ETV Bharat / bharat

ಈ ಬಾರಿಯ ಬಜೆಟ್​​ ನಲ್ಲಿ ರಕ್ಷಣಾ ವಿಭಾಗಕ್ಕೆ ಎಷ್ಟು ಮೀಸಲು: ಸುಧಾರಣೆಗೆ ಅವಕಾಶವಿದೆಯೇ? - IS THERE SCOPE FOR IMPROVEMENT

ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನೆ ಮಾಡಿದ್ದಾರೆ. ರಕ್ಷಣೆಗೆ ಎಂದಿನಂತೆ ಹೆಚ್ಚಿನ ಹಣ ಮೀಸಲಿಟ್ಟಿದ್ದಾರೆ. ಆದರೂ ಈ ಪ್ರಮಾಣ ಅಮೆರಿಕ, ಚೀನಾಕ್ಕೆ ಹೋಲಿಸಿದರೆ ಕಡಿಮೆಯೇ

assessment of the defense budget
ಈ ಬಾರಿಯ ಬಜೆಟ್​​ ನಲ್ಲಿ ರಕ್ಷಣಾ ವಿಭಾಗಕ್ಕೆ ಎಷ್ಟು ಮೀಸಲು: ಸುಧಾರಣೆಗೆ ಅವಕಾಶವಿದೆಯೇ? (ANI)
author img

By Major General Harsha Kakar

Published : Feb 3, 2025, 11:17 AM IST

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025-26ರ ಬಜೆಟ್ ಭಾಷಣದಲ್ಲಿ ರಕ್ಷಣೆಗಾಗಿ 6,81,210 ಕೋಟಿ ರೂ ಮೀಸಲು ಇಟ್ಟಿದ್ದಾರೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 9.53ರಷ್ಟು ಹೆಚ್ಚಳವಾಗಿದೆ. ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಈ ಬಾರಿಯ ಬಜೆಟ್ ಶ್ಲಾಘಿಸಿದೆ.

ಈ ಮೀಸಲು, ಈ ವರ್ಷದಲ್ಲಿ ಯೋಜಿಸಲಾದ ಪ್ರಮುಖ ಯೋಜನೆಗಳ ಮುಂದುವರಿಕೆ ನೆರವು ನೀಡಲಿದೆ ಎಂದು ಅದು ವಿಶ್ಲೇಷಿಸಿದೆ. ರಕ್ಷಣಾ ಉತ್ಪಾದನಾ ವಲಯದಲ್ಲಿನ ಬಂಡವಾಳ ಹೂಡಿಕೆಯು ಕ್ಯಾಸ್ಕೇಡಿಂಗ್ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಈ ದೇಶದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ.

ರಕ್ಷಣಾ ವಿಭಾಗಕ್ಕೆ ಕೇಂದ್ರ ಬಜೆಟ್​ ಒಟ್ಟಾರೆ ಶೇ 13.45ರಷ್ಟನ್ನು ಹಂಚಿಕೆ ಮಾಡಿದೆ. ಇದು ಎಲ್ಲಾ ಸಚಿವಾಲಯಗಳಿಗೆ ಮೀಸಲಿಟ್ಟಿರುವ ಹಣದಲ್ಲಿ ಅತ್ಯಧಿಕವಾಗಿದೆ. ಕಳೆದ ಐದು ವರ್ಷಗಳಿಂದ ರಕ್ಷಣಾ ಬಜೆಟ್​ ಗೆ ಶೇ 14 ಕ್ಕಿಂತ ಕಡಿಮೆ ಇದೆ. ಇದು ಜಿಡಿಪಿಯ ಶೇ 1.91ರಷ್ಟಿದೆ. ಈ ಶೇಕಡಾವಾರು ಪ್ರಮಾಣವು ಸ್ಥಿರವಾಗಿ ಕುಸಿಯುತ್ತಿದೆ. ಆದರೆ, ಆರ್ಥಿಕತೆ ಮತ್ತು ಬಜೆಟ್ ಹಂಚಿಕೆಗಳು ಏರುತ್ತಿವೆ. 20-21ರಲ್ಲಿ ರಕ್ಷಣಾ ಜಿಡಿಪಿಯ 2.4%, 22-23ರಲ್ಲಿ 2.1%, ಕಳೆದ ವರ್ಷ 1.98% ಮತ್ತು ಈಗ 1.91%ಕ್ಕೆ ಕುಸಿತ ಕಂಡಿದೆ. ಒಟ್ಟಾರೆ ಹಂಚಿಕೆಯು 9.53% ರಷ್ಟು ಬೆಳೆದಿದ್ದರೂ, GDP ಗೆ ಹೋಲಿಸಿದರೆ ಅದು .07% ರಷ್ಟು ಕಡಿಮೆಯಾಗಿದೆ ಎಂಬುದನ್ನು ಗಮನಿಸಬೇಕಾಗಿದೆ.

