಎಂದು ಲೆಕ್ಕ ಹಾಕಲಾಗುತ್ತದೆ. ಈ ಶೇಕಡಾವಾರನ್ನು ರೂಪಾಯಿಗೆ ಪರಿವರ್ತಿಸುವುದು ಹೇಗೆ ಎಂದು ಅನೇಕರಿಗೆ ತಿಳಿದಿಲ್ಲ. ಆ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ

ಹೀಗಿದೆ ಲೆಕ್ಕಾಚಾರ: ಬ್ಯಾಂಕ್‌ಗಳು, ಮ್ಯೂಚುವಲ್ ಫಂಡ್‌ಗಳು ಮತ್ತು ವಿಮಾ ಕಂಪನಿಗಳು ಪಾವತಿಸುವ ಬಡ್ಡಿಯು ಮಾಸಿಕವಾಗಿ ಲೆಕ್ಕ ಹಾಕುವುದಿಲ್ಲ. ಅವೆಲ್ಲವನ್ನು ವಾರ್ಷಿಕವಾಗಿ ಲೆಕ್ಕ ಹಾಕಲಾಗುತ್ತದೆ. ಅಂದರೆ 12 ತಿಂಗಳ ಲೆಕ್ಕದಲ್ಲಿ ಲೆಕ್ಕಾಚಾರ ಹಾಕಲಾಗುತ್ತದೆ.

ಉದಾಹರಣೆಗೆ, ಶೇ 6ರ ಬಡ್ಡಿಯನ್ನು ರೂಪಾಯಿಗೆ ಪರಿವರ್ತಿಸಲು, ವರ್ಷದಲ್ಲಿ 12 ತಿಂಗಳುಗಳಿರುವುದರಿಂದ 6/12 ರಿಂದ ಭಾಗಿಸಬೇಕಾಗುತ್ತದೆ. ಆಗ ಅದರ ಮೌಲ್ಯ ರೂ. 0.50 ಆಗಿರುತ್ತದೆ. ರೂಪಾಯಿ ಅಥವಾ ಪೈಸೆಯಲ್ಲಿನ ಮೌಲ್ಯವನ್ನು ಒಂದು ತಿಂಗಳವರೆಗೆ ಪರಿಗಣಿಸಬೇಕು. 6ರಷ್ಟು ಬಡ್ಡಿ ಎಂದರೆ 50 ಪೈಸೆ. ಶೇ.12ರ ಬಡ್ಡಿಯಾದರೆ ಅದು 1ರೂ.ಆಗುತ್ತದೆ, ಶೇ.18ರ ಬಡ್ಡಿ ಅಂತಾ ಎಂದರೆ ರೂಪಾಯಿ ಲೆಕ್ಕದಲ್ಲ ಒಂದೂವರೆ ರೂ.(1.50), ಶೇ.24ರ ಬಡ್ಡಿಯಾದರೆ ರೂ.2 ಬಡ್ಡಿ ಎಂದು ಅರ್ಥ ಮಾಡಿಕೊಳ್ಳಬೇಕು.

ಅದೇ ರೀತಿ ಶೇ1ರಷ್ಟು ಬಡ್ಡಿ = 0.0833

ಶೇ2 = 0.1666

ಶೇ3 = 0.25

ಶೇ4 = 0.3333

ಶೇ5 = 0.4166

ಶೇ6 = 0.50

ಶೇ7 = 0.5833

ಶೇ8 = 0.6660

ಶೇ9 = 0.75

ಶೇ10 = 0.8333

ಶೇ11 = 0.9166

ಶೇ12 = 1.00

ಶೇ18 =1.50

ಶೇ24 = 2 ರೂ.

ಸರಳವಾಗಿ ಹೇಳುವುದಾದರೆ, ಶೇಕಡಾ 12 ಬಡ್ಡಿ ಎಂದರೆ 1 ರೂಪಾಯಿ. ಶೇ 24 ಅಂದರೆ 2 ಹಾಗೂ ಶೇ 36 ಎಂದರೆ 3 ರೂಪಾಯಿ ಎಂದು ಅರ್ಥೈಸಿಕೊಳ್ಳಬೇಕು.ಈ ರೀತಿಯಾಗಿ, ಶೇಕಡಾವಾರು ಬಡ್ಡಿಯನ್ನು ಸುಲಭವಾಗಿ ರೂಪಾಯಿಗಳಾಗಿ ಪರಿವರ್ತಿಸಬಹುದು. ಅದೇ ರೀತಿ ರೂಪಾಯಿಗಳಲ್ಲಿನ ಬಡ್ಡಿಯನ್ನು ಶೇಕಡಾವಾರುಗಳಿಗೆ ಹೇಗೆ ಪರಿವರ್ತಿಸುವುದು ಎಂದು ತಿಳಿಯೋಣ.

ಶೇಕಡಾವಾರು 60 ಪೈಸೆ ಬಡ್ಡಿಯನ್ನು ವ್ಯಕ್ತಪಡಿಸುವುದು ಹೀಗೆ:0.60X12=7.2%, 1.50X12=18%, 2.50X12=30 ಪ್ರತಿಶತ. ಇವೆಲ್ಲವೂ ಸರಳ ಲೆಕ್ಕಾಚಾರಗಳು. ಸಾಲವನ್ನು ತೆಗೆದುಕೊಳ್ಳುವ ಮೊದಲು ಬಡ್ಡಿ ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬ ಬಗ್ಗೆ ಅರಿವು ಹೊಂದಿರಬೇಕಾಗುತ್ತದೆ.

ಇದನ್ನು ಓದಿ: ಕೇಂದ್ರ ಬಜೆಟ್ 2025: ಪ್ರಮುಖ ಎಲೆಕ್ಟ್ರಾನಿಕ್ಸ್ ಯೋಜನೆಗಳಿಗೆ ಸರ್ಕಾರದಿಂದ ಬಜೆಟ್ ಶೇ.84 ರಷ್ಟು ಏರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.