ETV Bharat / technology

ಸ್ಕ್ವಿಡ್ ಗೇಮ್​: ಅನ್ಲೀಶ್ಡ್, ನೆಟ್​ಫ್ಲಿಕ್ಸ್​ ಸಬ್​ಸ್ಕ್ರೈಬರ್​ ಅಲ್ಲದಿದ್ದರೂ ಸಹ ಫ್ರೀ, ಗೆಲ್ಲಬಹುದು ನಗದು ಬಹುಮಾನ! - SQUID GAME UNLEASHED FREE

Squid Game Unleashed Free: ಇದೇ ಮೊದಲ ಬಾರಿಗೆ ಸ್ಕ್ವಿಡ್ ಗೇಮ್​: ಅನ್ಲೀಶ್ಡ್ ಗೇಮ್​ ಅನ್ನು ನೆಟ್​ಫ್ಲಿಕ್ಸ್​ ಎಲ್ಲರಿಗೂ ಉಚಿತವಾಗಿ ನೀಡುತ್ತಿದೆ. ಈ ಗೇಮ್​ ಮೂಲಕ ನೀವು ನಗದು ಬಹುಮಾನ ಸಹ ಗೆಲ್ಲಬಹುದಾಗಿದೆ.

SQUID GAME SESSION 2  SQUID GAME NEWS  SQUID GAME MOBILE GAME
ಸ್ಕ್ವಿಡ್ ಗೇಮ್​: ಅನ್ಲೀಶ್ಡ್, (Netflix)
author img

By ETV Bharat Tech Team

Published : 12 hours ago

Squid Game Unleashed Free: ಪ್ರಪ್ರಥಮ ಬಾರಿಗೆ ನೆಟ್‌ಫ್ಲಿಕ್ಸ್ ತನ್ನ ಪಾರ್ಟಿ ರಾಯಲ್ ಗೇಮ್ 'ಸ್ಕ್ವಿಡ್ ಗೇಮ್ ಅನ್‌ಲೀಶ್ಡ್' ಅನ್ನು ಎಲ್ಲರಿಗೂ ಸೀಮಿತ ಅವಧಿಗೆ ಉಚಿತವಾಗಿ ಲಭ್ಯವಾಗುವಂತೆ ಮಾಡಿದೆ. ನೀವು ನೆಟ್‌ಫ್ಲಿಕ್ಸ್ ಸದಸ್ಯರಾಗಿದ್ದರೂ ಅಥವಾ ಆಗದಿದ್ರೂ ಸಹ ಈ ಗೇಮ್​ ಎಲ್ಲರಿಗೂ ಉಚಿತವಾಗಿ ಆಡಬಹುದಾಗಿದೆ. ಎಲ್ಲ ನೆಟ್‌ಫ್ಲಿಕ್ಸ್ ಆಟಗಳಂತೆ ಸ್ಕ್ವಿಡ್ ಗೇಮ್: ಅನ್‌ಲೀಶ್ಡ್ ಸಹ ಯಾವುದೇ ಜಾಹೀರಾತುಗಳು ಅಥವಾ ಅಪ್ಲಿಕೇಶನ್‌ನಲ್ಲಿನ ಸಬ್​ಸ್ಕ್ರೈಬರ್ ಅಲ್ಲದಿದ್ದರೂ ಮೂಡಿ ಬರುತ್ತದೆ ಎಂದು ನೆಟ್​ಫ್ಲಿಕ್ಸ್​ ಹೇಳಿದೆ.

ಸ್ಕ್ವಿಡ್ ಗೇಮ್ ನೆಟ್‌ಫ್ಲಿಕ್ಸ್‌ನ ಅತಿ ಹೆಚ್ಚು ವೀಕ್ಷಿಸಿದ ಸೀರಿಸ್​ ಆಗಿದೆ. ಅನ್‌ಲೀಶ್ಡ್ ಅನ್ನು ಎಲ್ಲರಿಗೂ ಉಚಿತವಾಗಿ ಲಭ್ಯವಾಗುವಂತೆ ಮಾಡುವ ಮೂಲಕ ಪ್ರಪಂಚದಾದ್ಯಂತದ ಪ್ರತಿಯೊಬ್ಬರೂ ಅದರಲ್ಲಿ ಪಾಲ್ಗೊಳ್ಳಲು ನಾವು ಬಯಸುತ್ತೇವೆ. ಇದು ನೆಟ್‌ಫ್ಲಿಕ್ಸ್ ಗೇಮ್‌ಗಳಲ್ಲಿ ನಮ್ಮ ಮೊದಲನೆ ಪ್ರಯತ್ನ ಎಂದು ನೆಟ್‌ಫ್ಲಿಕ್ಸ್‌ನ ಗೇಮ್ಸ್ ಅಧ್ಯಕ್ಷ ಅಲೈನ್ ಟಾಸ್ಕನ್ ಹೇಳಿದ್ದಾರೆ.