2020ರಲ್ಲಿ ನಡೆದ ಗಲ್ವಾನ್ ಘರ್ಷಣೆ, 2020-21 ರಲ್ಲಿ ಜಿಡಿಪಿಯ ಶೇಕಡಾವಾರು ರಕ್ಷಣಾ ವೆಚ್ಚವನ್ನು ಹೆಚ್ಚುವಂತೆ ಮಾಡಿದೆ. ವರ್ಷಗಳು ಕಳೆದಂತೆ, ಈ ಶೇಕಡಾವಾರು ಕಡಿಮೆಯಾಗುತ್ತಾ ಸಾಗಿದೆ. ಇದು ಸರ್ಕಾರವು ಬಿಕ್ಕಟ್ಟಿನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂದು ಸೂಚಿಸುತ್ತದೆ. ಸಶಸ್ತ್ರ ಪಡೆಗಳ ನಿರಂತರ ಬೇಡಿಕೆಯು ಕನಿಷ್ಠ 2.5-3% ಆಗಿದೆ, ಆದಾಗ್ಯೂ ಇದು ಪೈಪ್-ಡ್ರೀಮ್ ಆಗಿಯೇ ಉಳಿದಿದೆ.

ಅಮೆರಿಕಕ್ಕೆ ಹೋಲಿಸಿದರೆ ಭಾರತದ್ದು ಅರ್ಧಕ್ಕರ್ಧ ಕಡಿಮೆ: ಹೆಚ್ಚಿನ ರಾಷ್ಟ್ರಗಳು ಅವರ ಹಿಂದಿನ ಬೇಡಿಕೆಯಾದ 2% ಅನ್ನು ಇನ್ನೂ ಮುಟ್ಟದಿದ್ದರೂ, ಅಗತ್ಯವಿರುವ ಸಾಮರ್ಥ್ಯಗಳ ರಚನೆಯನ್ನು ಖಚಿತಪಡಿಸಿಕೊಳ್ಳಲು NATO ಸದಸ್ಯರು ತಮ್ಮ GDP ಯ ಶೇ 5ರಷ್ಟನ್ನು ರಕ್ಷಣೆಗಾಗಿ ಖರ್ಚು ಮಾಡಬೇಕೆಂದು ಟ್ರಂಪ್ ಒತ್ತಾಯಿಸುತ್ತಿದ್ದಾರೆ. US ತನ್ನ GDP ಯ ಸುಮಾರು ಶೇ 3.5ರಷ್ಟನ್ನು ರಕ್ಷಣೆಗೆ ಖರ್ಚು ಮಾಡುತ್ತಿದೆ. ಇದು ಭಾರತಕ್ಕಿಂತ ಭಾರಿ ಪ್ರಮಾಣದಲ್ಲಿ ಹೆಚ್ಚಿನದಾಗಿದೆ ಎಂಬುದನ್ನು ಗಮನಿಸಬೇಕಾದ ಅಂಶ.

