ETV Bharat / entertainment

ಭಾರತೀಯ - ಅಮೆರಿಕನ್ ಸಂಗೀತಗಾರ್ತಿ ಚಂದ್ರಿಕಾ ಟಂಡನ್​​ಗೆ ಗ್ರ್ಯಾಮಿ ಪ್ರಶಸ್ತಿ ಗರಿ - CHANDRIKA TANDON WINS GRAMMY

ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಪ್ರಕಟಗೊಂಡಿದ್ದು, ಭಾರತೀಯ ಅಮೆರಿಕನ್​​ ಗಾಯಕಿ ಚಂದ್ರಿಕಾ ಟಂಡನ್ ಅವರಿಗೆ ಚಾಂಟ್ ಆಲ್ಬಂ ವಿಭಾಗದಲ್ಲಿ ಪ್ರಶಸ್ತಿ ಒಲಿದು ಬಂದಿದೆ.

GRAMMYS-INDIA-ARTIST
ಭಾರತೀಯ - ಅಮೆರಿಕನ್ ಸಂಗೀತಗಾರ್ತಿ ಚಂದ್ರಿಕಾ ಟಂಡನ್​​ ಗೆ ಗ್ರ್ಯಾಮಿ ಪ್ರಶಸ್ತಿ ಗರಿ (Chandrika tandon x app)
author img

By ETV Bharat Karnataka Team

Published : Feb 3, 2025, 9:20 AM IST

Updated : Feb 3, 2025, 9:59 AM IST

ನವದೆಹಲಿ: ಭಾರತೀಯ- ಅಮೆರಿಕನ್ ಗಾಯಕಿ ಮತ್ತು ಉದ್ಯಮಿ ಚಂದ್ರಿಕಾ ಟಂಡನ್ ಅವರಿಗೆ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಒಲಿದು ಬಂದಿದೆ. ಆಂಬಿಯೆಂಟ್ ಅಥವಾ ಚಾಂಟ್ ಆಲ್ಬಂ ವಿಭಾಗದಲ್ಲಿ 'ತ್ರಿವೇಣಿ' ಆಲ್ಬಂಗಾಗಿ ಅವರಿಗೆ ಗ್ರ್ಯಾಮಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಲಾಸ್ ಏಂಜಲೀಸ್‌ನ ಕ್ರಿಪ್ಟೋ ಡಾಟ್ ಕಾಮ್ ಅರೆನಾದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಸತ್ಕರಿಸಲಾಗಿದೆ. ರೆಕಾರ್ಡಿಂಗ್ ಅಕಾಡೆಮಿ ಆಯೋಜಿಸಿದ ಅತಿದೊಡ್ಡ ಸಂಗೀತ ಪ್ರಶಸ್ತಿಯ 67 ನೇ ಆವೃತ್ತಿ ಇದಾಗಿದೆ.

ಟಂಡನ್ ಪೆಪ್ಸಿಕೋದ ಮಾಜಿ ಸಿಇಒ ಇಂದ್ರಾ ನೂಯಿ ಅವರ ಹಿರಿಯ ಸಹೋದರಿಯಾಗಿದ್ದಾರೆ. ದಕ್ಷಿಣ ಆಫ್ರಿಕಾದ ಫ್ಲೌಟಿಸ್ಟ್ ವೂಟರ್ ಕೆಲ್ಲರ್‌ಮ್ಯಾನ್ ಮತ್ತು ಜಪಾನಿನ ಸೆಲಿಸ್ಟ್ ಎರು ಮಾಟ್ಸುಮೊಟೊ ಅವರೊಂದಿಗೆ ಚಂದ್ರಿಕಾ ಈ ಪ್ರಶಸ್ತಿ ಗೆದ್ದಿದ್ದಾರೆ.

ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಅವರು, ಇದೊಂದು ಅದ್ಭುತ ಕ್ಷಣವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ನಾವು ಈ ಪ್ರಶಸ್ತಿ ಗೆದ್ದಿರುವುದು ನಿಜವಾಗಿಯೂ ನಮಗೆ ವಿಶೇಷ ಕ್ಷಣವಾಗಿದೆ. ಅಸಾಧಾರಣ ಸಂಗೀತ ದಿಗ್ಗಜ್ಜರನ್ನು ಹಿಂದಿಕ್ಕಿ ಪ್ರಶಸ್ತಿ ಪಡೆದಿರುವುದು ಆನಂದವನ್ನುಂಟು ಮಾಡಿದೆ ಎಂದು ಚಂದ್ರಿಕಾ ಅವರು ಖುಷಿ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಖ್ಯಾತ ನಟಿ ಸಾಯಿ ಪಲ್ಲವಿ ಬೆಡ್​ ರೆಸ್ಟ್​​ನಲ್ಲಿ: ತಂಡೆಲ್​ ನಿರ್ದೇಶಕ ಹೇಳಿದ್ದಿಷ್ಟು

ಇದು ತ್ರಿವೇಣಿ ಸಂಗಮ: ಮೂರು ಪವಿತ್ರ ಭಾರತೀಯ ನದಿಗಳಾದ ಗಂಗಾ, ಯಮುನಾ ಮತ್ತು ಸರಸ್ವತಿಗಳ ಸಂಗಮ ಎಂಬ ಹೆಸರಿನಂತೆಯೇ, 'ತ್ರಿವೇಣಿ' ವೈವಿಧ್ಯಮಯ ಸಂಸ್ಕೃತಿಗಳನ್ನು ಪ್ರತಿನಿಧಿಸುವ ಮೂವರು ಕಲಾವಿದರಾದ ಟಂಡನ್, ಕೆಲ್ಲರ್‌ಮ್ಯಾನ್ ಮತ್ತು ಮಾಟ್ಸುಮೊಟೊ ಅವರ ಸಹಯೋಗದಿಂದ ಕೂಡಿದೆ.

ಆಗಸ್ಟ್ 30, 2024 ರಂದು ಈ ಆಲ್ಬಂ ಬಿಡುಗಡೆಯಾಯಿತು, 'ತ್ರಿವೇಣಿ' ಯಲ್ಲಿನ ಏಳು ಟ್ರ್ಯಾಕ್‌ಗಳಲ್ಲಿ ಪ್ರತಿಯೊಂದೂ ತನ್ನದೇ ಆದ ಕಥೆಗಳನ್ನು ಹೇಳುತ್ತವೆ. ಆ ಹಾಡುಗಳೆಂದರೆ, ಪಥ್‌ವೇ ಟು ಲೈಟ್, ಚಾಂಟ್ ಇನ್ ಎ, ಜರ್ನಿ ವಿಥ್ ಇನ್, ಈಥರ್ಸ್ ಸೆರೆನೇಡ್, ಆನಿಸೆಂಟ್​ ಮೂನ್, "ಓಪನ್ ಸ್ಕೈ", ಮತ್ತು "ಸೀಕಿಂಗ್ ಶಕ್ತಿ.

ಭಾರತೀಯ ಶಾಸ್ತ್ರೀಯ ಸಂಗೀತ, ಹೊಸ ಯುಗದ ವಾತಾವರಣ ಮತ್ತು ಜಾಗತಿಕ ಸಂಪ್ರದಾಯಗಳ ಸಾಮರಸ್ಯದ ಮಿಶ್ರಣದಿಂದ ಕೂಡಿದೆ. ಟಂಡನ್ ಅವರು ಕೆನಡಿ ಸೆಂಟರ್, ಲಿಂಕನ್ ಸೆಂಟರ್ ಮತ್ತು ಯುರೋಪ್ ಮತ್ತು ಭಾರತದಾದ್ಯಂತ ವಿಶ್ವ ಸಂಸ್ಕೃತಿ ಉತ್ಸವಗಳಂತಹ ಸ್ಥಳಗಳಲ್ಲಿ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ

Last Updated : Feb 3, 2025, 9:59 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.