ಸ್ಕ್ವಿಡ್ ಗೇಮ್: ಅನ್‌ಲೀಶ್ಡ್ ಎನ್ನುವುದು ಗ್ಲಾಸ್ ಬ್ರಿಡ್ಜ್ ಮತ್ತು ರೆಡ್ ಲೈಟ್ ಹಾಗೂ ಗ್ರೀನ್ ಲೈಟ್‌ನಂತಹ ಸರಣಿಯ ಸಾಂಪ್ರದಾಯಿಕ ಆಟಗಳಲ್ಲಿ ನಿಮ್ಮ ಸ್ನೇಹಿತರೊಂದಿಗೆ (ಅಥವಾ ವಿರುದ್ಧವಾಗಿ) ಆಡುವುದಾಗಿದೆ. ಆದ್ದರಿಂದ ನಾವು ಈ ರಜಾದಿನಗಳಲ್ಲಿ ಎಲ್ಲರನ್ನು ಆಹ್ವಾನಿಸುತ್ತಿದ್ದೇವೆ ಎಂದು ಟಾಸ್ಕನ್​ ಹೇಳಿದರು.

ಸ್ಕ್ವಿಡ್ ಗೇಮ್: ಅನ್‌ಲೀಶ್ಡ್ ಅನ್ನು ಸಿದ್ಧಗೊಳಿಸಲು ಹಲವಾರು ವರ್ಷಗಳಿಂದಲೂ ನಮ್ಮ ತಂಡ ಕಾರ್ಯ ನಿರತರಾಗಿತ್ತು. ಅದನ್ನು ರೆಡಿ ಮಾಡುವುದು ಸವಾಲಿನ ಪ್ರಕ್ರಿಯೆಯಾಗಿದೆ ಎಂದು ಬಿಲ್ ಜಾಕ್ಸನ್ ವಿವರಿಸಿದರು. ನಮ್ಮ ತಂಡವು ಶೋ ಅಥವಾ ಗೇಮ್​ ಅನ್ನು ಆಟಕ್ಕೆ ಹೇಗೆ ಸಂಪರ್ಕಿಸುವುದು ಎಂಬುದರ ಕುರಿತು ಚರ್ಚಿಸಲು ಸಾಕಷ್ಟು ಸಮಯ ಕಳೆದಿದೆ. ಇದರ ಮುಖ್ಯ ಉದ್ದೇಶ ಎಂದರೆ ಜನರು ಶೋವನ್ನು ವೀಕ್ಷಿಸಿದಾಗ ಅವರು ಆಟವನ್ನು ಆಡಲು ಪ್ರೇರಿತರಾಗಬಹುದು ಅಥವಾ ಅವರು ಆಡುವಾಗ ಅವರು ಶೋವನ್ನು ವೀಕ್ಷಿಸಲು ಉತ್ಸುಕರಾಗುತ್ತಾರೆ ಅಥವಾ ಸ್ಕ್ವಿಡ್ ಆಟದೊಂದಿಗೆ ತೊಡಗಿಸಿಕೊಳ್ಳಲು ಇತರ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ ಎಂದು ಗೇಮ್​ ನಿರ್ದೇಶಕ ಜಾಕ್ಸನ್​ ಹೇಳುತ್ತಾರೆ.