ಆದರೆ ಚೀನಾ 'ಅಧಿಕೃತವಾಗಿ' ತನ್ನ GDP ಯ ಶೇ 1.8ರಷ್ಟನ್ನು ಅನ್ನು ರಕ್ಷಣೆಗಾಗಿ ವ್ಯಯಿಸುತ್ತದೆ. ಚೀನಾದ ಜಿಡಿಪಿ ಭಾರತಕ್ಕಿಂತ ಐದು ಪಟ್ಟು ಹೆಚ್ಚಿದೆ. ನಾಗರಿಕ ಮತ್ತು ಮಿಲಿಟರಿ ತಂತ್ರಜ್ಞಾನಗಳಲ್ಲಿ ದ್ವಿ-ಬಳಕೆಯ ಹೂಡಿಕೆಗಳು ಮತ್ತು ಕಾರ್ಯತಂತ್ರದ ಮೂಲಸೌಕರ್ಯಗಳ ಸೃಷ್ಟಿ. SIPRI (ಸ್ಟಾಕ್ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್) ಪ್ರಕಾರ, ಜಾಗತಿಕ ಸರಾಸರಿಯು GDP ಯ ಸುಮಾರು ಶೇ 1.8 ಆಗಿದೆ.

ಮಿಲಿಟರಿ ಶಕ್ತಿಯಾಗಲು ಅಮೆರಿಕಕ್ಕೆ ಚೀನಾ ಪೈಪೋಟಿ: ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇ ಆದ ಬೆದರಿಕೆಗಳು ಮತ್ತು ಆಂತರಿಕ ಭದ್ರತೆ ಅಗತ್ಯತೆಗಳಿವೆ ಎಂಬುದರಲ್ಲಿ ಸಂದೇಹವಿಲ್ಲ. ಅಮೆರಿಕ ಜಾಗತಿಕ ಮಿಲಿಟರಿ ಶಕ್ತಿಯಾಗಿ ಉಳಿದುಕೊಳ್ಳಲು ಸದಾ ಯೋಚಿಸುತ್ತಿರುತ್ತದೆ. ಇನ್ನು ಚೀನಾವು ಅಮೆರಿಕದ ಸರಿಸಮವಾಗಿ ತನ್ನ ಮಿಲಿಟರಿ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಲು ಮತ್ತು ತೈವಾನ್ ಮರಳಿ ಪಡೆಯುವತ್ತ ಗಮನಹರಿಸುತ್ತಿದೆ.

ಭಾರತದ ಸಾಮಾಜಿಕ ಮತ್ತು ಮೂಲಸೌಕರ್ಯ ಅಭಿವೃದ್ಧಿ ಅಗತ್ಯಗಳನ್ನ ಪೂರೈಸಲು ಹೆಚ್ಚಿನ ಒತ್ತು ನೀಡಬೇಕಾಗಿದೆ. ಏಕಕಾಲದಲ್ಲಿ ಒಂದು ರಾಷ್ಟ್ರವು ಆಂತರಿಕವಾಗಿ ಮತ್ತು ಬಾಹ್ಯವಾಗಿ ಸುರಕ್ಷಿತವಾಗಿರದಿದ್ದರೆ ಆ ರಾಷ್ಟ್ರ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸಲು ಸಾಧ್ಯವಿಲ್ಲ. ಈ ಅಗತ್ಯಗಳನ್ನು ಸಮತೋಲನಗೊಳಿಸುವುದು ಸರ್ಕಾರದ ಕೆಲಸವಾಗಿದೆ ಮತ್ತು ಸವಾಲು ಕೂಡಾ ಹೌದು.

