ಸಂಭಾಲ್, ಉತ್ತರಪ್ರದೇಶ: ನಗರವನ್ನು ಧಾರ್ಮಿಕ ಮತ್ತು ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸಲು ಸಂಭಾಲ್ ಆಡಳಿತ ವಿಶೇಷ ಪ್ರಯತ್ನ ಮಾಡುತ್ತಿದೆ. ಈ ಸಂಬಂಧ ಭಾನುವಾರ ಡಿಎಂ ಡಾ. ರಾಜೇಂದ್ರ ಪೆನ್ಸಿಯಾ, ಎಸ್ಪಿ ಮತ್ತು ಇತರ ಅಧಿಕಾರಿಗಳು 24 ಕೋಸಿಯಾ ಪರಿಕ್ರಮ ಮಾರ್ಗದಲ್ಲಿ 11 ಕಿಲೋಮೀಟರ್ ಪಾದಯಾತ್ರೆ ನಡೆಸಿದರು ಸಂಭಾಲ್‌ನಲ್ಲಿ 41 ದೇಗುಲಗಳು ಮತ್ತು 19 ಬಾವಿಗಳು ಇರುವುದನ್ನು ಈಗಾಗಲೇ ಪತ್ತೆ ಹಚ್ಚಲಾಗಿದೆ. ಈಗಾಗಲೇ ಈ ಜಿಲ್ಲೆಯಲ್ಲಿ ಪುರತತ್ವ ಇಲಾಖೆ 9 ಸಂರಕ್ಷಿತ ಸೈಟ್ ಗಳನ್ನ ಗುರುತಿಸಿದೆ.
ಸಂಭಾಲ್‌ನ 24 ಕೋಸಿ ಪರಿಕ್ರಮವು ಭಾನುವಾರ ಬೆಳಗ್ಗೆ 10:00 ರಿಂದ ಪ್ರಾರಂಭವಾಯಿತು. ಈ ಪರಿಕ್ರಮವು ಸಂಭಾಲ್‌ನ ವಂಶ ಗೋಪಾಲ ತೀರ್ಥರಿಂದ ಪ್ರಾರಂಭವಾಯಿತು. 24 ಕೋಸಿ ಪರಿಕ್ರಮವನ್ನು ಸಂಭಾಲ್ ಡಿಎಂ ಡಾ ರಾಜೇಂದ್ರ ಪೆನ್ಸಿಯಾ ಮತ್ತು ಎಸ್ಪಿ ಕೃಷ್ಣ ಕುಮಾರ್ ವಿಷ್ಣೋಯ್ ಅವರು ಉದ್ಘಾಟಿಸಿದರು. ಸಂಭಾಲ್ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಪೆನ್ಸಿಯಾ ಸೇರಿ ಎಲ್ಲ ಅಧಿಕಾರಿಗಳು ಈ ಪರಿಕ್ರಮ ಮಾರ್ಗದಲ್ಲಿ ಮೆರವಣಿಗೆ ನಡೆಸಿದರು. ಸುಮಾರು 11 ಕಿಲೋಮೀಟರ್ ಉದ್ದದ ಈ ಪಾದಯಾತ್ರೆಯಲ್ಲಿ ಅಧಿಕಾರಿಗಳು ತಮ್ಮ ವಾಹನಗಳನ್ನು ಒಂದೆಡೆ ಪಾರ್ಕ್ ಮಾಡಿ ಕಾಲ್ನಡಿಗೆಯಲ್ಲೇ ಪರ್ಯಟನೆ ನಡೆಸಿ, ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದರು. ಅಷ್ಟೇ ಅಲ್ಲ ವಸ್ತು ಸ್ಥಿತಿಯನ್ನು ಕಂಡುಕೊಂಡರು. ಸಂಭಾಲ್‌ನಲ್ಲಿ ಜನರಿಂದ ವಿವಿಧ ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಪೆನ್ಸಿಯಾ ತಿಳಿಸಿದ್ದಾರೆ.
ಈ ಐತಿಹಾಸಿಕ ತಾಣ ಅಭಿವೃದ್ಧಿ ಹಾಗೂ ಇದರ ಅಭಿವೃದ್ಧಿಗೆ ಎಲ್ಲೆಲ್ಲಿ ರಸ್ತೆ ನಿರ್ಮಿಸಬೇಕು ಅಥವಾ ದೀಪಾಲಂಕಾರ ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಯಿತು. ಇಲ್ಲಿ 22 ಕೊಳವೆ ಬಾವಿಗಳೂ ಬರುತ್ತವೆ. ಆ ಕೊಳವೆ ಬಾವಿಗಳನ್ನು ಉತ್ತಮ ರಮಣೀಯ ತಾಣಗಳನ್ನಾಗಿ ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ಮುಂದಾಗಿದೆ. ಪರಿಕ್ರಮ ಮಾರ್ಗದಲ್ಲಿ ವಂಶ ಗೋಪಾಲ ತೀರ್ಥರ ಬೋರ್ಡು ಹಾಳಾಗಿರುವುದು ಕಂಡು ಬಂದಿದೆ. ಎರಡು ಕಡೆ ಬೋರ್ಡ್ ಧ್ವಂಸ ಮಾಡಿರುವ ಬಗ್ಗೆ ದೂರು ಬಂದಿತ್ತು. ಎರಡೂ ಕಡೆ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ. ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಇದೇ ವೇಳೆ ಭರವಸೆ ನೀಡಿದರು.
ಇದನ್ನು ಓದಿ: ಇಡೀ ರಾಮನಗರ ಜಿಲ್ಲೆಯ ಚಿತ್ರಣ ಬದಲಿಸುತ್ತೇವೆ : ಡಿಸಿಎಂ ಡಿ ಕೆ ಶಿವಕುಮಾರ್