ಬೆಳಗಾವಿ: ಲೋಕಸಭೆ ಚುನಾವಣೆ ಜಯಿಸುವ ಮೂಲಕ ಮಗಳು ಪ್ರಿಯಾಂಕಾ ಜಾರಕಿಹೊಳಿಯನ್ನು ಅಧಿಕೃತವಾಗಿ ರಾಜಕೀಯ ಪ್ರವೇಶಿಸುವಂತೆ ಮಾಡಿದ್ದ ಸಚಿವ ಸತೀಶ್ ಜಾರಕಿಹೊಳಿ, ಇದೀಗ ಮಗನನ್ನೂ ರಾಜಕೀಯ ಅಖಾಡದಲ್ಲಿ ಗೆಲ್ಲಿಸಿದ್ದಾರೆ. ರಾಹುಲ್ ಜಾರಕಿಹೊಳಿ ರಾಜ್ಯ ಯುವ ಕಾಂಗ್ರೆಸ್ ಘಟಕಕ್ಕೆ ಪ್ರಧಾನ ಕಾರ್ಯದರ್ಶಿ ಚುನಾವಣೆಯಲ್ಲಿ ಗೆದ್ದು ಬೀಗಿದ್ದಾರೆ.
ರಾಹುಲ್ ಜಾರಕಿಹೊಳಿ ಆಯ್ಕೆಯಾಗುತ್ತಿದ್ದಂತೆ ಬೆಳಗಾವಿ ಮತ್ತು ಗೋಕಾಕಿನಲ್ಲಿ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಸತೀಶ್ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ ಪರ ಘೋಷಣೆ ಮೊಳಗಿಸಿದರು.
![RAHUL JARKIHOLI](https://etvbharatimages.akamaized.net/etvbharat/prod-images/09-02-2025/bgm-rahul-jarakiholi-news_09022025124705_0902f_1739085425_642.jpg)
ಇದನ್ನೂ ಓದಿ: ಕಚೇರಿ ಉದ್ಘಾಟನೆಗೆ ಬೀಗರನ್ನೇ ಕರೆದಿಲ್ಲ, ಅಂತಹದ್ದರಲ್ಲಿ ಯತ್ನಾಳ್ ಟೀಂ ಮತ್ತೊಂದು ಟೀಂ ಬರುತ್ತಾ?: ಕೇಂದ್ರ ಸಚಿವ ವಿ ಸೋಮಣ್ಣ
ಇದನ್ನೂ ಓದಿ: ಒಡೆದ ಮನಸ್ಸುಗಳನ್ನು ಒಂದು ಮಾಡಲು ರಾಜ್ಯಾದ್ಯಂತ ಯಾತ್ರೆ: ಶ್ರೀರಾಮಲು