ರಕ್ಷಣಾ ಬಂಡವಾಳಕ್ಕೆ ಶೇ 27 ರಷ್ಟು ಹಣ ಮೀಸಲು; ರಕ್ಷಣಾ ಬಂಡವಾಳಕ್ಕೆ ಬಜೆಟ್​​ ನಲ್ಲಿ 1,85,000 ಕೋಟಿ ರೂ. ನಿಗದಿಪಡಿಸಲಾಗಿದೆ, ಇದು ಒಟ್ಟು ರಕ್ಷಣಾ ಹಂಚಿಕೆಯ ಶೇ27ರಷ್ಟು ಪಾಲನ್ನು ಹೊಂದಿದೆ. ಇದರಿಂದ ಪಡೆಗಳ ಆಧುನೀಕರಣಕ್ಕೆ ಅಂದಾಜು 1,50,000 ಕೋಟಿ ರೂ ಲಭ್ಯವಾಗಲಿದೆ. ಇದರೊಳಗೆ ವಿಮಾನ ಮತ್ತು ಏರೋ ಇಂಜಿನ್‌ಗಳ ಖರೀದಿಗೆ 48,614 ಕೋಟಿ ರೂ., ನೌಕಾ ಶಕ್ತಿ ಹೆಚ್ಚಿಸಲು 24,390 ಕೋಟಿ ರೂ ವಿನಿಯೋಗಿಸಲಾಗುತ್ತದೆ. ಇತರ ಉಪಕರಣಗಳಿಗೆ 63,099 ಕೋಟಿ ರೂ. ಜೊತೆಗೆ R&D ಮತ್ತು ಮೂಲಸೌಕರ್ಯ ಕ್ಕಾಗಿ 31,000 ಕೋಟಿ ರೂ. ಬಳಕೆ ಮಾಡಿಕೊಳ್ಳಲಾಗುತ್ತದೆ.ಹಾಗೆ ನೋಡಿದರೆ ಆಧುನಿಕರಣಕ್ಕೆ ಮೀಸಲಾದ ಹಣ ಕಡಿಮೆಯೇ ಎಂದು ಹೇಳಬಹುದು.

ರಕ್ಷಣಾ ಸಚಿವಾಲಯವು ಹಿಂದಿನ ವರ್ಷದ ತನ್ನ ನಿಯೋಜಿತ ಬಂಡವಾಳದ ಬಜೆಟ್‌ನಿಂದ 12,500 ಕೋಟಿ ರೂ.ಗಳನ್ನು ಬಳಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬ ವರದಿಗಳೂ ಇವೆ. ಈ ವರ್ಷದ ಬಜೆಟ್ ವಿವಿಧ ಇಲಾಖೆಗಳ ಅಡಿ ಆರ್ ಮತ್ತು ಡಿಗೆ ಮೀಸಲಿಟ್ಟ ಮೊತ್ತವನ್ನು ಹೆಚ್ಚಿಸಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ ಈ ಹಿಂದೆ 6-8000 ಕೋಟಿ ರೂ.ಗಳಷ್ಟಿದ್ದ ಅನುದಾನ ಈ ಸಲ 20,000 ಕೋಟಿ ರೂ.ಗೆ ಏರಿಕೆಯಾಗಿದೆ. ಡಿಆರ್‌ಡಿಒ ಬಜೆಟ್ ಸುಮಾರು 12.5% ​​ರಷ್ಟು ಏರಿಕೆ ಕಂಡು 26,816 ಕೋಟಿ ರೂ.ಗೆ ತಲುಪಿದೆ. ಖಾಸಗಿ ಉದ್ಯಮಗಳ ಹೂಡಿಕೆಯನ್ನು ಉತ್ತೇಜಿಸಲು ಮತ್ತು ಸ್ಟಾರ್ಟ್‌ಅಪ್‌ಗಳನ್ನು ಬಲಪಡಿಸಲು ಉದ್ದೇಶಿಸಿರುವ ಐಡೆಕ್ಸ್ ಯೋಜನೆಗೆ 450 ಕೋಟಿ ರೂ. ಮೀಸಲು ಇಡಲಾಗಿದೆ. ಆದಾಗ್ಯೂ R ಮತ್ತು D ನಲ್ಲಿನ ಭಾರತದ ಒಟ್ಟಾರೆ ಹೂಡಿಕೆಯು GDP ಯ ಶೇ 1 ಕ್ಕಿಂತ ಕಡಿಮೆ ಇದೆ. ಅಮೆರಿಕ ಸುಮಾರು ಶೇ 3.4 ರಷ್ಟನ್ನು ಈ ಸಂಬಂಧ ಬಳಕೆ ಮಾಡಿಕೊಳ್ಳುತ್ತದೆ.

ಇದನ್ನು ಓದಿ:ಕೇಂದ್ರ ಬಜೆಟ್ 2025: ಸ್ಟಾರ್ಟ್​ಅಪ್​ಗಳಿಗೆ ₹10 ಸಾವಿರ ಕೋಟಿ ನಿಧಿ ಯೋಜನೆ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.