ಇದು ನಿಜವಾಗಿಯೂ ಶೋ ಅಥವಾ ಸೀರಿಸ್​ ಬಗ್ಗೆ ಪರಿಚಯವಿಲ್ಲದ ಜನರನ್ನು ಅಥವಾ ನಮ್ಮ ಆಟಗಳನ್ನು ಪ್ರಯತ್ನಿಸದ ಜನರನ್ನು ಕರೆತರುವುದಾಗಿದೆ. ಅಷ್ಟೇ ಅಲ್ಲ ಅದನ್ನು ಆಡಲು ಅವಕಾಶ ನೀಡುವುದಾಗಿದೆ. ಸದ್ಯ ರಜಾದಿನಗಳಲ್ಲಿ ಜನರನ್ನು ಆಕರ್ಷಿಸಲು ಇದು ನಮಗೆ ಒಳ್ಳೆಯ ಸಮಯ ಎಂದು ನಾನು ಭಾವಿಸುತ್ತೇನೆ ಅಂತಾ ಜಾಕ್ಸನ್​ ಹೇಳಿದರು.

ಜನರು ನೋಡದ ಕೆಲವು ಆಟಗಳು ಸ್ಕ್ವಿಡ್ ಗೇಮ್ ಸೀಸನ್ 2 ನಲ್ಲಿ ಕಾಣಿಸಿಕೊಳ್ಳುತ್ತವೆ ಮತ್ತು ಅವುಗಳಲ್ಲಿ ಕೆಲವು ನಮ್ಮ ಆಟದಲ್ಲಿ ಸೇರಿಸಲಾಗುತ್ತದೆ. ಗೇಮ್​ನಲ್ಲಿ ನೀವು ನೋಡುವ ಎಲ್ಲವನ್ನೂ ಅದು ಪ್ರಸಾರವಾದ ನಂತರ ನಮ್ಮ ಆಟದಲ್ಲಿ ಸೇರಿಸಲಾಗುತ್ತದೆ. ಆಟ ಮತ್ತು ಶೋ ನಡುವೆ ನಾವು ಕ್ರಾಸ್​-ಕಾಲೋನೈಜೆಶನ್​ ರಚಿಸುವ ಇನ್ನೊಂದು ಮಾರ್ಗವಾಗಿದೆ ಎಂದು ಹೇಳಿದರು.

ಸ್ಕ್ವಿಡ್ ಗೇಮ್ ಸೀಸನ್ 2 ರ ಪಾತ್ರವರ್ಗವು ಲೀ ಜಂಗ್-ಜೇ, ಲೀ ಬ್ಯುಂಗ್-ಹನ್, ವೈ ಹಾ-ಜುನ್ ಮತ್ತು ಗಾಂಗ್ ಯೂ ಅವರಂತಹ ಕೆಲವು ಪರಿಚಿತ ಮುಖಗಳನ್ನು ಕಾಣಬಹುದು. ಶೋನಲ್ಲಿ ಯಿಮ್ ಸಿ-ವಾನ್, ಕಾಂಗ್ ಹಾ-ನೆಲ್, ಪಾರ್ಕ್ ಗ್ಯು-ಯಂಗ್, ಲೀ ಜಿನ್-ಯುಕ್, ಪಾರ್ಕ್ ಸುಂಗ್-ಹೂನ್, ಯಾಂಗ್ ಡಾಂಗ್-ಗೆನ್, ಕಾಂಗ್ ಏ-ಸಿಮ್, ಲೀ ಡೇವಿಡ್, ಚೋಯ್ ಸೆಯುಂಗ್-ಹ್ಯುನ್, ರೋಹ್ ಜೇ-ವಾನ್ ನಟಿಸಿದ್ದಾರೆ , ಜೋ ಯು-ರಿ ಮತ್ತು ವಾನ್ ಜಿ-ಆನ್ ಅವರಂತಹ ಹೊಸ ಆಟಗಾರರನ್ನು ಸಹ ಸೇರಿಸಲಾಗುತ್ತದೆ ಎಂದು ಜಾಕ್ಸನ್​ ಹೇಳಿದರು.

ಆಟಗಾರರು ಅವರು ವೀಕ್ಷಿಸುವ ಪ್ರತಿ ಸಂಚಿಕೆಗೆ ಆಟದಲ್ಲಿ ಬಹುಮಾನಗಳನ್ನು ಗಳಿಸಬಹುದು. ಈ ಬಹುಮಾನಗಳು ನಗದು, ಟೋಕನ್‌ಗಳು, ಓಪನ್ ಮಿಸ್ಟರಿ ಬಾಕ್ಸ್‌ಗಳು ಮತ್ತು ಇತರ ವಿಶೇಷ ವಸ್ತುಗಳನ್ನು ಒಳಗೊಂಡಿರುತ್ತವೆ. ಆಟಗಾರರು ತಮ್ಮ ಬದ್ಧತೆಯನ್ನು ತೋರಿಸಲು ವಿಶೇಷ "ಬಿಂಜ್ ವಾಚರ್" ಸ್ಕಿನ್​ ಸಹ ಸ್ವೀಕರಿಸುತ್ತಾರೆ. ಅಷ್ಟೇ ಅಲ್ಲ ಗೇಮ್​ನ ನಿರ್ದೇಶಕ ಬಿಲ್ ಜಾಕ್ಸನ್ ಇದೊಂದು ದೊಡ್ಡ ಕ್ಷಣ ಎಂದು ಕರೆದಿದ್ದಾರೆ. ಹೊಸ ಸೀಸನ್​ನೊಂದಿಗೆ ನಾವು ಇದನ್ನು ಪ್ರಾರಂಭಿಸಲು ರೋಮಾಂಚನಗೊಂಡಿದ್ದೇವೆ ಎಂದು ಹೇಳಿದರು.

ಬಹುಮಾನದ ವಿವರ: ಮೊದಲ ಇನ್-ಗೇಮ್ ಬಹುಮಾನವನ್ನು ಎಲ್ಲಾ ಆಟಗಾರರಿಗೆ ಉಚಿತವಾಗಿ ನೀಡಲಾಗುತ್ತದೆ. ಬಹುಮಾನವನ್ನು ಅನ್‌ಲಾಕ್ ಮಾಡಲು ಸೀಸನ್ 2 ನ ಯಾವುದೇ ಸಂಚಿಕೆಗಳನ್ನು ವೀಕ್ಷಿಸುವ ಅಗತ್ಯವಿಲ್ಲ ಎಂದು ನೆಟ್​ಫ್ಲಿಕ್ಸ್​ ಹೇಳುತ್ತದೆ.

  • ಬಹುಮಾನ 1: 15 ಸಾವಿರ ನಗದು
  • ಬಹುಮಾನ 2: ವೀಕ್ಷಿಸಲಾದ ಒಂದು ಸಂಚಿಕೆಗೆ 20 ವೈಲ್ಡ್ ಟೋಕನ್‌ಗಳು..
  • ವೀಕ್ಷಿಸಿದ ಎರಡನೇ ಸಂಚಿಕೆಗೆ ಬಹುಮಾನ 3: 20 ಸಾವಿರ ನಗದು..
  • ಬಹುಮಾನ 4: ವೀಕ್ಷಿಸಲಾದ ಮೂರನೇ ಸಂಚಿಕೆಗಾಗಿ 25 ವೈಲ್ಡ್ ಟೋಕನ್‌ಗಳು..
  • ವೀಕ್ಷಿಸಿದ ನಾಲ್ಕನೇ ಸಂಚಿಕೆಗೆ ಬಹುಮಾನ 5: 25 ಸಾವಿರ ನಗದು..
  • ಬಹುಮಾನ 6: ವೀಕ್ಷಿಸಲಾದ ಐದನೇ ಸಂಚಿಕೆಗಾಗಿ 50 ವೈಲ್ಡ್ ಟೋಕನ್‌ಗಳು..
  • ಬಹುಮಾನ 7: ವೀಕ್ಷಿಸಿದ ಆರನೇ ಸಂಚಿಕೆಗೆ 50 ಸಾವಿರ ನಗದು..
  • ಬಹುಮಾನ 8: ಏಳನೇ ಸಂಚಿಕೆಗಾಗಿ ಬಿನ್ನಿ ಬಿಂಗೆ-ವಾಚರ್​ ಔಟ್​ಫಿಟ್​ ವೀಕ್ಷಿಸಲಾಗುತ್ತದೆ. (ಕೆಳಗಿನ ಔಟ್​ಫಿಟ್​ ಚಿತ್ರವನ್ನು ನೋಡಿ.)

ಓದಿ: Ola ಎಸ್​1 ಪ್ರೊ ಸೋನಾ ಎಡಿಷನ್​ ರೀವಿಲ್​: 24ಕೆ ಚಿನ್ನದ ಲೇಪನದೊಂದಿಗೆ ಸಿದ್ಧಗೊಂಡಿದೆ ಈ ಸ್ಕೂಟರ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.